ಮನೆಯಲ್ಲಿಯೇ ನೈಸರ್ಗಿಕವಾಗಿ ಗುಲಾಬಿ ತುಟಿಗಳನ್ನು ಪಡೆಯುವುದು ಹೇಗೆ...

Pink Lips: ಬಣ್ಣಬಣ್ಣದ ಲಿಪ್‌ಸ್ಟಿಕ್‌ಗಳಿಂದ  ನಿಮ್ಮ ತುಟಿಗಳನ್ನು ಮರೆಮಾಚಲು  ಪ್ರಯತ್ನಿಸುತ್ತೀರಾ? ಈ ರೆಮಿಡಿಗಳನ್ನ ಅನುಸರಿಸೋದ್ರಿಂದ ನಿಮ್ಮ ತುಟಿಗಳಿಗೆ ನೈಸರ್ಗಿಕವಾದ ಗುಲಾಬಿ ಬಣ್ಣ ನೀಡಬಹುದು.  

Written by - Zee Kannada News Desk | Last Updated : Jan 4, 2024, 02:44 PM IST
  • ಬಣ್ಣಬಣ್ಣದ ಲಿಪ್ಸ್ಟಿಕ್ಗಳಿಂದ ನಿಮ್ಮ ತುಟಿಗಳನ್ನು ಮರೆಮಾಚಲು ಪ್ರಯತ್ನಿಸುತ್ತೀರಾ?
  • ತುಟಿಗಳಿಗೆ ನೈಸರ್ಗಿಕವಾದ ಗುಲಾಬಿ ಬಣ್ಣ ನೀಡಿ.
  • ಅಲೋವೆರಾ ಮತ್ತು ಜೇನು ಎರಡೂ ನಿಮ್ಮ ತುಟಿಗಳಿಗೆ ತೇವಾಂಶ ನೀಡುತ್ತದೆ.
ಮನೆಯಲ್ಲಿಯೇ ನೈಸರ್ಗಿಕವಾಗಿ ಗುಲಾಬಿ ತುಟಿಗಳನ್ನು ಪಡೆಯುವುದು ಹೇಗೆ... title=

Natural Remedies: ನಿಮ್ಮ ತುಟಿಗಳನ್ನ ಶಾಶ್ವತವಾಗಿ ಗುಲಾಬಿ ಬಣ್ಣ ಮಾಡಲು ಹಲವಾರು ಮನೆಮದ್ದುಗಳಿವೆ. ಹಾಗಾದರೆ ಮನೆಯಲ್ಲಿಯೇ ಇರುವ ಈ ಪದಾರ್ಥಗಳನ್ನ ಬಳಸಿ ನಿಮ್ಮ ತುಟಿಗಳಿಗೆ ಗುಲಾಬಿ ಬಣ್ಣ ನಿಡೋದು ಹೇಗೆ ಅಂತೀರಾ...

ಶುಗರ್ ಸ್ಕ್ರಬ್ ಬಳಸಿ
ತಲಾ ಒಂದು ಚಮಚದಂತೆ ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ, ಎರಡು ಚಮಚ ಸಕ್ಕರೆಯನ್ನ ಬಳಸಿ ಸ್ಕ್ರಬ್‌ ತಯಾರಿಸಿಕೊಳ್ಳಿ. ಇದರ ಮಿಶ್ರಣವನ್ನ ತುಟಿಗೆ ಹಚ್ಚಿ ಚರ್ಮವನ್ನ ನಿಧಾನವಾಗಿ ಸ್ಕ್ರಬ್‌ ಮಾಡಿ. ಜೋರಾಗಿ ಸ್ಕ್ರಬ್‌ ಮಾಡುವ ಕಾರಣ ಸೂಕ್ಷ್ಮವಾಗಿರುವ ತಟಿಯ ಚರ್ಮಕ್ಕೆ ಹಾನಿಯಾಗಬಹುದು. ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವು ನಿಮ್ಮ ತುಟಿಗಳಿಗೆ ತೇವಾಂಶವನ್ನು ನೀಡುತ್ತದೆ, ಸಕ್ಕರೆಯು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಈ ಸ್ಕ್ರಬ್‌ ಅನ್ನು ನೀವು ಹಾಗಾಗ ಬಳಸುವುದರಿಂದ ನಿಮ್ಮ ತುಟಿ ನೈಸರ್ಗಿಕವಾಗಿ ರೋಸ್‌ ಬಣ್ಣಕ್ಕೆ ತಿರುಗುತ್ತದೆ.

