Intercouse tips : ಇಂದಿನ ಯುವ ಜನತೆ ಪೋರ್ನ್ ನಂತಹ ವಿಡಿಯೋಗಳನ್ನು ನೋಡಿ ಹಾಳಾಗುತ್ತಿದ್ದಾರೆ. ಇಂತಹ ವಿಡಿಯೋಗಳು ನಿಮಗೆ ಲೈಂಗಿಕ ಶಿಕ್ಷಣವನ್ನು ನೀಡುವುದಿಲ್ಲ, ಬದಲಾಗಿ ಅವುಗಳನ್ನು ನಿಮ್ಮನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತವೆ. ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವರು ಪಾಪ್ ಸಂಸ್ಕೃತಿಯ ಅಶ್ಲೀಲ ವಿಡಿಯೋದಲ್ಲಿ ಮಾಡಿದಂತೆ ಮಾಡುವುದು ಸರಿಯಲ್ಲ.
ವಾಸ್ತವವಾಗಿ, ಮೊದಲ ಬಾರಿಗೆ ಲೈಂಗಿಕತೆಯು ಇದಕ್ಕೆ ವಿರುದ್ಧವಾಗಿದೆ. ಜೊತೆಗೆ, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಸಂಪೂರ್ಣ ಅರಿವು ಮತ್ತು ಜ್ಞಾನವನ್ನು ಹೊಂದಿರಬೇಕು. ಇದು ಪಾಲುದಾರರಿಬ್ಬರಿಗೂ ಇರಬೇಕು. ಅತ್ಯಂತ ಸಾಮಾನ್ಯವಾದ ಮೊದಲ ಬಾರಿ ಲೈಂಗಿಕ ತಪ್ಪುಗಳ ವಿವರ ಇಲ್ಲಿದೆ.
ಇದನ್ನೂ ಓದಿ:ಕ್ಯಾನ್ಸರ್, ತೂಕ ಇಳಿಕೆ, ಹೃದಯದ ಸಮಸ್ಯೆ… ಈ ಮೂರು ಸಮಸ್ಯೆಗೆ ಒಂದೇ ಪರಿಹಾರ ಈ ಕಪ್ಪು ಬೀಜದ ನೀರು!
ಚರ್ಚೆ : ನೀವು ಮೊದಲ ಬಾರಿಗೆ ಲೈಂಗಿಕತೆಯನ್ನು ಹೊಂದಲು ಬಯಸುತ್ತಿದ್ದರೆ, ನಿಮ್ಮ ಸಂಗಾತಿ ಜೊತೆ ಮೊದಲು ಲೈಂಗಿಕತೆಯ ಬಗ್ಗೆ ಗಂಭೀರವಾಗಿ ಮಾತನಾಡಿ. ಇದರ ಬಗ್ಗೆ ಇಬ್ಬರ ಅಭಿಪ್ರಾಯ, ಇದರಿಂದಾಗುವ ಲಾಭ ನಷ್ಟಗಳ ಬಗ್ಗೆ ಚರ್ಚಿಸಿ.
ರಕ್ಷಣೆ : ಕಾಂಡೋಮ್ಗಳನ್ನು ಬಳಸುವುದರಿಂದ ನೈಜತೆ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಅವುಗಳು ಇಲ್ಲಿ ತುಂಬಾ ಮುಖ್ಯವಾಗಿರುತ್ತವೆ. ಸಂಭವನೀಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧ ನಿಮ್ಮನ್ನು ರಕ್ಷಿಸುತ್ತವೆ. ಅದಕ್ಕಾಗಿ ಮೊದಲ ಬಾರಿಗೆ ಲೈಂಗಿಕತೆಯನ್ನು ಹೊಂದುವವರು ಕಾಂಡೋಮ್ಗಳನ್ನು ಧರಿಸಿ.
ಇದನ್ನೂ ಓದಿ:ಪ್ರತಿದಿನ ಹಾಲು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ!
ಒಪ್ಪಿಗೆ : ಇಬ್ಬರು ಪಾಲುದಾರರಿಗೆ ಲೈಂಗಿಕ ಕ್ರಿಯೆ ನಡೆಸುವಲ್ಲಿ ಆಸಕ್ತಿ ಇರಬೇಕು. ಇಬ್ಬರು ಒಪ್ಪಿ ಅಪ್ಪಿಕೊಂಡರೆ ಅದಕ್ಕೆ ಅರ್ಥವಿರುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಬೇಡವಾದರೆ ಅದನ್ನು ಅಲ್ಲಿಗೆ ನಿಲ್ಲಿಸುವುದು ಸೂಕ್ತ. ಬಲವಂತದಿಂದ ಸಂಭೋಗ ಮಾಡಬೇಡಿ. ಅದು ನಿಮ್ಮ ಸಂಗಾತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಒತ್ತಡ : ಮೊದಲ ಬಾರಿಗೆ ಲೈಂಗಿಕತೆಯನ್ನು ಹೊಂದುವುದು ಅಷ್ಟ ಸುಲಭವಲ್ಲ. ಈ ಸಮಯ ನಿಮ್ಮ ಜೀವನದ ಮಧುರ ಕ್ಷಣವಾಗಿರುತ್ತದೆ. ಅದಕ್ಕಾಗಿ ಇಬ್ಬರು ಸಿದ್ಧವಾಗಿರಬೇಕು. ಲೈಂಗಿಕವಾಗಿ ಏನನ್ನು ಮಾಡಬೇಕು ಎನನ್ನು ಮಾಡಬಾರದು ಎನ್ನುವುದನ್ನು ಅರಿತು, ತಿಳಿದುಕೊಂಡು ಮುಂದಿನ ಕ್ರಿಯೆಯಲ್ಲಿ ಭಾಗಿಯಾಗಿ..
ಹಂಚಿಕೊಳ್ಳಬೇಡಿ : ನಿಮ್ಮ ಮೊದಲ ಲೈಂಗಿಕ ಅನುಭವವನ್ನು ಪೂರ್ಣಗೊಳಿಸಿದಾಗ, ಅದರ ಬಗ್ಗೆ ಇತರ ಜನರ ಮುಂದೆ ಎಂದಿಗೂ ಹಂಚಿಕೊಳ್ಳಬೇಡಿ.. ಇದು ನಿಮ್ಮ ಸಂಗಾತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಈ ವಿಚಾರ ನಿಮ್ಮಿಬ್ಬರ ಮಧ್ಯ ಇರಲಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.