ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಟ್ರಾಲ್ನಿಂದ ಶಂಕಿತ ಭಯೋತ್ಪಾದಕರು ಇಬ್ಬರು ನಾಗರೀಕರನ್ನು ಅಪಹರಿಸಿದ್ದಾರೆ. ಅವರಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾರೆ.
ಭದ್ರತಾ ಪಡೆಗಳು ಮತ್ತು ಪೊಲೀಸರು ಇನ್ನೊಬ್ಬ ವ್ಯಕ್ತಿಯನ್ನು ಹುಡುಕಲು ಶೋಧ ಕಾರ್ಯ ಆರಂಭಿಸಿದ್ದಾರೆ.
ಅವರಲ್ಲಿ ಒಬ್ಬರು ಲಾಚಿಟಾಪ್ ಬೆಹಾಕ್ ನಿವಾಸಿ ಮತ್ತು ಇನ್ನೊಬ್ಬರು ಮನ್ಸಾರ್ ಬೆಹಕ್ ನಿವಾಸಿ. ಇಬ್ಬರನ್ನೂ ಟ್ರಾಲ್ನ ನಾಗ್ಬೆಹರನ್ ಅರಣ್ಯದಿಂದ ಅಪಹರಿಸಲಾಗಿದೆ. ಅವರಲ್ಲಿ ಒಬ್ಬರ ಶವವನ್ನು ಕಾಡಿನಿಂದ ವಶಪಡಿಸಿಕೊಳ್ಳಲಾಗಿದೆ.