GK Unknown Facts: ಓರ್ವ ವ್ಯಕ್ತಿ ಕನಸಿನ ಮನೆಯನ್ನು ಕಟ್ಟಿಸಿಕೊಳ್ಳಲು ತನ್ನ ಜೀವನವಿಡಿ ಕಷ್ಟಪಡುತ್ತಾನೆ . ಒಂದು ಚಿಕ್ಕ ಮನೆ ಕಟ್ಟಲು ಇಡೀ ಜೀವನವೇ ಬೇಕಾಗುತ್ತದೆ. ಆದರೆ, ಯಾವುದೇ ದೇಶದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ತಮ್ಮ ನಾಗರಿಕರಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತವೆ. ಇದಲ್ಲದೇ ಜನರಿಗೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. (Career News In Kannada)
ಇತ್ತೀಚಿನ ದಿನಗಳಲ್ಲಿ ಭೂಮಿ ಮತ್ತು ಫ್ಲಾಟ್ಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗ ಹೇಗೋ ಒಳ್ಳೆ ಬೆಲೆಗೆ ಒಂದು ಮನೆ ಸಿಗಬಹುದೆಂದು ಜನ ಅಂದುಕೊಳ್ಳುತ್ತಾರೆ, ಇದೆ ಕಾರಣದಿಂದ ಕೆಲವೊಮ್ಮೆ ಜನ ನಿವೇಶನಗಳನ್ನು ಖರೀದಿಸುವುದನ್ನು ತಪ್ಪಿಸುತ್ತಾರೆ, ಆದರೆ ನಿಮ್ಮ ಮನೆ ಕಟ್ಟಿಸಲು ಒಂದು ವೇಳೆ ಸರ್ಕಾರದಿಂದಲೇ ಸಹಾಯ ಸಿಕ್ಕರೆ, ಆ ಜಾಗ ಸ್ವರ್ಗಕ್ಕೆ ಸಮಾನವಾಗಿ ಬಿಡುತ್ತದೆ. ಈ ಲೇಖನ ಓದಿದ ಬಳಿಕ ನೀವು ಶಾಕ್ ಆಗಿದ್ದೀರಾ? ಏಕೆಂದರೆ ಜಗತ್ತಿನಲ್ಲಿ ಕೆಲವು ದೇಶಗಳಲ್ಲಿ ಸರ್ಕಾರವು ನಿಮಗೆ ಬದುಕಲು ಹಣವನ್ನು ನೀಡುತ್ತವೆ. ಅಂತಹ ಕೆಲವು ದೇಶಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಈ ದೇಶಗಳಲ್ಲಿ ಮನೆಯನ್ನು ಸ್ಥಾಪಿಸಲು ನಿಮಗೆ ಹಣ ಸಿಗುತ್ತದೆ
ಪ್ರೆಸಿಕ್ಸ್
ಇಟಲಿ ಬಹಳ ಸುಂದರವಾದ ದೇಶವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆದೇಶಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ಈ ಸುಂದರ ದೇಶದಲ್ಲಿ ಪ್ರೆಸಿಸ್ ಎಂಬ ಹೆಸರಿನ ಒಂದು ಸ್ಥಳವಿದೆ, ಅಲ್ಲಿ ಸರ್ಕಾರವು 25 ಲಕ್ಷ ರೂಪಾಯಿಗಳೊಂದಿಗೆ ಜನರಿಗೆ ನೆಲೆಸಲು ಸಹಾಯ ಮಾಡುತ್ತದೆ. ವಾಸ್ತವದಲ್ಲಿ, ಈ ಪ್ರದೇಶದ ಜನಸಂಖ್ಯೆಯು ತುಂಬಾ ಕಡಿಮೆಯಾಗಿದೆ ಮತ್ತು ಅಲ್ಲಿನ ಹೆಚ್ಚಿನ ಜನರು ವಯಸ್ಸಾದವರು. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕೆಲಸ ಮಾಡುತ್ತದೆ.
ಆಂಟಿಕಿಥೆರಾ
ಅಂತಹುದೇ ಒಂದು ಸ್ಥಳ ಎಂದರೆ ಅದು ಗ್ರೀಕ್ ದ್ವೀಪ ಆಂಟಿಕಿಥೆರಾ ಕೂಡ ಒಂದು. ಮಾಹಿತಿ ಪ್ರಕಾರ, ಯಾರಾದರೂ ಈ ಸ್ಥಳದಲ್ಲಿ ವಾಸಿಸಲು ನಿರ್ಧರಿಸಿದರೆ, ಸರ್ಕಾರವು ಅವರಿಗೆ 3 ವರ್ಷಗಳವರೆಗೆ ತಿಂಗಳಿಗೆ 50 ಸಾವಿರ ರೂ. ಹಣ ನೀಡುತ್ತದೆ. ಪ್ರಸ್ತುತ, ಈ ಸ್ಥಳದಲ್ಲಿ ಕೇವಲ 50 ಜನರು ವಾಸಿಸುತ್ತಿದ್ದಾರೆ.
