What is Black Magic?: ವಾಮಾಚಾರ, ಮಾಟ-ಮಂತ್ರ ಅಂದ್ರೆ ಬಹುತೇಕರು ಬೆಚ್ಚಿಬೀಳುತ್ತಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಬ್ಲ್ಯಾಕ್ ಮ್ಯಾಜಿಕ್ ಎಂದು ಕರೆಯಲ್ಪಡುವ ವಾಮಾಚಾರಕ್ಕೆ ವಿದ್ಯಾವಂತರೂ ಸಹ ಹೆದರುತ್ತಾರೆ. ಹಳ್ಳಿ-ಪಟ್ಟಣ ಸೇರಿದಂತೆ ಎಲ್ಲಾ ಕಡೆಯೂ ಮಾಟ-ಮಂತ್ರ ಮಾಡುವ ಜನರಿದ್ದಾರೆ. ಹಳ್ಳಿಗಳ ಕಡೆ ಮೂರು ದಾರಿ ಕೂಡವ ಜಾಗದಲ್ಲಿ ನಿಂಬೆ ಹಣ್ಣು, ಮೊಟ್ಟೆ, ಬಾಳೆ ಹಣ್ಣು, ಎಲೆ ಇಟ್ಟು ವಾಮಾಚಾರ ಮಾಡಿರುವುದನ್ನು ನೀವು ನೋಡಿಯೇ ಇರುತ್ತೀರಿ. ಹಳ್ಳಿ-ಪಟ್ಟಣದ ಸರ್ಕಲ್ ಬಳಿ ಬ್ಲ್ಯಾಕ್ ಮ್ಯಾಜಿಕ್ ಮಾಡಿರುವ ದೃಶ್ಯವನ್ನು ನೀವು ಗಮನಿಸಿರುತ್ತೀರಿ. ಮೂರು ರಸ್ತೆಗಳು ಕೂಡುವ ಜಾಗದಲ್ಲಿ ನಿರಂತರವಾಗಿ ವಾಮಾಚಾರ ಮಾಡುವ ಜನರಿದ್ದಾರೆ.
ಇಂದಿನ ತಂತ್ರಜ್ನಾನ ಯುಗದಲ್ಲಿಯೂ ಬ್ಲ್ಯಾಕ್ ಮ್ಯಾಜಿಕ್ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಅಂತಾ ಅನೇಕರು ಹೇಳಿಕೊಂಡಿರುವುದನ್ನು ನೀವು ಗಮನಿಸಿರಬೇಕು. ಹಾಗಾದ್ರೆ ಈ ಮಾಟ-ಮಂತ್ರ ಏಕೆ ಮಾಡುತ್ತಾರೆ ಅನ್ನೋದು ನಿಮಗೆ ತಿಳಿದಿದೆಯಾ? ಇದರ ಬಗ್ಗೆ ಇಂದು ನಾವು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಅಷ್ಟಕ್ಕೂ ಈ ವಾಮಾಚಾರ ನಮ್ಮ ಮೇಲೆ ಪರಿಣಾಮವನ್ನುಂಟು ಮಾಡುತ್ತದಾ? ಈ ಪ್ರಶ್ನೆಗೆ ಅನೇಕರು ಹೌದು ಅಂತಾ ಹೇಳಿದ್ರೆ, ಇನ್ನೂ ಕೆಲವರು ಅದೂ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲವೆಂದು ಹೇಳುತ್ತಾರೆ. ಮೂರು ದಾರಿ ಕೂಡುವ ಜಾಗದಲ್ಲಿಯೇ ಈ ವಾಮಾಚಾರ ಮಾಡುವುದು ಏಕೆ..? ಅನ್ನೋ ಪ್ರಶ್ನೆ ನಿಮ್ಮಲ್ಲಿಯೂ ಮೂಡಿಯೇ ಇರುತ್ತದೆ. ಅಮಾವಾಸ್ಯೆ ದಿನದ ರಾತ್ರಿ ಮೂರು ದಾರಿ ಸೇರುವ ಪ್ರದೇಶದಲ್ಲಿ ಸೂಜಿ, ಗೊಂಬೆ, ಲಿಂಬೆಹಣ್ಣು, ಕೆಂಪು ವಸ್ತ್ರ, ಅರಿಶಿಣ, ಕುಂಕುಮ ಹಾಕಿ ರಂಗೋಲಿ ಬಿಡಿಸಿರುತ್ತಾರೆ. ಹಣ್ಣು-ಹಂಪಲು, ಎಲೆ, ಹಣವನ್ನು ಇಟ್ಟು ಪೂಜೆ ಮಾಡಿರುತ್ತಾರೆ. ಈ ರಸ್ತೆಯಲ್ಲಿ ಸಾಗುವ ಬಹುತೇಕರು ಆತಂಕದಲ್ಲಿಯೇ ಸಂಚಾರ ನಡೆಸುತ್ತಾರೆ. ಯಾವುದೇ ಕಾರಣಕ್ಕೂ ಅದನ್ನು ದಾಟಬಾರದು ಅಂತಾ ಹಿರಿಯರು ಮಕ್ಕಳಿಗೆ ಹೇಳುತ್ತಾರೆ.
