Telangana assembly elections 2023: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ.
Telangana Elections 2023: ಪಂಚರಾಜ್ಯಗಳ ಪೈಕಿ ಕೊನೆಯ ರಾಜ್ಯವಾದ ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಗುರುವಾರ(ನವೆಂಬರ್ 30) ಮತದಾನ ನಡೆಯುತ್ತಿದೆ. ಇಂದು ಬೆಳಗ್ಗಿನಿಂದಲೇ ಮತದಾರರು ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ನ ಸೆಲೆಬ್ರೆಟಿಗಳು ಸಹ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ತೆಲಂಗಾಣ ರಾಜಧಾನಿ ಹೈದರಾಬಾದ್ನ ವಿವಿಧ ಮತಗಟ್ಟೆಗಳಿಗೆ ತೆರಳಿ ಸೆಲೆಬ್ರೆಟಿಗಳು ಮತ ಚಲಾಯಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತೆಲಂಗಾಣ ವಿಧಾನಸಭೆಗೆ 119 ಸದಸ್ಯರನ್ನು ಆಯ್ಕೆ ಮಾಡಲು ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ರಾಜ್ಯದ 35,655 ಮತಗಟ್ಟೆಗಳಲ್ಲಿ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ. #Nani casted his vote at Zilla Parishad High School in Gachibowli. #TelanganaElections2023 #Elections2023 pic.twitter.com/QW1R8028xB — Vamsi Kaka (@vamsikaka) November 30, 2023
ರಾಜ್ಯದ 3.6 ಕೋಟಿ ಮತದಾರರು 2,290 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಸಿಎಂ ಕೆ.ಚಂದ್ರಶೇಖರ ರಾವ್, ಅವರ ಪುತ್ರ, ಸಚಿವ ಕೆ.ಟಿ.ರಾಮರಾವ್, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಬಿಜೆಪಿ ಲೋಕಸಭಾ ಸದಸ್ಯ ಬಂಡಿ ಸಂಜಯ ಕುಮಾರ್ ಮತ್ತು ಡಿ.ಅರವಿಂದ ಸೇರಿದಂತೆ ಅನೇಕ ಪ್ರಮುಖರು ಕಣದಲ್ಲಿದ್ದಾರೆ. #RanaDaggubati cast his vote at FNCC in Hyderabad#TelanganaElections2023 #Elections2023 pic.twitter.com/b0XXK3dQFA — Vamsi Kaka (@vamsikaka) November 30, 2023
BRS ತೆಲಂಗಾಣದ ಎಲ್ಲಾ ಅಂದರೆ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿ 111 ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ 8 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಸಿಪಿಐಗೆ 1 ಸ್ಥಾನ ನೀಡಿದ್ದು, ಇತರ 118 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ AIMIM ತನ್ನ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. #JrNTR along with his family casted his vote#TelanganaElection2023 pic.twitter.com/5cwPdGOzSx — Vamsi Kaka (@vamsikaka) November 30, 2023
ಬೆಳಗ್ಗೆಯಿಂದಲೇ ಆರಂಭಗೊಂಡ ಮತದಾನ ಪ್ರಕ್ರಿಯೆಗೆ ಮತದಾರರು ಬಂದು ಮತದಾನ ಮಾಡುತ್ತಿದ್ದಾರೆ. ಹೈದರಾಬಾದ್ನ ಪಿ.ಓಬುಲ್ ರೆಡ್ಡಿ ಪಬ್ಲಿಕ್ ಸ್ಕೂಲ್ನಲ್ಲಿರುವ ಮತಗಟ್ಟೆಗೆ ನಟ ಜೂನಿಯರ್ NTR ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೈದರಾಬಾದ್ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಟ ವಿಜಯ್ ದೇವರಕೊಂಡ ಮತ ಚಲಾಯಿಸಿದರು. ಶ್ರೀನಗರ ಕಾಲೋನಿ ಮಹಿಳಾ ಸಮಾಜದಲ್ಲಿ ನಟ ಗೋಪಿಚಂದ್ ಅವರು ಮತ ಚಲಾಯಿಸಿದ್ದಾರೆ. #AlluArjun exercised his vote in #TelanganaElections2023 #Elections2023 pic.twitter.com/IaP04bOSGh — Vamsi Kaka (@vamsikaka) November 30, 2023
ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ನಟ ನಿತಿನ್ ಸಹ ವೋಟ್ ಮಾಡಿದ್ದು, ‘ನಿಮ್ಮ ಧ್ವನಿಯನ್ನು ಸಶಕ್ತಗೊಳಿಸಿ, ತಪ್ಪದೇ ನಿಮ್ಮ ಮತವನ್ನು ಚಲಾಯಿಸಿ!! ನೀವು ನೋಡಲು ಬಯಸುವ ಬದಲಾವಣೆಯಾಗಿರಿ. ನಾನು ಮತ ಹಾಕಿದ್ದೇನೆ. ನೀವು ಮತ ಹಾಕಿದ್ದೀರಾ?’ ಎಂದು ಮತದಾರರಿಗೆ ಅರಿವು ಮೂಡಿಸಿದ್ದಾರೆ. ನಟ ರವಿತೇಜಾ ಸಹ ಜುಬಿಲಿ ಹಿಲ್ಸ್ನ ನ್ಯೂ ಎಂಎಲ್ಎ ಮತ್ತು ಎಂಪಿ ಕಾಲೋನಿಗೆ ತೆರಳಿ ಮತ ಚಲಾಯಿಸಿದ್ದಾರೆ. ಇವರ ಜೊತೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ. #Nagarjuna garu accompanied by #NagaChaitanya & #AmalaAkkineni exercises their voting right at the Government Women's Hostel in Jubilee Hills#TelanganaElections2023 #Elections2023 pic.twitter.com/qOD8bDnyP2 — Vamsi Kaka (@vamsikaka) November 30, 2023