ಹೇರ್ ಡೈ, ಕಲರ್ ಗೆ ಹೇಳಿ ಗುಡ್ ಬೈ, ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಹಚ್ಚಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ

White hair remedy :ಕೆಲವು ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತರಬಹುದು. 

White hair remedy : ಬಿಳಿ ಬೂದು ಕೂದಲು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಜನರ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಆರಂಭವಾಗುತ್ತದೆ.ಈ ಸಮಸ್ಯೆಯು ಪುರುಷರು ಮತ್ತು ಮಹಿಳೆ ಇಬ್ಬರಲ್ಲಿಯೂ ಕಂಡುಬರುತ್ತದೆ. ಇದರ ಪರಿಹಾರವಾಗಿ ರಾಸಾಯನಿಕಯುಕ್ತ ಹೇರ್ ಡೈ ಮತ್ತು ಕೂದಲಿನ ಬಣ್ಣವನ್ನು ಬಳಸುತ್ತಾರೆ. ಇದು ಕೂದಲ ಆರೋಗ್ಯವನ್ನು ಕೆಡಿಸುತ್ತದೆ.  ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತರಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಈಗ ಕೂದಲು ಬಿಳಿಯಾಗುತ್ತದೆ ಎಂದು ಚಿಂತಿಸುವ ಅಗತ್ಯವಿಲ್ಲ. ಹೇರ್ ಡೈ, ಕಲರ್ ಅನ್ನು ಬಳಸದೆ ಮನೆಮದ್ದುಗಳ ಸಹಾಯದಿಂದಲೇ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವೂ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. 

2 /5

ನೆಲ್ಲಿಕಾಯಿ ಮತ್ತು ಕೊಬ್ಬರಿ ಎಣ್ಣೆಯ ಬಳಕೆಯಿಂದ ಬಿಳಿ ಕೂದಲು ಕಪ್ಪಾಗುತ್ತದೆ. 3 ಚಮಚ ತೆಂಗಿನ ಎಣ್ಣೆಯಲ್ಲಿ 2 ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಬಾಣಲೆಯಲ್ಲಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಿಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. 15-20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. 

3 /5

1 ಚಮಚ  ಕರಿ ಜೀರಿಗೆ  1 ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈಗ ಇದರೊಂದಿಗೆ ಕೂದಲಿನ ಬೇರುಗಳನ್ನು ಮಸಾಜ್ ಮಾಡಿ. 1 ಗಂಟೆಯ ನಂತರ ಶಾಂಪೂ ಮಾಡಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ  ಬಿಳಿ ಕೂದಲು ಮತ್ತೆ ಕಪ್ಪಾಗುವುದು. 

4 /5

4 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ ಮತ್ತು ಅದಕ್ಕೆ ಗೋರಂಟಿ ಎಲೆಗಳನ್ನು ಸೇರಿಸಿ. ಎಣ್ಣೆಯು ಗೋರಂಟಿಯ ಬಣ್ಣವನ್ನು ಪಡೆಯಲು ಪ್ರಾರಂಭಿಸಿದಾಗ, ಗ್ಯಾಸ್‌ ಆಫ್ ಮಾಡಿ.  ಈ ಮಿಶ್ರಣ ಉಗುರು ಬೆಚ್ಚಗಿರುವಾಗಲೇ ಕೂದಲಿಗೆ ಹಚ್ಚಿ ಮಸಾಜ್ ಮಾಡಿ.ಒಂದು ಗಂಟೆಯ ನಂತರ ಶಾಂಪೂ ಮಾಡಿ.

5 /5

ಕರಿಬೇವಿನ ಎಲೆಗಳಲ್ಲಿ ಜೈವಿಕ-ಸಕ್ರಿಯ ಅಂಶಗಳು ಕಂಡುಬರುತ್ತವೆ. ಇದು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ.ಕೂದಲಿಗೆ ಇದರ ಪೇಸ್ಟ್ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಪ್ರತಿ ವಾರವೂ ಕರಿಬೇವಿನ ಎಲೆಯನ್ನು  ತೆಂಗಿನ ಎಣ್ಣೆಯಲ್ಲಿ ಬೆರೆಸಿ ಹಚ್ಚಬಹುದು.