Lunar Eclipse 2024 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಹೋಳಿ ಹುಣ್ಣಿವೆಯ ದಿನ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರ ಗ್ರಹಣದಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)
Lunar Eclipse 2024 And Holi 2024: ವೈದಿಕ ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಕಾಲಕಾಲಕ್ಕೆ ಚಂದ್ರ ಗ್ರಹಣ ಹಾಗೂ ಸೂರ್ಯ ಗ್ರಹಣಗಳು ಸಂಭವಿಸುತ್ತವೆ ಮತ್ತು ಈ ಗ್ರಹಣಗಳು ಕೆಲ ರಾಶಿಗಳ (Zodiac Signs) ಜನರ ಮೇಲೆ ಶುಭ ಪ್ರಭಾವಗಳನ್ನು ಬೀರಿದರೆ, ಕೆಲವು ಅಶುಭ ಪ್ರಬಾವಗಳನ್ನು ಬೀರುತ್ತವೆ. ವರ್ಷ 2024ರಲ್ಲಿ ಹೋಳಿ ಹುಣ್ಣಿವೆ ದಿನ ಚಂದ್ರ ಗ್ರಹಣ ಗೋಚರಿಸಲಿದೆ. ಈ ವರ್ಷ ಮಾರ್ಚ್ 25, 2024 ರಂದು ಹೋಳಿಹುಣ್ಣಿವೆ (Holi 2024) ಹಬ್ಬವನ್ನು ಆಚರಿಸಲಾಗುತ್ತಿದೆ, ಆ ದಿನವೇ ಚಂದ್ರ ಗ್ರಹಣ ಕೂಡ ಇರಲಿದ್ದು, ಬೆಳಗ್ಗೆ 10 ಗಂಟೆ 23 ನಿಮಿಷದಿಂದ ಮದ್ಯಾಹ್ನ 3 ಗಂಟೆ 2 ನಿಮಿಷದವರೆಗೆ ಗ್ರಹಣ ಕಾಲ ಇರಲಿದೆ (Holi festival and lunar eclipse 2024 timing). ಹೀಗಿರುವಾಗ ಈ ಚಂದ್ರ ಗ್ರಹಣದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ (Lucky Zodiac Signs) ಜನರ ಮೇಲೆ ಇರಲಿದೆ. ಆದರೆ, ಮೂರು ರಾಶಿಗಳ ಜನರ ಜೀವನದಲ್ಲಿ ಈ ಚಂದ್ರಗ್ರಹಣ ಸುವರ್ಣಕಾಲ ಆರಂಭಿಸಲಿದೆ, ಜೀವನದಲ್ಲಿ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯವನ್ನು ಕರುಣಿಸಲಿದೆ. (Spiritual News In Kannada)
ಇದನ್ನೂ ನೋಡಿ-Holi 2024: ವಿಶ್ವದ ಈ ದೇಶಗಳಲ್ಲಿಯೂ ಕೂಡ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮೇಷ ರಾಶಿ: ಈ ಬಾರಿಯ ಚಂದ್ರ ಗ್ರಹಣ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಇದರಿಂದ ನಿಮ್ಮ ಭಾಗ್ಯೋದಯ ಪಕ್ಕಾ ಎನ್ನಲಾಗುತ್ತಿದೆ. ನೀವು ಅಂದುಕೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಆಕಸ್ಮಿಕ ಧನಲಾಭವಾಗಲಿದ್ದು, (Holi festival and lunar eclipse 2024 astrology)
ಇದಲ್ಲದೆ ಮೇಷ ರಾಶಿಯ ಜಾತಕದವರಿಗೆ ಕೆಲಸದಲ್ಲಿಯೂ ಕೂಡ ಉತ್ತಮ ಯಶಸ್ಸು ಸಿಗುವ ಉನ್ನತ ಸಂಕೇತಗಳಿವೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಮಧುರತೆ ಇರಲಿದ್ದು, ಚಂದ್ರ ಗ್ರಹಣದ ಬಳಿಕ ಮಕ್ಕಳ ಕಡೆಯಿಂದ ನಿಮಗೆ ಶುಭ ಸುದ್ದಿ ಪ್ರಾಪ್ತಿಯಾಗಬಹುದು. (chandra grahan 2024 in india date and time in kannada)
ಕರ್ಕ ರಾಶಿ: ಕರ್ಕ ರಾಶಿಯ ಜನರ ಪಾಲಿಗೆ ಈ ಚಂದ್ರಗ್ರಹಣ ಸಾಕಷ್ಟು ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ನೀವು ಪ್ರಾಪರ್ಟೀ, ವಾಹನ ಖರೀದಿಸುವ ಸಾಧ್ಯತೆ ಇದೆ. ಸ್ಥಾನಮಾನದ ಜೊತೆಗೆ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಕಾರ್ಯಕ್ಷೇತ್ರದ ವಿಷಯದಲಿ ಸಂತುಷ್ಟಿ ನಿಮ್ಮದಾಗಲಿದೆ.
ಕರ್ಕ ರಾಶಿಯ ಜಾತಕದವರಿಗೆ ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸನ್ನು ಸಾಧಿಸುವಿರಿ. ವ್ಯಾಪಾರಿಗಳಿಗೂ ಕೂಡ ವ್ಯಾಪಾರದಲ್ಲಿ ಅನುಕೂಲಕರ ಫಲಿತಾಂಶಗಳು ಪ್ರಾಪ್ತಿಯಾಗಲಿವೆ.
ಕನ್ಯಾ ರಾಶಿ: ಚಂದ್ರ ಗ್ರಹಣ ಕನ್ಯಾ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳ ಆರಂಭಕ್ಕೆ ಕಾರಣವಾಗಲಿದೆ. ಈ ಅವಧಿಯಲ್ಲಿ ನಿರುದ್ಯೋಗಿಗಳಿಗೆ ನೌಕರಿಯ ಹೊಸ ಅವಕಾಶಗಳು ಒದಗಿ ಬರಲಿವೆ. ಜೊತೆಗೆ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಕಾಣಲು ಸಿಗಲಿದ್ದು, ಜನರು ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ.
ಕನ್ಯಾ ರಾಶಿಯ ಜನರು ಈ ಅವಧಿಯಲ್ಲಿ ಬಾಳಸಂಗಾತಿಯ ಜೊತೆಗೆ ನಿಮ್ಮ ಸಂಬಂಧದಲ್ಲಿ ಸಾಕಷ್ಟು ಸುಧಾರಣೆಯನ್ನು ನೀವು ಕಾಣಬಹುದು. ಈ ಅವಧಿಯಲ್ಲಿ ನಿಮಗೆ ನಿಮ್ಮ ಪಾಟ್ನರ್ಶಿಪ್ ಕೆಲಸದಲ್ಲಿಯೂ ಕೂಡ ಅಪಾರ ಯಶಸ್ಸು ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)