Bombat Bhojana: ಇನ್ನು ಈ ಬಾರಿಯ 'ಬೊಂಬಾಟ್ ಭೋಜನ ಸೀಸನ್ 4' ಅನೇಕ ವಿಶೇಷತೆಗಳೊಂದಿಗೆ ನಿಮ್ಮ ಮುಂದೆ ಬರ್ತಿದೆ. ಈ ಸೀಸನ್ ಅಲ್ಲಿ ಏನೆಲ್ಲಾ ಇರುತ್ತೆ ಎಂದು ಹೇಳೋದಾದ್ರೆ
ಇದನ್ನೂ ಓದಿ-Shraddha Das: ಖ್ಯಾತ ಉದ್ಯಮಿಯೊಂದಿಗೆ ಡೇಟಿಂಗ್.. ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ʼಕೋಟಿಗೊಬ್ಬ 3ʼ ನಟಿ!
1. ನಿಮ್ಮ ಅಡುಗೆ : ಜನಸಾಮಾನ್ಯರು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
2. ಆರೋಗ್ಯವೇ ಭಾಗ್ಯ : ಡಾ|| ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
3. ಮನೆ ಊಟ : ಒಬ್ಬರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು ಅವರೊಂದಿಗೆ ಮಾತುಕತೆ ನಡೆಸುವುದು.
4. ನಮ್ಮೂರ ಊಟ : ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಜನರಿಗೆ ತಿಳಿಸುವುದು.
5. ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.
6. ಟಿಫನ್ ಕ್ಯಾರಿಯರ್ : ಬೆಳಗ್ಗೆ ಆಫೀಸ್, ಸ್ಕೂಲ್ ಗೆ ಹೋಗೋರಿಗೆ ಡಬ್ಬಿಗೆ ಕಟ್ಟಿಕೊಡಬಹುದಾದ ಬಲು ಸುಲಭವಾಗಿರುವ ತಿನಿಸುಗಳನ್ನು ಹೇಳಲಾಗುತ್ತದೆ
7. ತಿಂಡಿ-ತಿನಿಸು : ಸಂಜೆಯ ಚಹಾಕ್ಕೆ ಸವಿಯಬಹುದಾದ ಹೊಸ ಬಗೆಯ ಕುರುಕ್ ತಿಂಡಿಗಳನ್ನು ಹೇಳಲಾಗುವುದು.
8. ಮುಖ್ಯ ಅಥಿತಿ : 'ಬೊಂಬಾಟ್ ಭೋಜನ' ಸೆಟ್ ಗೆ ಜನಪ್ರಿಯ ಕಲಾವಿದರನ್ನು, ಸಿನಿಮಾ ತಾರೆಯರನ್ನು ಕರೆಸಿ ಅವರಿಗಿಷ್ಟವಾದ ಅಡುಗೆಯನ್ನು ಮಾಡಿಕೊಡುವುದು.
ಹೀಗೆ ಅನೇಕ ಹೊಸ ಹೊಸ ಅಡುಗೆ ವಿಭಾಗಗಳನ್ನು ಈ ಬಾರಿಯ 'ಬೊಂಬಾಟ್ ಭೋಜನ ಸೀಸನ್ 4' ಹೊಂದಿದೆ.
ಇದನ್ನೂ ಓದಿ-Manoj Bajpayee: ಆಸ್ಕರ್ ಲೈಬ್ರರಿ ಫಿಲ್ಮ್‌ನಲ್ಲಿ 'ಜೋರಾಮ್'ಚಿತ್ರ ಸೇರ್ಪಡೆ
ನಳಮಹಾರಾಜ ಸಿಹಿ ಕಹಿ ಚಂದ್ರು ರವರ ನೇತೃತ್ವದಲ್ಲಿ ಶುರುವಾಗುತ್ತಿರುವ 'ಬೊಂಬಾಟ್ ಭೋಜನ ಸೀಸನ್ 4' ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ತಪ್ಪದೇ ವೀಕ್ಷಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.