ಸಲಾರ್‌ ಸಿನಿಮಾ ವೀಕ್ಷಣೆಗೆ ಮಕ್ಕಳಿಗೆ ಅವಕಾಶ ಇಲ್ಲ! ಚಿತ್ರದ ರನ್‌ಟೈಮ್‌ ಎಷ್ಟು ಗೊತ್ತಾ?

Salaar: 'ಸಲಾರ್' ಸಿನಿಮಾ ಸೆನ್ಸಾರ್ ಕೆಲಸ ಮುಗಿಸಿ ರಿಲೀಸ್‌ನತ್ತ ಮುಖ ಮಾಡಿದ್ದು, ಚಿತ್ರದಲ್ಲಿ ವೈಲೆನ್ಸ್, ಕ್ರೌರ್ಯ, ಅಶ್ಲೀಲತೆ  ಹೆಚ್ಚಾಗಿರುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'ಎ'ಸರ್ಟಿಫಿಕೇಟ್ ನೀಡಿ, ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ಥಿಯೇಟರ್‌ಗೆ ಹೋಗಿ ಇಂತಹ ಸಿನಿಮಾಗಳನ್ನು ನೋಡಲು ಅವಕಾಶ ಇರುತ್ತದೆ. 

Written by - Zee Kannada News Desk | Last Updated : Dec 11, 2023, 04:02 PM IST
  • ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಲಿದ್ದು, ಚಿತ್ರಕ್ಕೆ ಫೈನಲ್ ಟಚ್ ಕೊಡುವ ಪ್ರಯತ್ನ ನಡೀತಿದೆ.
  • ಸಲಾರ್' ಸಿನಿಮಾ ಸೆನ್ಸಾರ್ ಕೆಲಸ ಮುಗಿಸಿ ರಿಲೀಸ್‌ನತ್ತ ಮುಖ ಮಾಡಿದ್ದು, ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ.
  • ಸಲಾರ್ ಚಿತ್ರದ ರನ್‌ಟೈಮ್ 2 ಗಂಟೆ 55 ನಿಮಿಷ ಎನ್ನಲಾಗುತ್ತಿದೆ. ಕೆಲವರು ಸಿನಿಮಾ ಬಹಳ ದೊಡ್ಡದಾಯ್ತು, ಪ್ರೇಕ್ಷಕರನ್ನು ಅಷ್ಟು ಹೊತ್ತು ಹಿಡಿದಿಟ್ಟುಕೊಳ್ಳುವುದು ಸಾಧ್ಯಾನಾ? ಎನ್ನುತ್ತಿದ್ದಾರೆ.
ಸಲಾರ್‌ ಸಿನಿಮಾ ವೀಕ್ಷಣೆಗೆ ಮಕ್ಕಳಿಗೆ ಅವಕಾಶ ಇಲ್ಲ! ಚಿತ್ರದ ರನ್‌ಟೈಮ್‌ ಎಷ್ಟು ಗೊತ್ತಾ? title=

Salaar Update: ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಲಿದ್ದು, ಚಿತ್ರಕ್ಕೆ ಫೈನಲ್ ಟಚ್ ಕೊಡುವ ಪ್ರಯತ್ನ ನಡೀತಿದೆ. ಭರ್ಜರಿ ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ಮಾಡ್ತಿದ್ದ ಸಿನಿತಂಡ, ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆಗಿದ್ದು ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಸಲಾರ್' ಚಿತ್ರ ನಿರ್ಮಾಣ ಮಾಡಿದ್ದು, ಇದರಲ್ಲಿ ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಈ ಚಿತ್ರಕ್ಕೂ ಜೊತೆಯಾಗಿದ್ದಾರೆ. 

