ನಾನು.. ʼಆʼ ನೋವು ಸಹಿಸಲಾಗದೆ ಬಾಯಿ ಮುಚ್ಚಿಕೊಂಡು ಅಳುತ್ತಿದ್ದೆ..! ಖ್ಯಾತ ನಟಿ ಹೇಳಿಕೆ ವೈರಲ್‌

Divi Vadthya viral : ನಟಿ ದೇವಿ ಸಿನಿಮಾದ ಪ್ರಚಾರದ ವೇಳೆ ಮಾಡಿರುವ ಕೆಲವು ಕಾಮೆಂಟ್‌ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಿನಿಮಾ ಆಫರ್‌ಗಳನ್ನು ಕಳೆದುಕೊಂಡು ಅನುಭವಿಸಿದ ನೋವಿನ ಸಂಗತಿ ಬಹಿರಂಗ ಪಡಿಸಿದ್ದಾರೆ.

Written by - Krishna N K | Last Updated : Mar 15, 2024, 04:18 PM IST
    • ಸ್ಟಾರ್‌ ನಟಿ ದೇವಿ ಹೇಳಿಕೆ ವೈರಲ್‌
    • ಸೋಷಿಯಲ್‌ ಮೀಡಿಯಾದಲ್ಲಿ ದೇವಿ ಹೇಳಿಕೆ ವೈರಲ್‌
    • ನಟಿ ಅನುಭವಿಸಿದ ಕಹಿ ನೋವುಗಳನ್ನು ಹಂಚಿಕೊಂಡಿದ್ದಾರೆ.
ನಾನು.. ʼಆʼ ನೋವು ಸಹಿಸಲಾಗದೆ ಬಾಯಿ ಮುಚ್ಚಿಕೊಂಡು ಅಳುತ್ತಿದ್ದೆ..! ಖ್ಯಾತ ನಟಿ ಹೇಳಿಕೆ ವೈರಲ್‌ title=
Divi Vadthya

Divi Vadthya : ಬಿಗ್ ಬಾಸ್ ತೆಲುಗು 4 ರ ಸ್ಪರ್ಧಿ ನಟಿ ದೇವಿ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಸಿನಿ ಕೆರಿಯರ್‌ನಲ್ಲಿ ಅನುಭವಿಸಿದ ಕಹಿ ನೋವುಗಳನ್ನು ಹಂಚಿಕೊಂಡಿದ್ದಾರೆ.

ಹೌದು.. ದೇವಿ ತೆಲುಗು ಸಿನಿಮಾದ ಸ್ಟಾರ್‌ ನಟಿಯಲ್ಲಿ ಒಬ್ಬರು. ಸೂಪರ್‌ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡರೂ ಸಹ ಈ ಬ್ಯೂಟಿಗೆ ಸರಿಯಾಗಿ ಖ್ಯಾತಿ ಸಿಗಲಿಲ್ಲ. ಮಹೇಶ್‌ ಬಾಬು, ಚಿರಂಜೀವಿ ಸೇರಿದಂತೆ ಹಲವಾರು ದಿಗ್ಗಜ ನಟರ ಚಿತ್ರಗಳಲ್ಲಿ ದೇವಿ ನಟಿಸಿದ್ದಾರೆ.

ಇದನ್ನೂ ಓದಿ:ಅನು ಅಕ್ಕ ಅಳುವಂತೆ ಮಾಡಿದ ಟ್ರೋಲಿಗರಿಗೆ ಬಿಗ್‌ಬಾಸ್‌ ಆನೆ ವಿನಯ್‌ ವಾರ್ನಿಂಗ್‌..!

ಸದ್ಯ ದೇವಿ ಲಂಬಸಿಂಗಿ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಮಾಡಿರುವ ಕೆಲವು ಕಾಮೆಂಟ್‌ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಿನಿಮಾ ಆಫರ್‌ಗಳನ್ನು ಕಳೆದುಕೊಂಡು ಅನುಭವಿಸಿದ ನೋವಿನ ಸಂಗತಿ ಬಹಿರಂಗ ಪಡಿಸಿದ್ದಾರೆ.

ಸಾಕಷ್ಟು ಸಿನಿಮಾ ಆಫರ್‌ಗಳು ಕೈ ಬಿಟ್ಟವು. ಅದರಲ್ಲೂ ರವಿತೇಜಾಗೆ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ರಾತ್ರೋರಾತ್ರಿ ಕೈತಪ್ಪಿತು. ಒಬ್ಬರು ತೆಳ್ಳಗಿದ್ದಾಳೆಂದು ತಿರಸ್ಕರಿಸಿದರೆ, ಮತ್ತೊಬ್ಬರು ದಪ್ಪಗಿದ್ದಾಳೆ ಅಂತ ರಿಜಕ್ಟ್‌ ಮಾಡಿದರು ಎಂದು ದೇವಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ:ನಾನು ಪಿರಿಯಡ್ಸ್‌ ಅದಾಗ್ಲೆ ಹೆಚ್ಚು ಡಾನ್ಸ್‌ ಮಾಡಿದ್ದು..! ಸಾಯಿ ಪಲ್ಲವಿ ಹೇಳಿಕೆ ವೈರಲ್‌

ಅಲ್ಲದೆ, ರವಿತೇಜ ಸಿನಿಮಾದ ವಿಚಾರಕ್ಕೆ ಬಂದರೆ 5 ದಿನದಲ್ಲಿ ಶೂಟಿಂಗ್ ಶುರು ಮಾಡುವುದಾಗಿ ಹೇಳಿ ರಾತ್ರೋರಾತ್ರಿ ಕ್ಯಾನ್ಸಲ್ ಮಾಡಿದರು. ಅವಕಾಶಗಳಿಗಾಗಿ ಹಲವು ಕಛೇರಿಗಳಿಗೆ ಭೇಟಿ ನೀಡಿದ್ದೇನೆ, ಹಲವು ಆಡಿಷನ್‌ಗಳನ್ನು ಎದುರಿಸಿದ್ದೇನೆ. ಇಷ್ಟೆಲ್ಲಾ ನೋವು ಸಹಿಸಲಾಗದೆ ಮನೆಗೆ ಹೋಗಿ ಸ್ನಾನ ಮಾಡಿ ಬಾಯಿ ಮುಚ್ಚಿಕೊಂಡು ಅಳುತ್ತಿದ್ದೆ ಎಂದು ಹೇಳಿದ್ದಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News