ಗುಜರಾತ್ನಲ್ಲಿ ಶತಕ ಪೂರೈಸಿದ ಬಿಜೆಪಿ

ಶುಕ್ರವಾರ ಲುನವಾಡಾದ ನರ್ಲಾನ್ ಶಾಸಕ ರತನ್ ಸಿಂಗ್ ರಾಥೋಡ್ ಅವರು ಬಿಜೆಪಿಯ ಸೇರಿ, ಬಿಜೆಪಿ 99 ರಿಂದ ಹೊರಬರಲು ಬೆಂಬಲ ನೀಡಿದರು. ರಾಥೋಡ್ ಅವರ ಬೆಂಬಲವನ್ನು ಪಡೆದ ನಂತರ, ರಾಜ್ಯದಲ್ಲಿ ಬಿಜೆಪಿ ಶಾಸಕರು ಸಂಖ್ಯೆ 100 ಕ್ಕೆ ಏರಿದೆ.

Last Updated : Dec 22, 2017, 04:28 PM IST
  • ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದಿದೆ.
  • ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿರುವ ಲುನವಾಡಾದ ಸ್ವತಂತ್ರ ಶಾಸಕ.
  • ವಿಜಯ್ ರೂಪಾನಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.
ಗುಜರಾತ್ನಲ್ಲಿ ಶತಕ ಪೂರೈಸಿದ ಬಿಜೆಪಿ title=

ನವ ದೆಹಲಿ: ಬಿಜೆಪಿಗೆ ಈ ಬಾರಿ ನೂರು ಸ್ಥಾನಗಳನ್ನು ಸ್ಪರ್ಶಿಸುವುದು ಸಹ ಕಷ್ಟಕರವಾಗಿತ್ತು. ಇದರಿಂದಾಗಿ ಬಿಜೆಪಿ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಮಿಷನ್ 150 ಪಡೆಯಲು ವಿಫಲವಾಗಿತ್ತು. ಪಕ್ಷವು ಇಲ್ಲಿ 99 ಸ್ಥಾನಗಳಲ್ಲಿ ಸಿಲುಕಿ ಮೂರಂಕೆಯ ಸ್ಥಾನವನ್ನೂ ಪಡೆಯಲಿಲ್ಲ ಎಂಬ ಟೀಕೆಗೂ ಗುರಿಯಾಗಿತ್ತು. ಕಳೆದ ಎರಡು ದಶಕಗಳಲ್ಲಿ ಈ ಬಾರಿ ಪಕ್ಷವು ರಾಜ್ಯದಲ್ಲಿ ಅತಿ ಕಡಿಮೆ ಸ್ಥಾನಗಳನ್ನು ಹೊಂದಿತ್ತು. ಆದರೆ ಬಿಜೆಪಿಗೆ ಓರ್ವ ಶಾಸಕ ಸೇರ್ಪಡೆಗೊಳ್ಳುವ ಮೂಲಕ ಗುಜರಾತ್ನಲ್ಲಿ ಶತಕ ಪೂರೈಸಿದೆ. ಶುಕ್ರವಾರದಂದು ಲುನವಾಡಾದ ನರ್ಲಾನ್ ಶಾಸಕ ರತನ್ ಸಿಂಗ್ ರಾಥೋಡ್ ಅವರು ಬಿಜೆಪಿಗೆ ಬೆಂಬಲ ನೀಡಿದರು. ರಾಥೋಡ್ ಅವರ ಬೆಂಬಲವನ್ನು ಪಡೆದ ನಂತರ, ರಾಜ್ಯದಲ್ಲಿ ಬಿಜೆಪಿ ಶಾಸಕರು ಸಂಖ್ಯೆ 100 ಕ್ಕೆ ಏರಿದೆ.

ರತನ್ ಸಿಂಗ್ ರಾಥೋಡ್ ಹಳೆಯ ಕಾಂಗ್ರೆಸ್ ನಾಯಕ. ಆದರೆ ಕೆಲವು ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷದಿಂದ ಅವರನ್ನು ಅಮಾನತುಗೊಳಿಸಿದೆ. ಈ ಬಾರಿ ಅವರು ಕಾಂಗ್ರೆಸ್ನಿಂದ ಟಿಕೆಟ್ ಬೇಡಿದ್ದರು, ಆದರೆ ಪಕ್ಷವು ಅವರಿಗೆ ಟಿಕೆಟ್ ನೀಡಲಿಲ್ಲ. ನಂತರ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯ ಸಾಧಿಸಿದರು. ಇದೀಗ ಇಂದು ಅವರು ಬಿಜೆಪಿಗೆ ತಮ್ಮ ಬೆಂಬಲ ನೀಡುವ ಹೇಳಿಕೆ ನೀಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ವಿಜಯವು ಸೀಟುಗಳ ಅಂಕಿ ಅಂಶಗಳಿಂದ ದೂರವಾಗಿದ್ದರೂ ಸಹ, ಬಿಜೆಪಿ ಬಹುಮತ ಹೊಂದಿದೆ. ಮತ್ತೊಮ್ಮೆ ರೂಪಾನಿ ಅವರನ್ನು ಮುಖ್ಯಮಂತ್ರಿಯಾಗಿ ಗದ್ದುಗೆಗೇರಿಸಲು ತಯಾರಿ ಸಹ ನಡೆದಿದೆ.

ಗುಜರಾತ್ನಲ್ಲಿ ಸತತ ಆರನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದು, ವಿಜಯ ಸಾಧಿಸಿದೆ. ಸ್ವಲ್ಪ ಸೀಟುಗಳ ಅಂತರದಿಂದ ಗೆದ್ದಿರುವ ಬಿಜೆಪಿಯಲ್ಲಿ ಸಹ ಅಪಾರ ಉತ್ಸಾಹವಿದೆ. 

Trending News