ಸಲಾರ್‌ನಲ್ಲಿ ಪ್ರಭಾಸ್ ಜೋಡಿಯಾಗಿ ಶೃತಿ ಹಾಸನ್ ಮಿಂಚುತ್ತಿದ್ದು, ಇನ್ನುಳಿದಂತ ಜಗಪತಿ ಬಾಬು, ದೇವರಾಜ್, ಪ್ರಮೋದ್, ಈಶ್ವರಿ ರಾವ್, ಗರುಡ ರಾಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ 'ಸಲಾರ್' ಖದರ್ ಹೆಚ್ಚಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್ 'ಸಲಾರ್' ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಸಲಾರ್‌' ಜೊತೆಗೆ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗಲಿದ್ದು, ಈ ಎರಡೂ ಚಿತ್ರಗಳ ನಡುವೆ ಕ್ರಿಸ್‌ಮಸ್‌ ಸಂಭ್ರಮದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್‌ ಏರ್ಪಡಲಿದೆ. 

ಇದನ್ನೂ ಓದಿ: ಸಲಾರ್‌ 2ನೇ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್: ಕ್ರೇಜ್ ದುಪ್ಪಟ್ಟು ಮಾಡಲು ರೆಡಿಯಾಗುತ್ತಿದೆ ಹೊಸ ಝಲಕ್!

ಸದ್ಯ 'ಸಲಾರ್' ಸಿನಿಮಾ ಸೆನ್ಸಾರ್ ಕೆಲಸ ಮುಗಿಸಿ ರಿಲೀಸ್‌ನತ್ತ ಮುಖ ಮಾಡಿದ್ದು, ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದಲ್ಲಿ ವೈಲೆನ್ಸ್, ಕ್ರೌರ್ಯ, ಅಶ್ಲೀಲತೆ  ಹೆಚ್ಚಾಗಿರುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'ಎ'ಸರ್ಟಿಫಿಕೇಟ್ ನೀಡಿ, ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ಥಿಯೇಟರ್‌ಗೆ ಹೋಗಿ ಇಂತಹ ಸಿನಿಮಾಗಳನ್ನು ನೋಡಲು ಅವಕಾಶ ಇರುತ್ತದೆ. , ಇದರ ಜೊತೆ ಚಿತ್ರದ ರನ್‌ಟೈಮ್  2 ಗಂಟೆ 55 ನಿಮಿಷ ಎನ್ನಲಾಗುತ್ತಿದೆ. ಕೆಲವರು ಸಿನಿಮಾ ಬಹಳ ದೊಡ್ಡದಾಯ್ತು, ಪ್ರೇಕ್ಷಕರನ್ನು ಅಷ್ಟು ಹೊತ್ತು ಹಿಡಿದಿಟ್ಟುಕೊಳ್ಳುವುದು ಸಾಧ್ಯಾನಾ? ಎನ್ನುತ್ತಿದ್ದರೂ, ಚಿತ್ರತಂಡ ಮಾತ್ರ ಬಹಳ ಭರವಸೆಯಿಂದ ಇದೆ. 

ಇನ್ನು ಸಲಾರ್‌ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದು, ಚಿತ್ರದಲ್ಲಿ ಹಾಡುಗಳು ಇದ್ಯಾ? ಇಲ್ವಾ? ಎಂದು ಕೇಳುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಅಷ್ಟಾಗಿ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಅದರಲ್ಲಿ ಪ್ರಭಾಸ್ ಸನ್ನಿವೇಶಗಳು ಕಮ್ಮಿ ಇದ್ದು, ಈ ಕಾರಣಕ್ಕೆ ಚಿತ್ರತಂಡ ಮತ್ತೊಂದು ಟ್ರೇಲರ್ ರಿಲೀಸ್ ಪ್ಲ್ಯಾನ್ ಮಾಡುತ್ತಿದೆ. ಡಿಸೆಂಬರ್ 16ಕ್ಕೆ ಮತ್ತೊಂದು ಆಕ್ಷನ್ ಪ್ಯಾಕ್ಡ್ ಸ್ಯಾಂಪಲ್ ಹೊರಬರುವ ನಿರೀಕ್ಷೆಯಿದ್ದು,  ಡಿಸೆಂಬರ್ 15ರಿಂದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಲಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News