ಕಲ್ಯಾಣ ಯೋಜನೆಗಳಿಗಾಗಿ ಡಿ.31ರವರೆಗೆ ಆಧಾರ್ ಬಳಸಲು ಕೇಂದ್ರದ ಸೂಚನೆ

ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ನೋಂದಣಿ ಮಾಡಿ ಡಿಸೆಂಬರ್ 31ರವರೆಗೂ ಅದರ ಸದುಪಯೋಗ ಪಡೆಯಲು ಕೇಂದ್ರ ಸರ್ಕಾರ ತನ್ನ ಗಡುವು ವಿಸ್ತರಿಸಿದೆ. 

Last Updated : Aug 30, 2017, 12:18 PM IST
ಕಲ್ಯಾಣ ಯೋಜನೆಗಳಿಗಾಗಿ ಡಿ.31ರವರೆಗೆ ಆಧಾರ್ ಬಳಸಲು ಕೇಂದ್ರದ ಸೂಚನೆ title=

ನವದೆಹಲಿ : ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ನೋಂದಣಿ ಮಾಡಿ ಡಿಸೆಂಬರ್ 31ರವರೆಗೂ ಅದರ ಸದುಪಯೋಗ ಪಡೆಯಲು ಕೇಂದ್ರ ಸರ್ಕಾರ ತನ್ನ ಗಡುವು ವಿಸ್ತರಿಸಿದೆ. 

ಜೂನ್ 27 ರಂದು ಸಾಮಾಜಿಕ ಪ್ರಯೋಜನಕ್ಕಾಗಿ ಆಧಾರ್ ಕಡ್ಡಾಯದ ಗಡುವು ಜೂನ್ 30 ರಿಂದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು. ಇದೀಗ, ಕೇಂದ್ರ ಸರ್ಕಾರ ಅಂತಿಮ ದಿನಾಂಕವನ್ನು ಡಿ.31ರವರೆಗೂ ಗಡುವು ವಿಸ್ತರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

ಆಧಾರ್ ಸಂಬಂಧದ ಎಲ್ಲಾ ಅರ್ಜಿಗಳನ್ನು ನವೆಂಬರ್ ಮೊದಲ ವಾರದಲ್ಲಿ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ ಎಂದು ಅಟಾರ್ನಿ ಜನರಲ್ ಕೆ.ವೇಣುಗೋಪಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಗಸ್ಟ್ 24 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಸಂವಿಧಾನದ ಅಡಿಯಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಯುಐಡಿಎಐ (ವಿಶಿಷ್ಟ ಗುರುತಿನ ಪ್ರಾಧಿಕಾರ) ಪಾನ್ ಕಾರ್ಡನ್ನು ಆಧಾರ್ ನೊಂದಿಗೆ ಸಂಪರ್ಕಿಸುವುದನ್ನು ಕಡ್ಡಾಯ ಮಾಡಿದೆ. 

ಆದರೆ ಆಧಾರ್ ಅಧಿನಿಯಮಗಳಾದ ಆಧಾರ್ ಆಕ್ಟ್, ಆದಾಯ ತೆರಿಗೆ ಆಕ್ಟ್ ಅಥವಾ ಮಣಿ ಲಾಂಡರಿಂಗ್ ನಿಯಮಗಳ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ಯಾವುದೇ ತೀರ್ಪನ್ನು ನೀಡಿಲ್ಲ ಎಂದು ಕೆ.ವೇಣುಗೋಪಾಲ್ ತಿಳಿಸಿದ್ದಾರೆ.

Trending News