ಇದನ್ನೂ ಓದಿ-GK Quiz: ವಿಶ್ವದಲ್ಲಿ ಅತಿ ಎತ್ತರದಲ್ಲಿರುವ ಸರೋವರ ಯಾವುದು?
ಅಲ್ಬಿನೆನ್
ಐರೋಪ್ಯ ದೇಶ ಸ್ವಿಟ್ಜರ್ಲೆಂಡ್ ತನ್ನ ಸ್ವರ್ಗೀಯ ಸೌಂದರ್ಯಕ್ಕಾಗಿ ವಿಶ್ವಾದ್ಯಂತ ಪ್ರಸಿದ್ಧವಾಗಿದೆ, ಅಲ್ಲಿ ಜನರು ಭೇಟಿ ನೀಡಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಆದರೆ ಅಲ್ಲಿ ನೆಲೆಸಲು ಹಣವನ್ನು ಖರ್ಚು ಮಾಡುವ ಬದಲು ಸರ್ಕಾರವು ನಿಮಗೆ ಹಣವನ್ನು ನೀಡುತ್ತದೆ. ಮಾಹಿತಿಯ ಪ್ರಕಾರ, ಅಲ್ಲಿನ ಅಲ್ಬಿನೆನ್ ಗ್ರಾಮದಲ್ಲಿ ನೆಲೆಸಲು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ 20 ಲಕ್ಷ ರೂ., ದಂಪತಿಗಳಿಗೆ 40 ಲಕ್ಷ ರೂ. ಹಾಗೂ ಮಕ್ಕಳಿದ್ದರೆ, ಪ್ರತಿ ಮಗುವಿಗೆ 8 ಲಕ್ಷ ರೂ. ನೀಡಲಾಗುತ್ತದೆ. ಆದರೆ ನಿಯಮ ಏನು ಅಂದ್ರೆ, 10 ವರ್ಷಗಳ ಕಾಲ ಈ ಸ್ಥಳವನ್ನು ನೀವು ಬಿಟ್ಟು ಹೋಗುವಂತಿಲ್ಲ ಎಂಬುದು ಸರ್ಕಾರದ ಏಕೈಕ ಷರತ್ತು.
ಇದನ್ನೂ ಓದಿ-GK Quiz: 'ಲ್ಯಾಂಡ್ ಆಫ್ ಥ0ಡರ್ ಬೋಲ್ಟ್' ಎಂದೂ ಕೂಡ ಕರೆಯಲಾಗುವ ದೇಶ ಯಾವುದು ಗೊತ್ತಾ?
ಅಲಾಸ್ಕಾ
ಅಮೆರಿಕದ ಅಲಾಸ್ಕಾದಲ್ಲಿ ಮನೆಯನ್ನು ಸ್ಥಾಪಿಸಲು ಸರ್ಕಾರವು ನಿಮಗೆ ಹಣವನ್ನು ನೀಡುತ್ತದೆ. ವಾಸ್ತವದಲ್ಲಿ, ಇದು ತುಂಬಾ ತಂಪಾದ ಪ್ರದೇಶ ಮತ್ತು ಅಲ್ಲಿ ಭಾರೀ ಹಿಮಪಾತವಾಗುತ್ತದೆ , ಇದರಿಂದಾಗಿ ಅಲ್ಲಿ ಜನಸಂಖ್ಯೆಯು ತುಂಬಾ ಕಡಿಮೆಯಾಗಿದೆ. ಮಾಹಿತಿ ಪ್ರಕಾರ ಅಲ್ಲಿ ವಾಸಿಸುವವರಿಗೆ ಪ್ರತಿ ವರ್ಷ 1.5 ಲಕ್ಷ ರೂ. ಕೊಡಲಾಗುತ್ತದೆ. ಒಂದು ವರ್ಷದ ಮೊದಲು ಈ ಸ್ಥಳವನ್ನು ಖಾಲಿ ಮಾಡಿ ಬೇರೆಡೆಗೆ ಹೋಗಬಾರದು ಎಂಬುದು ಇದಕ್ಕೆ ಅಗತ್ಯವಾದ ಷರತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