ಶಾಸಕರ ಲೆಟರ್ಪ್ಯಾಡ್ ಎಲ್ಲಿರುತ್ತೆ. ಎಂ.ಎಲ್.ಎ ಮನೆಯಲ್ಲಿರುತ್ತೆ, ಇಲ್ಲ ಆಫೀಸ್ಸಲ್ಲಿರುತ್ತೆ ಅಥವಾ ಯಾರಿಗಾದ್ರು ಶಿಫಾರಸ್ಸು ಪತ್ರ ಕೊಟ್ಟಿದ್ರೆ ಒಂದೋ...ಎರಡೋ... ಸಂಬಂಧಪಟ್ಟ ಕಚೇರಿಯಲ್ಲಿರುತ್ತೆ. ವಿಥ್ ಟೈಪಡ್ಡ್ ಸೀಲ್ ಅಂಡ್ ಸೈನ್. ಆದರೆ, ಶಾಸಕರ ಖಾಲಿ ಲೆಟರ್ ಪ್ಯಾಡ್ ಬುಕ್ಲೆಟ್, ಸೀಲ್ ಅಂಡ್ ಸೈನ್ ಸರ್ಕಾರಿ ಕಚೇರಿಯಲ್ಲಿ ಎಫ್.ಡಿ.ಎ. ಹತ್ರ ಏಕಿರುತ್ತೆ? ಬರೀ ಎಂ.ಎಲ್.ಎ.ದಷ್ಟೆ ಅಲ್ಲ ಇಲಾಖೆಯ ಮಾಜಿ-ಹಾಲಿ ಉನ್ನತ ಅಧಿಕಾರಿಗಳು, ಸರ್ಕಾರಿ ಶಾಲಾ ಪ್ರಾಂಶುಪಾಲರ ಸೀಲ್ಗಳನ್ನ ಎಫ್.ಡಿ.ಎ. ಇಟ್ಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇಲಾಖೆ ನೋಟೀಸ್ ನೀಡಿ ಕಾರಣ ಕೇಳಿ ತಿಂಗಳಾದ್ರು ನೋ ಆ್ಯಕ್ಷನ್. ಹಾಗಾದ್ರೆ, ಆ ಶಾಸಕರು-ಅಧಿಕಾರಿಗಳು ಯಾರು ಗೊತ್ತಾ... ಮುಂದೆ ಓದಿ...
ಹೌದು... ಶಾಸಕರ ಲೆಟರ್ ಪ್ಯಾಡ್, ಸೀಲ್, ಸಹಿ ಅಂದ್ರೆ ಅದಕ್ಕೊಂದು ಬೆಲೆ ಇರುತ್ತೆ. ಗೌರವ ಇರುತ್ತೆ. ಅಂತಹ ಲೆಟರ್ ಪ್ಯಾಡ್, ಸೀಲ್-ಸಹಿಗಳು ಸರ್ಕಾರಿ ಕಚೇರಿಯಲ್ಲಿ ಎಫ್.ಡಿ.ಎ.ಗಳ ಬಳಿ ಇರುತ್ತೆ ಅಂದ್ರೆ ಅದು ಬೇರೆಯದ್ದೇ ಅರ್ಥ ಕೊಡುತ್ತೆ. ಅಂತಹಾ ಘಟನೆಗೆ ಚಿಕ್ಕಮಗಳೂರು ನಗರ ಸಾಕ್ಷಿಯಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಎಫ್.ಡಿ.ಎ. ರವಿ ಎಂಬುವರ ಬಳಿ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯನವರ ಲೆಟರ್ ಪ್ಯಾಡ್ ಬುಕ್ಲೆಟ್, ಸೀಲ್-ಸಹಿಗಳು ಸಿಕ್ಕಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರೇ ಕೊಟ್ರೊ ಅಥವಾ ಎಫ್.ಡಿ.ಎ. ತಾನೇ ಇವುಗಳನ್ನು ಮಾಡಿಸಿಕೊಂಡ್ನೋ ಗೊತ್ತಿಲ್ಲ. ಶಾಸಕರೇ ಕೊಟ್ಟಿದ್ದಾರೆ ಅನ್ನೋದನ್ನ ನಂಬೋದಕ್ಕೆ ಕಷ್ಟಸಾಧ್ಯ. ಆದರೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ ಎಲ್ಲವೂ ಪತ್ತೆಯಾಗಿದೆ. ಆದರೆ, ಅಧಿಕಾರಿಗಳ ಇನ್ಸ್ಪೆಕ್ಷನ್ ವೇಳೆ ಬರೀ ಎಂ.ಎಲ್.ಎ.ಯ ಹೆಸರಿನ ಲೆಟರ್ಪ್ಯಾಡ್, ಸೀಲ್ ಮಾತ್ರ ಸಿಕ್ಕಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಹಾಲಿ-ಮಾಜಿ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಶಾಲೆಗಳ ಪ್ರಾಂಶುಪಾಲರ ಸೀಲ್ಗಳು ಕೂಡ ಪತ್ತೆಯಾಗಿವೆ. 2023ರ ಡಿಸೆಂಬರ್ 30ರಂದೇ ಈ ಕುರಿತು ನೋಟೀಸ್ ನೀಡದ್ರು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ- ಬ್ಯಾಂಕ್ ಸಾಲದಲ್ಲಿ ವಂಚನೆ: SLN CNC ಟೆಕ್ ಮತ್ತು ಕೆನರಾ ಬ್ಯಾಂಕ್ ವಿರುದ್ಧ ತನಿಖೆ ಚುರುಕು!
