"ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು. ಬಿಜೆಪಿಯವರ ದೇವಸ್ಥಾನವಾಗಕೂಡದು"

 ಅಯೋಧ್ಯ ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು. ಬಿಜೆಪಿಯವರ ದೇವಸ್ಥಾನವಾಗಕೂಡದು ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

Written by - Zee Kannada News Desk | Last Updated : Jan 4, 2024, 12:23 AM IST
  • ರಾಮ, ಲಕ್ಷ್ಮಣ ಮತ್ತು ಸೀತೆ ಎಲ್ಲಿಯೂ ಸಹ ತಮ್ಮನ್ನ ತಾವು ದೇವರುಗಳು ಎಂದು ಬಿಂಬಿಸಿಕೊಂಡಿಲ್ಲ
  • ರಾಮ ಎಲ್ಲಿಯೂ ದೇವಸ್ಥಾನವನ್ನು ಬಯಸಿದವನಲ್ಲ ರಾಮನ ಆದರ್ಶಗಳನ್ನು ನಾವು ಗೌರವಿಸುತ್ತೇವೆ
  • ರಾಮಮಂದಿರ ನಿರ್ಮಾಣಕ್ಕೆ ಮೀಸಲಾಗಿರುವ ಟ್ರಸ್ಟನ್ನು ಮೋದಿ ಟೀಮ್ ಸಂಪೂರ್ಣ ರಾಜಕೀಯ ಕಾರಣಗಳಿಗಾಗಿ ಹೈಜಾಕ್ ಮಾಡಿದೆ
"ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು. ಬಿಜೆಪಿಯವರ ದೇವಸ್ಥಾನವಾಗಕೂಡದು" title=
file photo

ಬೆಂಗಳೂರು: ಅಯೋಧ್ಯ ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು. ಬಿಜೆಪಿಯವರ ದೇವಸ್ಥಾನವಾಗಕೂಡದು ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:

ರಾಮ ಲಲ್ಲಾನ ಪೂಜೆಗೆ ಅಯೋಧ್ಯೆಯಲ್ಲಿ ಮೊದಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ರಾಜೀವ್ ಗಾಂಧಿ ಅವರು.ಬಿಜೆಪಿಯವರ ಸಂಸ್ಕೃತಿ ರಾಯಾಯಣದ ಅಥವಾ ಸಂವಿಧಾನದ ಆದರ್ಶಗಳನ್ನು ಆಧರಿಸಿ ಇವೆಯೇ ಎಂಬುದು ನನ್ನ ಪ್ರಶ್ನೆ.ರಾಜೀವ್ ಗಾಂಧಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ರಾಮ ಲಲ್ಲಾನ ಪೂಜೆಗೆ ಅವಕಾಶ ನೀಡಿದರು

ರಾಮಾಯಣದಲ್ಲಿ ಸುಮಾರು 24,000 ಶ್ಲೋಕಗಳಿವೆ 60 ಸ್ವರ್ಗಗಳಿವೆ ಮತ್ತು ಹೇಳು ಕಾಂಡಗಳಿವೆ.ರಾಮಾಯಣದ ಸ್ವರ್ಗ ಒಂದು ಮತ್ತು ಎರಡರಲ್ಲಿ ಸ್ಪಷ್ಟವಾಗಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ ಯಾವುದೇ ದೇವತೆಗಳು ಕಿನ್ನರ ಕಿಂಪುರುಷರಿಂದ ರಾವಣನಿಗೆ ಸಾವಿಲ್ಲ. ಸಾಮಾನ್ಯ ಮನುಷ್ಯನಿಂದ ಮಾತ್ರ ಸಾವು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮಲ ಹೊರುವ ಪದ್ಧತಿ.! 

ರಾಮ, ಲಕ್ಷ್ಮಣ ಮತ್ತು ಸೀತೆ ಎಲ್ಲಿಯೂ ಸಹ ತಮ್ಮನ್ನ ತಾವು ದೇವರುಗಳು ಎಂದು ಬಿಂಬಿಸಿಕೊಂಡಿಲ್ಲ.ರಾಮ ಎಲ್ಲಿಯೂ ದೇವಸ್ಥಾನವನ್ನು ಬಯಸಿದವನಲ್ಲ ರಾಮನ ಆದರ್ಶಗಳನ್ನು ನಾವು ಗೌರವಿಸುತ್ತೇವೆ.ರಾಮಮಂದಿರ ನಿರ್ಮಾಣಕ್ಕೆ ಮೀಸಲಾಗಿರುವ ಟ್ರಸ್ಟನ್ನು
ಮೋದಿ ಟೀಮ್ ಸಂಪೂರ್ಣ ರಾಜಕೀಯ ಕಾರಣಗಳಿಗಾಗಿ ಹೈಜಾಕ್ ಮಾಡಿದೆ.

ಫೈಸಲಾಬಾದ್, ಲಕ್ನೋ ನ್ಯಾಯಾಲಯಗಳಲ್ಲಿ ರಾಮಮಂದಿರ ನಿರ್ಮಾಣ ಕುರಿತಾದ ಪ್ರಕರಣಗಳು ನಡೆಯುತ್ತಿದ್ದಾಗಲೇ ಅವಕಾಶ ನೀಡಲಾಯಿತು.ರಾಮಮಂದಿರದ ಬಾಗಿಲು ತೆಗೆಸಿದವರಿಗೆ ರಾಮ ಮಂದಿರವನ್ನು ಕಟ್ಟುವಂತಹ ಇರಾದೆ ಇರಲಿಲ್ಲವೇ.ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಮಾಯಣ ಕರ್ತೃ ವಾಲ್ಮೀಕಿ ಅವರ ಹೆಸರಿಟ್ಟಿರುವುದು ಸ್ವಾಗತ ಅರ್ಹ.ರಾಮನ ಆದರ್ಶಗಳನ್ನು ಬಿಜೆಪಿಯವರು ಪಾಲನೆ ಮಾಡುತ್ತಿದ್ದಾರೆಯೇ?

