ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಒಟ್ಟು 29 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಧ್ಯಪ್ರದೇಶದ ಹೊರತಾಗಿ, ಛತ್ತೀಸ್‌ಗಢದಲ್ಲಿಯೂ ಧಾರಾಕಾರ ಮಳೆಯಾಗಬಹುದು ಎಚ್ಚರಿಕೆ ನೀಡಲಾಗಿದೆ.
ಎರಡೂ ರಾಜ್ಯಗಳ ಹೆಚ್ಚಿನ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗಬಹುದು ಎಂದು ಇಲಾಖೆ ಎಚ್ಚರಿಸಿರುವ ಹವಾಮಾನ ಇಲಾಖೆ ಹಲವೆಡೆ ಆರೆಂಜ್ ಅಲರ್ಟ್ ನೀಡಿದ್ದು, ಇನ್ನೂ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಇದರಲ್ಲಿ ಮಧ್ಯಪ್ರದೇಶದ ಅನುಪ್ಪೂರ್, ದಿಂಡೋರಿ, ಉಮರಿಯಾ, ಶಹಡೋಲ್, ಕಾಟ್ನಿ, ಜಬಲ್ಪುರ್, ಮಾಂಡ್ಲಾ, ಬಾಲಘಾಟ್, ಚಿಂದ್ವಾರ, ಸಿಯೋನಿ, ಸಾಗರ್, ದಾಮೋ, ರೈಸನ್, ವಿದಿಶಾ, ಸೆಹೋರ್, ಹೋಶಂಗಾಬಾದ್, ಬೆತುಲ್, ಹರ್ದಾ ಅಲಿರಾಜ್‌ಪುರ, ಹಾಬುವಾ, ಬರ್ವಾನಿ, ಧಾರ್, ನೀಮುಚ್, ಮಾಂಡ್‌ಸೌರ್, ಶಿಯೋಪೂರ್ ಕಲಾ ಖಾರ್ಗೋನ್, ರಾಜ್‌ಗಢ, ಗುನಾ, ಶಿಯೋಪುರ್, ಅಶೋಕ್ ನಗರ ಮತ್ತು ಭೋಪಾಲ್ ಜಿಲ್ಲೆಗಳು ಸೇರಿವೆ.
ಹವಾಮಾನ ಇಲಾಖೆ ಛತ್ತೀಸ್‌ಗಢದಲ್ಲಿ ಕೂಡ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಿದೆ. ಇದು ಪ್ರಬಲ ಮಾನ್ಸೂನ್ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ಛತ್ತೀಸ್‌ಗಢದ ರಾಯ್‌ಪುರ, ಬಲೋದಾ ಬಜಾರ್, ಮಹಾಸಮುಂಡ್, ಧಮ್ತಾರಿ, ನಾರಾಯಣಪುರ, ಬಸ್ತಾರ್, ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾದಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.
ಅದೇ ಸಮಯದಲ್ಲಿ, ಮುಂದಿನ 24 ಗಂಟೆಗಳಲ್ಲಿ ಕವರ್ಧ, ಬೆಮೆತ್ರಾ, ಬಿಲಾಸ್ಪುರ್, ಜಂಜಗೀರ್ ಮತ್ತು ಛತ್ತೀಸ್‌ಗಢದ ಕಂಕರ್ ಮತ್ತು ಮುಂದಿನ 48 ಗಂಟೆಗಳ ಕಾಲ ರಾಜನಂದಗಾಂವ್, ಬಲೋಡ್ ಮತ್ತು ದುರ್ಗ್‌ನಲ್ಲಿ ಆರೆಂಜ್ ಅಲರ್ಟ್ ಜಾರಿ ಮಾಡಲಾಗಿದೆ.