Amitabh Bachchan : ಅಯೋಧ್ಯೆಯಲ್ಲಿ ಪ್ಲಾಟ್ ಖರೀದಿಸಿದ ಖ್ಯಾತ ಬಾಲಿವುಡ್‌ ನಟ..!

Bollywood Star Amitabh Bachchan: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದ 7-ಸ್ಟಾರ್ ಎನ್‌ಕ್ಲೇವ್ ಸರಯೂನಲ್ಲಿ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್‌ನಿಂದ ಪ್ಲಾಟ್ ಖರೀದಿಸಿದ್ದಾರೆ.. 

Written by - Savita M B | Last Updated : Jan 15, 2024, 11:33 AM IST
  • ಅಯೋಧ್ಯೆಯ ಸರಯೂ ನದಿಯ ಬಳಿ ನಿರ್ಮಿಸಲಾಗಿರುವ ಶ್ರೀರಾಮ ಮಂದಿರ
  • ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಇದೇ 22 ರಂದು ಲೋಕಾರ್ಪಣೆ ಮಾಡಲಿದ್ದಾರೆ.
  • ಇದೇ ವೇಳೆ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದಲ್ಲಿ ಪ್ಲಾಟ್ ಖರೀದಿಸಿದ್ದಾರೆ.
Amitabh Bachchan : ಅಯೋಧ್ಯೆಯಲ್ಲಿ ಪ್ಲಾಟ್ ಖರೀದಿಸಿದ ಖ್ಯಾತ ಬಾಲಿವುಡ್‌ ನಟ..!  title=

Amitabh Bachchan-Ayodhya: ಅಯೋಧ್ಯೆಯ ಸರಯೂ ನದಿಯ ಬಳಿ ನಿರ್ಮಿಸಲಾಗಿರುವ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಇದೇ 22 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಶುಭ ಭವ್ಯ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಮನ ಭಕ್ತಾಧಿಗಳು ಕಾಯುತ್ತಿದ್ದಾರೆ.. 

ಇದೇ ವೇಳೆ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದ 7-ಸ್ಟಾರ್ ಎನ್‌ಕ್ಲೇವ್ ಸರಯೂನಲ್ಲಿ ಮುಂಬೈ ಮೂಲದ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್‌ನಿಂದ ಪ್ಲಾಟ್ ಖರೀದಿಸಿದ್ದಾರೆ. 10,000 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಲು ಅವರು ಯೋಜಿಸಿದ್ದಾರೆ. ಇದರ ಮೌಲ್ಯ 14.5 ಕೋಟಿ ರೂ. 

ಇದನ್ನೂ ಓದಿ-ಕಳೆದ ಹತ್ತು ವರ್ಷಗಳಲ್ಲಿ ಕೇವಲ ಆರು ಚಿತ್ರಗಳನ್ನು ಮಾಡಿದ ಸ್ಟಾರ್‌ ನಟ.. ಗಳಿಸಿದ್ದು ಮಾತ್ರ 622 ಕೋಟಿ!

ಇನ್ನು ಅಮಿತಾಭ್ "ರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅಯೋಧ್ಯಾ ನಗರವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸ್ಥಾಪಿಸಿದೆ. ಜಾಗತಿಕ ಆಧ್ಯಾತ್ಮಿಕ ರಾಜಧಾನಿ ಅಯೋಧ್ಯೆಯಲ್ಲಿ ಮನೆ ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.. 

ಇದನ್ನೂ ಓದಿ-ಲುಂಗಿ ಬೀಸುತ್ತಾ, ಫುಲ್ ಸೌತ್ ಫೀಲ್ ಕೊಟ್ಟು, ಫಸ್ಟ್ ಲುಕ್ ನಲ್ಲಿ ರಾಜಾ ಸಾಬ್ ಆಗಿ ಬಂದ ಪ್ರಭಾಸ್

ಜೊತೆಗೆ ಹಬ್ಲ್ ಅಧ್ಯಕ್ಷ ಅಭಿನಂದನಿ ಲೋಧಾ "ಅಮಿತಾಭ್ ಅವರ ಜನ್ಮಸ್ಥಳ ಅಲಹಾಬಾದ್... ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಯೋಧ್ಯೆಯಿಂದ 330 ಕಿ.ಮೀ ದೂರವಿದೆ.. ರಾಮಮಂದಿರದಿಂದ 15 ನಿಮಿಷಗಳ ಪ್ರಯಾಣದ ದೂರದಲ್ಲಿರುವ ಸರಯೂ ನದಿಯ ದಡದಲ್ಲಿ ತಮ್ಮ ಕಂಪನಿ ನಿರ್ಮಿಸುತ್ತಿರುವ ಅಯೋಧ್ಯೆ ಯೋಜನೆಯ ಪ್ರಥಮ ಪ್ರಜೆಯಾಗಿ ಅಮಿತಾಭ್ ಅವರನ್ನು ಸ್ವಾಗತಿಸುತ್ತಿದ್ದೇನೆ" ಎಂದಿದ್ದಾರೆ.. 

ಅಯೋಧ್ಯೆ ಯೋಜನೆಯಲ್ಲಿ ಅವರ ಹೂಡಿಕೆ ಆಧ್ಯಾತ್ಮಿಕ ಪರಂಪರೆಯಲ್ಲಿ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಲೋಧಾ ಹೇಳಿದ್ದಾರೆ. ಅಮಿತಾಭ್ ಹೂಡಿಕೆ ಮಾಡಿದ ಎನ್‌ಕ್ಲೇವ್ ಬ್ರೂಕ್‌ಫೀಲ್ಡ್ ಗ್ರೂಪ್ ಒಡೆತನದ ಲೀಲಾ ಪ್ಯಾಲೇಸ್ ರೆಸಾರ್ಟ್ಸ್ ಸಹಭಾಗಿತ್ವದಲ್ಲಿ ಪಂಚತಾರಾ ಪ್ಯಾಲೇಸ್ ಹೋಟೆಲ್ ಕೂಡ ಇರುತ್ತದೆ. ಈ ಯೋಜನೆಯನ್ನು ಮಾರ್ಚ್ 2028 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದು.. ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆಯಲ್ಲಿ ಬೃಹತ್ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News