ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಸಮಯೋಚಿತ ಅರ್ಧಶತಕ (54) ಗಳಿಸುವ ಮೂಲಕ ಕೆಕೆಆರ್ಗೆ ಭದ್ರ ಅಡಿಪಾಯ ಹಾಕಿಕೊಟ್ಟರು. 51ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಕೋಲ್ಕತ್ತ ಸಂಕಷ್ಟಕ್ಕೆ ಸಿಲುಕಿತ್ತು. ಸುನಿಲ್ ನರೈನ್ (2), ವೆಂಕಟೇಶ್ ಅಯ್ಯರ್ (7), ನಾಯಕ ಶ್ರೇಯಸ್ ಅಯ್ಯರ್ (0) ಮತ್ತು ನಿತೀಶ್ ರಾಣಾ (9) ಪೆವಿಲಿಯನ್ ಸೇರಿಕೊಂಡರು.
ಇದನ್ನು ಓದಿ : IPL 2024 : ಟಾಸ್ ಗೆದ್ದ ಹೈದರಾಬಾದ್, ಕೊಲ್ಕತ್ತಾ ಪಡೆಯನ್ನು ಬ್ಯಾಟಿಂಗ್ ಗೆ ಇಳಿಸಿದ SRH
ಈ ಹಂತದಲ್ಲಿ ರಮನ್ದೀಪ್ ಸಿಂಗ್ ಅವರೊಂದಿಗೆ ಸೇರಿಕೊಂಡ ಫಿಲಿಪ್ ಐದನೇ ವಿಕೆಟ್ 54 ರನ್ಗಳ ಜೊತೆಯಾದಲ್ಲಿ ಭಾಗಿಯಾದರು. ರಮನ್ದೀಪ್ 17 ಎಸೆತಗಳಲ್ಲಿ 35 ರನ್ (1 ಬೌಂಡರಿ, 4 ಸಿಕ್ಸರ್) ಗಳಿಸಿದರು. ಮತ್ತೊಂದೆಡೆ ಆಕರ್ಷಕ ಇನಿಂಗ್ಸ್ ಕಟ್ಟಿದ ಸಾಲ್ಟ್ 40 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ಗಳ ನೆರವಿನಿಂದ 54 ರನ್ ಗಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ರಸೆಲ್ ಹಾಗೂ ರಿಂಕು ಸಿಂಗ್, ಹೈದರಾಬಾದ್ ಬೌಲರ್ಗಳನ್ನು ದಂಡಿಸಿದರು. ರಿಂಕು ಹಾಗೂ ರಸೆಲ್ ಏಳನೇ ವಿಕೆಟ್ಗೆ 81 ರನ್ ಪೇರಿಸಿದರು. ರಿಂಕು 15 ಎಸೆತಗಳಲ್ಲಿ 23 ರನ್ (3 ಬೌಂಡರಿ) ಗಳಿಸಿದರು.
ಅಂತಿಮವಾಗಿ ಕೆಕೆಆರ್ ಏಳು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.
209 ರನ್ ಗಳ ಗೆಲುವಿನ ಗುರಿಯನ್ನು ಸಾಧಿಸುವ ಭರದಲ್ಲಿ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಬ್ಯಾಟ್ಸ್ಮ್ಯಾನ್ ಗಳಾಗಿ ಮಯಂಕ್ ಅಗರ್ವಾಲ್, ಅಭಿಷೇಕ್ ಶರ್ಮ ಕಣಕ್ಕಿಳಿದರು.
ಇದನ್ನು ಓದಿ : UPSC Recruitment 2024: 2,253 ಹುದ್ದೆಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಿ
ಮಾಯಂಕ ಅಗರ್ವಾಲ್ 32(21), ಅಭಿಷೇಕ್ ಶರ್ಮ 32(19), ರಾಹುಲ್ ತ್ರಿಪಾಠಿ 20(20), ಐಡೆನ್ ಮಾರ್ಕ್ರಾಮ್ 18(13) ರನ್ ಗಳಿಸಿದ್ದು, ಸದ್ಯಕ್ಕೆ ಹೆನ್ರಿಕ್ ಕ್ಲಾಸಿನ ಮತ್ತು ಅಬ್ದುಲ್ ಸಮ್ಮದ್ ಕಣದಲ್ಲಿದ್ದು, ತಂಡವು ಗೆಲುವಿನ ಗುರಿಯನ್ನು ಸಾಧಿಸುವಡೆಗೆ ತನ್ನ ಆಟವನ್ನು ಆಡುತ್ತಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