ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಉತ್ತರ ಅಮೆರಿಕಾಗೆ ನೂತನ ವಿಮಾನ ಮಾರ್ಗವನ್ನು ಆರಂಭಿಸಿದ್ದು, ಭಾರತ ಮತ್ತು-ಉತ್ತರ ಅಮೇರಿಕಾ ನಡುವೆ ಆಗಸ್ಟ್ 15 ರಿಂದ ನಾನ್ ಸ್ಟಾಪ್ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ.
ಧ್ರುವ ಮಾರ್ಗದಲ್ಲಿ ಅಮೆರಿಕಕ್ಕೆ ಹೋಗುವುದು ಹೆಚ್ಚು ಸಮಯ ತೆಗೆದುಕೊಳ್ಳುವುದಲ್ಲದೆ ದೂರವೂ ಹೆಚ್ಚಾಗುತ್ತದೆ. ಈಗ ಭಾರತ ಮತ್ತು ಉತ್ತರ ಅಮೇರಿಕಾ ನಡುವೆ ನಾನ್ ಸ್ಟಾಪ್ ವಿಮಾನ ಹಾರಾಟ ಆರಂಭದಿಂದಾಗಿ ದೂರ ಕಡಿಮೆಯಾಗುವುದಲ್ಲದೆ ಇಂಧನವೂ ಉಳಿತಾಯವಾಗಲಿದೆ. ಪ್ರಸ್ತುತ, ಏರ್ ಇಂಡಿಯಾ ವಿಮಾನಗಳು ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರದ ಮಾರ್ಗಗಳ ಮೂಲಕ ಅಮೆರಿಕವನ್ನು ತಲುಪುತ್ತವೆ.
ಮಾಹಿತಿಯ ಪ್ರಕಾರ, ಆಗಸ್ಟ್ 15 ರಂದು ಏರ್ ಇಂಡಿಯಾ ಈ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ ಆರಂಭಿಸಲಿದ್ದು ಕ್ಯಾಪ್ಟನ್ ರಜನೀಶ್ ಶರ್ಮಾ ಮತ್ತು ಕ್ಯಾಪ್ಟನ್ ದಿಗ್ವಿಜಯ್ ಸಿಂಗ್ ಈ ವಿಮಾನ ಹಾರಾಟ ನಡೆಸಲಿದ್ದಾರೆ. ಏರ್ ಇಂಡಿಯಾದ ಈ ವಿಮಾನ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಲಿದೆ. ಈ ಮಾರ್ಗವನ್ನು ಸರಿಯಾಗಿ ಬಳಸಿದರೆ ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳಿಗೆ ಹೆಚ್ಚು ಪ್ರಯೋಜನವಾಗಲಿದೆ.