Reliance Jio: ಈ ಯೋಜನೆಯಲ್ಲಿ ಪ್ರೈಮ್ ವಿಡಿಯೋ ಸಹಿತ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Reliance Jio: ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಜಬರ್ದಸ್ತ್ ಪ್ಲಾನ್ಸ್ ಪರಿಚಯಿಸಿದ್ದು ಈ ಯೋಜನೆಯಲ್ಲಿ ಪ್ರೈಮ್ ವಿಡಿಯೋ  ಸೇರಿದಂತೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿವೆ. 

Written by - Yashaswini V | Last Updated : Dec 15, 2023, 01:25 PM IST
  • ತನ್ನ ಗ್ರಾಹಕರಿಗಾಗಿ ಮೂರು ಭರ್ಜರಿ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ಜಿಯೋ
  • ಈ ಯೋಜನೆಗಳಲ್ಲಿ ಜಿಯೋಟಿವಿ ಪ್ರೀಮಿಯಂ ಚಂದಾದಾರಿಕೆಯ ಜೊತೆಗೆ 14 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ಸಹ ಉಚಿತ ಪ್ರವೇಶ ಲಭ್ಯ
Reliance Jio: ಈ ಯೋಜನೆಯಲ್ಲಿ ಪ್ರೈಮ್ ವಿಡಿಯೋ ಸಹಿತ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ  title=

Reliance Jio: ಟೆಲಿಕಾಂ ಜಗತ್ತಿನ ಅತ್ಯಂತ ಜನಪ್ರಿಯ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮೂರು ಭರ್ಜರಿ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಜಿಯೋಟಿವಿ ಪ್ರೀಮಿಯಂ ಚಂದಾದಾರಿಕೆಯ ಜೊತೆಗೆ 14 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ಸಹ ಉಚಿತ ಪ್ರವೇಶ ಲಭ್ಯವಾಗಲಿದೆ.  ಈ ಯೋಜನೆಗಳು ಇಂದಿನಿಂದ (ಡಿಸೆಂಬರ್ 15) ಗ್ರಾಹಕರಿಗೆ ಲಭ್ಯವಾಗಲಿದೆ. 

ಯಾವುದಾ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳು: 
ರಿಲಯನ್ಸ್ ಜಿಯೋ ಇಂದಿನಿಂದ ಪರಿಚಯಿಸುತ್ತಿರುವ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳು ಯಾವುವೆಂದರೆ...
* 398 ರೂ. ಪ್ರಿಪೇಯ್ಡ್ ಯೋಜನೆ
* 1198 ರೂ. ಪ್ರಿಪೇಯ್ಡ್ ಯೋಜನೆ
* 4498 ರೂ. ಪ್ರಿಪೇಯ್ಡ್ ಯೋಜನೆ

JioTV ಪ್ರೀಮಿಯಂ ಬಂಡಲ್ ಪ್ರಿಪೇಯ್ಡ್ ಯೋಜನೆಗಳ ಪ್ರಯೋಜನಗಳು: 
398 ರೂ. ಪ್ರಿಪೇಯ್ಡ್ ಯೋಜನೆ: 
28 ದಿನಗಳವರೆಗೆ ಮಾನ್ಯತೆಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ,ಅನಿಯಮಿತ ಕರೆ ಮತ್ತು ದೈನಂದಿನ 100 ಉಚಿತ ಎಸ್ಎಂಎಸ್ ಸೌಲಭ್ಯಗಳು ಲಭ್ಯವಾಗಲಿದೆ. ಇದರೊಂದಿಗೆ ಗ್ರಾಹಕರಿಗೆ JioTV ಪ್ರೀಮಿಯಂ (12 OTT ಗಳು) ಗೆ ಚಂದಾದಾರಿಕೆಯೂ ಲಭ್ಯವಾಗಲಿದೆ. 

ಇದನ್ನೂ ಓದಿ- ಪತಿ ಪತ್ನಿ ಪರಸ್ಪರರ ವಾಟ್ಸಾಪ್ ಮೆಸೇಜ್ ಪರಿಶೀಲಿಸಬಹುದೇ? ಕಾನೂನು ಏನು ಹೇಳುತ್ತೇ?