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು 2023 ಡಿಸೆಂಬರ್ 30 ರಂದೇ ದಾಳಿ ಮಾಡಿದ್ದಾರೆ. ಅಂದು ಶಾಸಕರ ಲೆಟರ್ ಪ್ಯಾಡ್, ಸೀಲ್ ಸೇರಿದಂತೆ ಅಧಿಖಾರಿಗಳ ಸೀಲ್-ಸಹಿ ಸಿಕ್ಕಿದೆ. ಸೋಶಿಯಲ್ ವೆಲ್ಫೆರ್ ಡಿಡಿ ಅಂದೇ ನೋಟೀಸ್ ನೀಡಿ ಏಕೆ ಇಟ್ಟುಕೊಂಡಿದ್ರಿ ಅನ್ನೋ ಸೂಕ್ತ ಕಾರಣವನ್ನ 3 ದಿನಗಳ ಒಳಗೆ ನೀಡಬೇಕು. ಇಲ್ಲವಾದರೆ, ನೀವು ಹೇಳೋದು ಏನಿಲ್ಲ ಎಂದು ನಿಮ್ಮ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನೋಟೀಸ್ ನೀಡಿದ್ದಾರೆ. ವಿಪರ್ಯಾಸವೆಂದರೆ ಇದುವರೆಗೂ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಜಿಲ್ಲಾ ಪಂಚಾಯಿತಿ ಸಿಇಓ, ಅಧಿಕಾರಿಗಳು ಅವರಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಅವರು ಲೆಟರ್ ಪ್ಯಾಡ್ ಹಾಗೂ ಸೀಲ್-ಸಹಿಗಳಿಂದ ಅಕ್ರಮವೆಸಗಿರೋದು ಕಂಡು ಬಂದರೆ ಕರ್ನಾಟಕ ನಾಗರೀಕ ಸೇವೆಗಳ ನಿಯಮಗಳ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- Interstate Thief Arrested: ಅಂತರರಾಜ್ಯ ಕಳ್ಳನ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ಆಭರಣ ವಶಕ್ಕೆ
ಒಟ್ಟಾರೆ, ಸರ್ಕಾರಿ ಕಚೇರಿಯಲ್ಲಿ ಶಾಸಕರ ಖಾಲಿ ಲೆಟರ್ ಪ್ಯಾಡ್, ಸೀಲ್-ಸಹಿ ಸಿಕ್ಕಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರೇ ಕೊಟ್ರೋ ಅಥವಾ ಶಾಸಕರ ಹೆಸರಿನಲ್ಲಿ ತಾವೇ ಗೋಲ್ಮಾಲ್ ಮಾಡಲು ಇವುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರೋ ಗೊತ್ತಿಲ್ಲ. ಅಧಿಕಾರಿಗಳ ಬಲಿಕ್ ಸಿಕ್ಕಿಬಿದ್ದ ಎಫ್.ಡಿ.ಎ.ಗೆ ನೋಟೀಸ್ ನೀಡಿ ಒಂದು ತಿಂಗಳಾದರು ಯಾವುದೇ ಕ್ರಮಕೈಗೊಳ್ಳದಿರೋದನ್ನ ಕಂಡ್ರೆ ಎಫ್.ಡಿ.ಎ. ಸೇಫ್ ಆಗಿರ್ಬೋದು ಎನ್ನುವ ಅನುಮಾನ ಕೆಲವರದ್ದಾಗಿದೆ. ಹಾಗೇನಾದ್ರು ಆದರೆ ಶಾಸಕರ ಲೆಟರ್ಪ್ಯಾಡ್, ಸೀಲ್-ಸಹಿಗೆ ಬೆಲೆ ಇಲ್ಲದಂತಾಗೋದಂತು ಗ್ಯಾರಂಟಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.