ಇತ್ತೀಚೆಗೆ ಸಂಸತ್ ಭವನದ ಮೇಲೆ ಕಿಡಿಗೇಡಿಗಳಿಂದ ಕಲರ್ ದಾಳಿ ಆಯಿತು. ಇದು ಕೇಂದ್ರ ಸರ್ಕಾರದ ಭದ್ರತೆಯ ವೈಫಲ್ಯವಲ್ಲವೇ? ಬೇಹುಗಾರಿಕಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಲಿಲ್ಲವೇ.ರಾಮಾಯಣ ಮಹಾಭಾರತ ನಡೆದಿದ್ದೆ ಭಾರತದಲ್ಲಿ ಹೆಣ್ಣನ್ನು ಕಾಪಾಡಲು. ಆದರೆ ಇಂದು ಇಡೀ ದೇಶ ಅತ್ಯಾಚಾರದ ಕೋಪ ವಾಗಿದೆ. ಬಿಜೆಪಿಯವರೇ ನೀವು ನಿಮ್ಮ ಕುಟುಂಬವನ್ನು, ಭಾರತವನ್ನು ಎಂದಾದರೂ ರಕ್ಷಣೆ ಮಾಡಿದ್ದೀರಾ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ನಮ್ಮ ಹೆಂಡತಿಯನ್ನೇ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಹುಬ್ಬಳ್ಳಿಯಲ್ಲಿ ಬಂದಿತನಾಗಿರುವ ವ್ಯಕ್ತಿ ಶ್ರೀಕಾಂತ್ ಪೂಜಾರಿ ಮೇಲೆ ಸುಮಾರು 14 ರಿಂದ 16 ಪ್ರಕರಣಗಳಿವೆ.ಮಟ್ಕಾ ಜೂಜಾಟಗಳಲ್ಲಿ ಒಂದು ಪ್ರಕರಣ, ಅಕ್ರಮ ಸರಾಯಿ ಸರಬರಾಜು ಪ್ರಕರಣದಲ್ಲಿ 9 ಕೇಸಸ್‌ಗಳು ದೊಂಬಿ 3  ಪ್ರಕರಣಗಳಿವೆ.ಆರೋಪಿ ಶ್ರೀಕಾಂತ್ ಪೂಜಾರಿಯು ಈಗಾಗಲೇ ಒಂದಷ್ಟು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಅಕ್ರಮ ಸಾರಾಯಿ ಮಾರಾಟ, ಮಟ್ಕಾ ಜೂಜು ಮಾಡುವ ವ್ಯಕ್ತಿ ನಿಜವಾದ ಕರಸೇವಕನೇ, ತುಂಬಿ ಮಾಡುವವರು ನಿಜವಾದ ಕರ ಸೇವಕರೇ?

ಇದನ್ನೂ ಓದಿ: ವಿವಿಧ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಕಾನೂನು ಬಾಹಿರ ಕೆಲಸ ಗಳಲ್ಲಿ ತೊಡಗಿಕೊಂಡಿರುವವನನ್ನು ಬಿಜೆಪಿ ತನ್ನ ಪಕ್ಷದವನು ಎಂದು ಘೋಷಿಸುತ್ತದೆಯೇ. ರಾಮಮಂದಿರ ಪ್ರಕರಣವನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ.ಜೂಜು ಮಟ್ಕಾ ಪ್ರಕರಣದಲ್ಲಿ ಆಗಿದ್ದವನ ಪರವಾಗಿ ಅಯೋಧ್ಯೆಯಲ್ಲಿ ಸಿದ್ದರಾಮಯ್ಯ ಅವರ ಫೋಟೊ ಸುಡುವುದು. ರಾಜ್ಯದಲ್ಲಿ ಪ್ರತಿಭಟನೆ ಮಾಡುವುದು ಈ ಎಲ್ಲಾ ಕ್ರಿಯೆಗಳನ್ನು ನೋಡುತ್ತಿದ್ದರೆ ಬಿಜೆಪಿ ಸಂಪೂರ್ಣವಾಗಿ ದಿವಾಳಿಯಾಗಿದೆ.ರಾಜಕೀಯ ಕಾರಣಗಳಿಗೋಸ್ಕರ ಧರ್ಮ ಮತ್ತು ದೇವರನ್ನ ಕೊಳ್ಳುವುದು ಅಪರಾಧ. ಧರ್ಮ ಮತ್ತು ದೇವರನ್ನ ಬಳಸಿಕೊಂಡವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ ಅವರನ್ನು ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ.

ರಾಮಾಯಣ,ರಾಮ ಮತ್ತು ಮಹರ್ಷಿ ವಾಲ್ಮೀಕಿ ಅವರಿಗೆ ಬಿಜೆಪಿ ಅಪಚಾರ. ಅಯೋಧ್ಯ ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು. ಬಿಜೆಪಿಯವರ ದೇವಸ್ಥಾನವಾಗಕೂಡದು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಇವರು ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆಯೇ ಹೊರತು ಸ್ವಂತ ಆಸಕ್ತಿಯಿಂದ ಮಾಡುತ್ತಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News