Budget 2024 : ಈ ಬಾರಿಯ ಬಜೆಟ್ ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದ ಮಧ್ಯಂತರ ಬಜೆಟ್ ಆಗಿರುತ್ತದೆ. ಹೀಗಿರುವಾಗ ಈ ಬಾರಿಯ ಬಜೆಟ್ನಲ್ಲಿ ಯಾವುದೇ ದೊಡ್ಡ ಘೋಷಣೆಯಾಗುವ ಸಾಧ್ಯತೆ ಇಲ್ಲ.ಸರ್ಕಾರವು ಈ ಬಜೆಟ್ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಪರಿಹಾರವನ್ನು ನೀಡುತ್ತದೆ ಅಥವಾ ಯಾವುದೇ ದೊಡ್ಡ ಘೋಷಣೆಗಳನ್ನು ಮಾಡುತ್ತದೆ ಎನ್ನುವ ಭರವಸೆ ಕಡಿಮೆ. ಆದರೆ ಬಜೆಟ್ನಲ್ಲಿ ಸರ್ಕಾರವು ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸ ಬದಲಾವಣೆಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹಳೆಯ ಮತ್ತು ಹೊಸ ಪಿಂಚಣಿಗೆ ಸಂಬಂಧಿಸಿದ ವಿವಾದಗಳ ನಡುವೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್ಪಿಎಸ್) ಆಕರ್ಷಕಗೊಳಿಸಲು ಸರ್ಕಾರವು ಈ ಬಜೆಟ್ನಲ್ಲಿ ಕೆಲವು ಘೋಷಣೆಗಳನ್ನು ಮಾಡಬಹುದು. ಈ ಬಜೆಟ್ನಲ್ಲಿ ಹಣಕಾಸು ಸಚಿವರು ಎನ್ಪಿಎಸ್ನಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಬಹುದು ಎನ್ನಲಾಗಿದೆ. ಇದು ಹಿರಿಯ ನಾಗರಿಕರಿಗೆ ಪರಿಹಾರವನ್ನು ನೀಡುತ್ತದೆ ಮಾತ್ರವಲ್ಲ ಖಾಸಗಿ ವಲಯದ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತದೆ. ಇದಕ್ಕೆ ಸಂಬಂಧಿಸಿದಂತೆ, ಪಿಂಚಣಿ ನಿಧಿ ನಿಯಂತ್ರಕವು ಎನ್ಪಿಎಸ್ನಲ್ಲಿ ಕೆಲವು ಬದಲಾವಣೆಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ.
NPS ನಲ್ಲಿನ ಬದಲಾವಣೆ :
ಸರ್ಕಾರವು ಈ ಬಜೆಟ್ನಲ್ಲಿ ಎನ್ಪಿಎಸ್ ನಲ್ಲಿ ಕೆಲವು ಬದಲಾವಣೆಗಳನ್ನು ತರಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಹೆಚ್ಚು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಈ ಬದಲಾವಣೆಗಳನ್ನು ಹಣಕಾಸು ಸಚಿವರು ಫೆಬ್ರವರಿ 1 ರಂದು ಬಜೆಟ್ ನಲ್ಲಿ ಘೋಷಣೆ ಮಾಡಬಹುದು ಎನ್ನಲಾಗಿದೆ. ತಜ್ಞರ ಪ್ರಕಾರ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದರ ಅಡಿ ಕೊಡುಗೆಯನ್ನು ಹೆಚ್ಚಿಸುವುದು ಮತ್ತು ಹಿಂಪಡೆಯುವಿಕೆಯ ಮೇಲೆ ತೆರಿಗೆ ಪ್ರಯೋಜನಗಳನ್ನು ಸೇರಿಸುವ ಮೂಲಕ ಹಣಕಾಸು ಸಚಿವರು ಅದನ್ನು ಆಕರ್ಷಕಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Cooking Oil Price Cut: ಅಡುಗೆ ಎಣ್ಣೆ ದರ ಕಡಿಮೆ ಮಾಡುವಂತೆ ಕಂಪನಿಗಳಿಗೆ ಸರ್ಕಾರ ಸೂಚನೆ ! ಯಾವಾಗ ಅಗ್ಗವಾಗುವುದು ಬೆಲೆ ?