1198 ರೂ. ಪ್ರಿಪೇಯ್ಡ್ ಯೋಜನೆ: 
1198 ರೂ. ಪ್ರಿಪೇಯ್ಡ್ ಯೋಜನೆಯು 84 ದಿನಗಳವರೆಗೆ ಮಾನ್ಯತೆ ಹೊಂದಿರಲಿದ್ದು, ಇದರಲ್ಲಿ ಗ್ರಾಹಕರು ನಿತ್ಯ 2GB ಡೇಟಾ, ಅನ್ಲಿಮಿಟೆಡ್ ಕರೆ ಸೌಲಭ್ಯ, ನಿತ್ಯ 100 ಉಚಿತ ಎಸ್‌ಎಮ್‌ಎಸ್ ಜೊತೆಗೆ JioTV ಪ್ರೀಮಿಯಂ (14 OTT ಗಳು) ಚಂದಾದಾರಿಗೆ ಪ್ರಯೋಜನವನ್ನು ಆನಂದಿಸಬಹುದು. 

* 4498 ರೂ. ಪ್ರಿಪೇಯ್ಡ್ ಯೋಜನೆ: 
ರಿಲಯನ್ಸ್ ಜಿಯೋದ 4498 ರೂ. ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ಯೋಜನೆಯಾಗಿದ್ದು, ಇದರ ವ್ಯಾಲಿಡಿಟಿ 365ದಿನಗಳವರೆಗೆ ಇರಲಿದೆ. ಇದರಲ್ಲಿ ಪ್ರತಿನಿತ್ಯ 2ಜಿ‌ಬಿ ಡೇಟಾ, ಅನಿಯಮಿತ ಧ್ವನಿ ಕರೆ, ನಿತ್ಯ 100 ಉಚಿತ  ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಳಿವೆ. ಮಾತ್ರವಲ್ಲ ಈ ಯೋಜನೆಯು ಜಿಯೋಟಿವಿ ಪ್ರೀಮಿಯಂ (14 OTT ಗಳು), ಆದ್ಯತೆಯ ಗ್ರಾಹಕ ಸೇವೆ ಮತ್ತು JioCinema ಪ್ರೀಮಿಯಂ ಕೂಪನ್‌ಗಳನ್ನು ಸಹ ಒಳಗೊಂಡಿರಲಿದೆ. 

ಇದನ್ನೂ ಓದಿ- iPhone ಪ್ರಿಯರಿಗೆ ಗುಡ್ ನ್ಯೂಸ್: ಆಪಲ್ ತರುತ್ತಿದೆ 50,000ರೂ.ಗಿಂತ ಕಡಿಮೆ ಬೆಲೆಯ ಐಫೋನ್!

ಜಿಯೋ ಟಿವಿ ಒಳಗೊಂಡಿರುವ 14 ಅಪ್ಲಿಕೇಶನ್‌ಗಳೆಂದರೆ: 
JioCinema ಪ್ರೀಮಿಯಂ
Disney+ Hotstar
ZEE5
SonyLIV
ಪ್ರೈಮ್ ವೀಡಿಯೊ (ಮೊಬೈಲ್)
Lionsgate Play
Discovery+
Docubay
Hoichoi
SunNxt
Planet Marathi
Chaupal
EpicOn
Kanchha Lannka

ಜಿಯೋಟಿವಿ ಪ್ರೀಮಿಯಂ ಬಳಸುವ ವಿಧಾನ: 
JioTV ಪ್ರೀಮಿಯಂ ಅನ್ನು ಬಳಸಲು, ಮೊದಲಿಗೆ ನೀವು ಅರ್ಹ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಬೇಕಾಗುತ್ತದೆ. ಒಮ್ಮೆ ನೀವು ಸೈನ್ ಇನ್ ಮಾಡಿದ ನಂತರ, ನೀವು JioTV ಪ್ರೀಮಿಯಂ ಟ್ಯಾಬ್ ಅನ್ನು ನೋಡುತ್ತೀರಿ. ಈ ಟ್ಯಾಬ್‌ನಲ್ಲಿ, ನೀವು 14 OTT ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು. ಡಿಸ್ನಿ + ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೋ (ಮೊಬೈಲ್) ಆಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News