ಇದನ್ನೂ ಓದಿ: ಕೋಲ್ಡ್ ಕಾಫೀ ಕುಡಿತೀರಾ! ಹಾಗಾದ್ರೆ ಅದರ ಪ್ರಯೋಜನಗಳೇನು ತಿಳಿಯಿರಿ
ಮಾಟ-ಮಂತ್ರ ಮಾಡುವವರ ಪ್ರಕಾರ ಮೂರು ದಾರಿ ಕೂಡುವ ಜಾಗದಲ್ಲಿಯೇ ವಾಮಾಚಾರ ಮಾಡಿದ್ರೆ ಅದು ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ. ಅಮವಾಸ್ಯೆ ದಿನ ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿ, ಅರಿಶಿನ, ಕುಂಕುಮ ಚೆಲ್ಲಿ ಲಿಂಬೆ ಹಣ್ಣು, ನೋಟು ಮತ್ತು ಚಿಲ್ಲರೆ ಹಣವನ್ನು ಹಾಕಿರುತ್ತಾರೆ. ಮಧ್ಯರಾತ್ರಿಯಲ್ಲಿಯೇ ಈ ರೀತಿಯ ವಾಮಾಚಾರಗಳು ನಡೆಯುತ್ತವೆ. ಬೆಳಗ್ಗೆ ಕೆಲಸಕ್ಕೆ ಹೋಗುವ ಜನರು, ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಮತ್ತು ಹಿರಿಯರು ಇದನ್ನು ಕಂಡು ಭಯಪಟ್ಟುಕೊಳ್ಳುತ್ತಾರೆ. ಅನೇಕರು ಈ ರೀತಿಯ ವಾಮಾಚಾರದ ಗೊಂಬೆಗಳನ್ನು ಕಂಡು ಜ್ವರ ಬಂದು ಆಸ್ಪತ್ರೆ ಸೇರಿದ ಉದಾಹರಣೆಗಳಿವೆ. ಬೇರೆಯವರ ಏಳಿಗೆ ಸಹಿಸದವರು, ತಮಗೆ ಅನಾರೋಗ್ಯ ಕಾಡಿದಾಗ, ಅಂದುಕೊಂಡಂತೆ ಕೆಲಸ ಆಗದಾದಾಗ ಜನರು ವಾಮಾಚಾರ ಮಾಡಿಸುತ್ತಾರೆ ಎನ್ನಲಾಗಿದೆ.
ವಾಮಾಚಾರ ಅನ್ನೋದು ಅತಿಪುರಾತನ ವಿದ್ಯೆಯಾಗಿದೆ. ಕ್ಷುದ್ರಶಕ್ತಿಗಳನ್ನು ಆಹ್ವಾನಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಬ್ಲ್ಯಾಕ್ ಮ್ಯಾಜಿಕ್ ಮಾಡಿಸುತ್ತಾರೆ. ಅಥರ್ವಣ ವೇದದಲ್ಲಿ ಈ ವಾಮಾಚಾರದ ಬಗ್ಗೆ ಉಲ್ಲೇಖಿಸಲಾಗಿದೆ. ವಶೀಕರಣ, ಕಣ್ಕಟ್ಟು ವಿದ್ಯೆ, ಮಾಟ ವಿದ್ಯೆ ಮತ್ತು ಸಮ್ಮೋಹನಗಳು ವಾಮಾಚಾರದ ಭಾಗಗಳಾಗಿವೆ. ಮೂರು ದಾರಿ ಕೂಡುವ ಜಾಗದಲ್ಲಿ ಅಮವಾಸ್ಯೆ ಮತ್ತು ಹಣ್ಣಿಮೆಯ ದಿನದಂದು ದುರುಳರು ಕ್ಷುದ್ರಶಕ್ತಿಗಳನ್ನು ಒಲಿಸಿಕೊಳ್ಳಲು ಈ ದುಮಾರ್ಗವನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ, ಮಕ್ಕಳಲ್ಲಿ ಭಯ ಹುಟ್ಟುತ್ತದೆ. ಹೀಗಾಗಿ ಮೂರು ದಾರಿ ಕೂಡುವ ಜಾಗದಲ್ಲಿ ನಡೆದುಕೊಂಡು ಹೋಗುವ ಎಚ್ಚರಿಕೆ ವಹಿಸುವಂತೆ ಹಿರಿಯರು ನಮಗೆ ಹೇಳುತ್ತಾರೆ. ದೇವರಲ್ಲಿ ನಂಬಿಕೆ ಇಲ್ಲದವರು ಈ ವಾಮಾಚಾರವನ್ನು ನಂಬುವುದಿಲ್ಲ, ಅದೇ ರೀತಿ ದೇವರಲ್ಲಿ ನಂಬಿಕೆ ಉಳ್ಳವರು ಇದನ್ನು ನಂಬುತ್ತಾರೆ ಮತ್ತು ವಾಮಾಚಾರದಿಂದ ಜನರ ಮೇಲೆ ದೊಡ್ಡಮಟ್ಟದ ಪರಿಣಾಮವುಂಟಾಗುತ್ತದೆ ಎಂದು ನಂಬುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.