ಖಾಸಗಿ ವಲಯದ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು :
ಎನ್ಪಿಎಸ್ನಲ್ಲಿನ ಬದಲಾವಣೆಗಳ ಘೋಷಣೆಯಿಂದ ಖಾಸಗಿ ವಲಯದ ಉದ್ಯೋಗಿಗಳು ಸಹ ಪರಿಹಾರವನ್ನು ಪಡೆಯಬಹುದು. ಖಾಸಗಿ ವಲಯದ ಉದ್ಯೋಗಿಗಳು ಪಿಎಫ್ಆರ್ಡಿಎ ಶಿಫಾರಸುಗಳ ಪ್ರಯೋಜನವನ್ನು ಪಡೆಯುತ್ತಾರೆ. ಬಜೆಟ್ನಲ್ಲಿ ಎನ್ಪಿಎಸ್ನಲ್ಲಿ ಬದಲಾವಣೆಗಳನ್ನು ಮಾಡಿದರೆ ಉದ್ಯೋಗಿಗಳು ಮತ್ತು ಉದ್ಯೋಗದಾತರು 10ರ ಬದಲಿಗೆ 12 ಶೇಕಡಾ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತಾರೆ. ವಾಸ್ತವವಾಗಿ, ಪಿಂಚಣಿ ನಿಧಿ ನಿಯಂತ್ರಕ PFRDA ಉದ್ಯೋಗದಾತರ ಕೊಡುಗೆಗಳ ಮೇಲೆ EPFO ತರಹದ ತೆರಿಗೆ ನಿಯಮಗಳನ್ನು ಒತ್ತಾಯಿಸಿದೆ. ಮಧ್ಯಂತರ ಬಜೆಟ್ನಲ್ಲಿ ಹಣಕಾಸು ಸಚಿವರು ಈ ಬಗ್ಗೆ ಘೋಷಣೆ ಮಾಡಬಹುದು ಎಂದು ನಂಬಲಾಗಿದೆ. ಪ್ರಸ್ತುತ NPS ಮತ್ತು EPFO ಗಾಗಿ ಉದ್ಯೋಗದಾತರ ಕೊಡುಗೆಯ ಮೇಲಿನ ತೆರಿಗೆ ನಿಯಮಗಳು ವಿಭಿನ್ನವಾಗಿವೆ. NPSನಲ್ಲಿ, 10 ಪ್ರತಿಶತದಷ್ಟು ಉದ್ಯೋಗಿಗಳ ನಿಧಿಗೆ ಉದ್ಯೋಗದಾತರ ಕೊಡುಗೆಯ ಮೇಲೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಿದೆ. ಇದು ಮೂಲ ವೇತನ ಮತ್ತು DA ಭತ್ಯೆಯ 10 ಪ್ರತಿಶತ. ಆದರೆ, ಇಪಿಎಫ್ಒದಲ್ಲಿ ಉದ್ಯೋಗಿಗಳ ನಿಧಿಗೆ ಒಟ್ಟು ಶೇಕಡ 12ರಷ್ಟು ಕೊಡುಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ.ಈ ತೆರಿಗೆ ವ್ಯತ್ಯಾಸವನ್ನು ತೊಡೆದುಹಾಕಬೇಕು ಎನ್ನುವ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಹಣಕಾಸು ಸಚಿವರು ಈ ವ್ಯತ್ಯಾಸವನ್ನು ಹೋಗಲಾಡಿಸಬಹುದು ಎಂದು ನಂಬಲಾಗಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿಗೆ ಆಗ್ರಹ :
ಎನ್ಪಿಎಸ್ಗೆ ಹೆಚ್ಚುವರಿ ಕೊಡುಗೆಯ ಮೇಲಿನ ವಿನಾಯಿತಿಯನ್ನೂ ಹೊಸ ತೆರಿಗೆ ಪದ್ಧತಿಯಲ್ಲಿ ಸೇರಿಸಬೇಕು ಎಂದು ನೌಕರರು ಒತ್ತಾಯಿಸುತ್ತಾರೆ. ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿಯೂ ಜನರು ಎನ್ಪಿಎಸ್ ಕೊಡುಗೆಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬೇಕು ಎನ್ನುವುದು ನೌಕರರ ಒತ್ತಾಯ. ಹಳೇ ಆದಾಯ ತೆರಿಗೆ ಪದ್ದತಿಯಲ್ಲಿ ಎನ್ಪಿಎಸ್ನಲ್ಲಿ 50,000 ರೂ. ವರೆಗಿನ ಕೊಡುಗೆಗಳು ಸೆಕ್ಷನ್ 80CCD (1B) ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಅದೇ ಸಮಯದಲ್ಲಿ, ಎನ್ಪಿಎಸ್ನ ಶ್ರೇಣಿ-1 ಖಾತೆಯಲ್ಲಿ ಲಭ್ಯವಿರುವ ಈ ವಿನಾಯಿತಿಯನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಸೇರಿಸಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : Karnataka Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.