ಬೀಟ್ರೂಟ್ ಬಳಸಿ
ಸಿಪ್ಪೆ ಸುಲಿದ  ಬೀಟ್ರೂಟ್ ಅನ್ನು ತುರಿದು ಅದರ ರಸವನ್ನು ಹೊರತೆಗೆಯಿರಿ. ನಿಮ್ಮ ಬೆರಳ ತುದಿಯಿಂದ ಅದನ್ನು ನಿಮ್ಮ ತುಟಿಗಳ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ  ಬಿಡಿ. ನಂತರ ಅದನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ತುಟಿ ನೈಸರ್ಗಿಕವಾಗಿ ಬುರ್ಗಾಂಡಿ ಬಣ್ಣಕೆ ತಿರುಗುತ್ತದೆ.

ಇದನ್ನೂ ಓದಿ: ಈ ಅಡುಗೆ ಸಾಂಬಾರುಗಳು ಆರೋಗ್ಯಕ್ಕೆ ವರದಾನ

ಅಲೋವೆರಾ ಮತ್ತು ಜೇನುತುಪ್ಪವನ್ನು ಬಳಸಿ
ಫ್ರೆಶ್‌ ಆದ ಅಲೋವೆರಾ ಜೆಲ್ ಅನ್ನು ಒಂದು ಚಮಚದೊಂದಿಗೆ ಜೇನುತುಪ್ಪವನ್ನ ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. 15 ನಿಮಿಷಗಳ ನೀರಿನಿಂದ ತೊಳೆಯಿರಿ. ಅಲೋವೆರಾ ಮತ್ತು ಜೇನು ಎರಡೂ ನಿಮ್ಮ ತುಟಿಗಳಿಗೆ ತೇವಾಂಶ ನೀಡುತ್ತದೆ. ಹೀಗಾಗಿ ತುಟಿಗಳನ್ನು ಮೃದು ಮತ್ತು ಗುಲಾಬಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ.
 
ತುಟಿಯ ತೇವಾಂಶ ಕಾಪಾಡಿಕೊಳ್ಳಿ
ಎಲ್ಲಾ ಸಮಯದಲ್ಲೂ ನಿಮ್ಮ ತುಟಿಗಳನ್ನು ತೇವವಾಗಿ ಇಡುವುದರಿಂದ ಅದನ್ನು  ಗುಲಾಬಿ ಬಣ್ಣದಲ್ಲಿ ಇರಿಸಲು ಸಹಾಯ ಮಾಡುತ್ತದೆ. ನೇರವಾಗಿ ಸಸ್ಯದಿಂದ ತೆಗೆದ ಅಲೋವೆರಾ ಜೆಲ್ ಅನ್ನು ಬಳಸುವುದರಿಂದ ನಿಮ್ಮ ತುಟಿಗಳನ್ನು  ಹೈಡ್ರೇಟ್  ಮಾಡುಬಹುದು. ಈ ಮೂಲಕ ತುಟಿಗಳ ನೈಸರ್ಗಿಕ ಗುಲಾಬಿ ಸತ್ವವನ್ನ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಬಳ್ಳಿಯ ಎಲೆ… ಅರೆದು ಹಚ್ಚಿದರೆ ಸಾಕು

ಹೊಳಗಿನಿಂದ ಹೈಡ್ರೇಟ್ ಮಾಡಿ
ಹೈಡ್ರೇಟೆಡ್ ಆಗಿರಲು ಹೆಚ್ಚು ನೀರು ಕುಡಿಯುವುದು ತುಟಿಯ ಒಣಗುವಿಕೆ ಮತ್ತು ಒಡೆದ ಚರ್ಮವನ್ನು ತಡೆಯುತ್ತದೆ. ಇದು ನಿಮ್ಮ ತುಟಿಗಳು ಮೃದುವಾಗಿರುವಂತೆ ಕಣಲು ಸಹಾಯ ಮಾಡುತ್ತದೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News