ನವದೆಹಲಿ: 2021 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರತರಾಗಿದ್ದಾರೆ. ಇದಕ್ಕಾಗಿ ಅವರು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಶುಕ್ರವಾರ ಭೇಟಿಯಾದರು.
ಪ್ರಶಾಂತ್ ಕಿಶೋರ್ ಭೇಟಿ ನಂತರ ಕೋಲ್ಕತ್ತಾದ ಟಿಎಂಸಿ ಭವನದಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ ಮಮತಾ ಬ್ಯಾನರ್ಜಿ, 6 ಪ್ರಮುಖ ಕಾರ್ಪೊರೇಟ್ ಮಂತ್ರಗಳನ್ನು ಬೋಧಿಸಿದ್ದಾರೆ. ಈ ಸಮಯದಲ್ಲಿ ಅವರು ನೀವು ತಪ್ಪು ಮಾಡಿದ್ದರೆ, ಅದಕ್ಕಾಗಿ ಜನರಲ್ಲಿ ಕ್ಷಮೆಯಾಚಿಸಿ ಎಂದು ಸೂಚಿಸಿದ್ದಾರೆ.
ಮಮತಾ ಬ್ಯಾನರ್ಜಿ ತಮ್ಮ ಶಾಸಕರಿಗೆ ಇಂತಹ ಸಾಂಸ್ಥಿಕ ಸೂಚನೆಗಳನ್ನು ನೀಡುತ್ತಿರುವುದು ಇದೇ ಮೊದಲು. ಪ್ರಶಾಂತ್ ಕಿಶೋರ್ ಅವರು ಟಿಎಂಸಿ ಶಾಸಕರು ಮತ್ತು ಮಮತಾ ಅವರ ಸಭೆಯಲ್ಲಿ ಭಾಗಿಯಾಗಿಲ್ಲವಾದರೂ, ಮೂಲಗಳ ಪ್ರಕಾರ, ಮಮತಾ ನೀಡಿದ ಸಲಹೆಗಳು ಪ್ರಶಾಂತ್ ಕಿಶೋರ್ ನೀಡಿದ ಸಲಹೆಗಳಾಗಿರಬಹುದು ಎಂದು ಊಹಿಸಲಾಗಿದೆ.
ಮಮತಾ ಬ್ಯಾನರ್ಜಿ ಶಾಸಕರಿಗೆ ಬೋಧಿಸಿದ ಪ್ರಮುಖ ಮಂತ್ರಗಳು:
1. ಎಲ್ಲಾ ಶಾಸಕರು ಲೋಕಸಭಾ ಚುನಾವಣಾ ಮೂಡ್ ನಿಂದ ಹೊರಬರಬೇಕು. ಚುನಾವಣೆ ಮುಗಿದಿದೆ, ಈಗ ಸಾರ್ವಜನಿಕ ಪ್ರತಿನಿಧಿಯಾಗಿ ನಿಮ್ಮ ಕೆಲಸವನ್ನು ಮಾಡಿ. ನಿಮ್ಮ ಅಸೆಂಬ್ಲಿ ಕ್ಷೇತ್ರಗಳಿಗೆ 7 ದಿನಗಳಿಗಿಂತ ಹೆಚ್ಚಿನ ಸಮಯವನ್ನು ನೀಡಿ.
2. ಯಾವುದೇ ವಿವಾದಕ್ಕೆ ಸಿಲುಕಬೇಡಿ. ರಾಜಕೀಯ ಹಿಂಸಾಚಾರವನ್ನು ಕಡಿಮೆ ಮಾಡಲು ಪ್ರಯತ್ನಿಸಿ.
3. ಆಡಳಿತ ಮತ್ತು ಪೊಲೀಸರನ್ನು ಅವಲಂಬಿಸಬೇಡಿ. ನಿಮ್ಮ ಸ್ವಂತ ರಾಜಕೀಯ ಯುದ್ಧದಲ್ಲಿ ನೀವೇ ಹೋರಾಡಿ. ವಿವಾದಗಳನ್ನು ತಪ್ಪಿಸಿ ಹೊರಬನ್ನಿ. ನಿಮ್ಮ ನಡವಳಿಕೆ ಸರಿಯಾಗಿರಲಿ.
4. ನೀವು ತಪ್ಪು ಮಾಡಿದ್ದರೆ/ನಿಮ್ಮಿಂದ ತಪ್ಪಾಗಿದ್ದರೆ ಜನರಲ್ಲಿ ಕ್ಷಮೆಯಾಚಿಸಿ. ಜನತೆಯೊಂದಿಗೆ ಕುಳಿತು ಸಮಾಲೋಚನೆ ನಡೆಸಿ.
5. ಪ್ರತಿ ವಿಧಾನಸಭೆಯಲ್ಲಿ 4 ಸದಸ್ಯರ ಸಮಿತಿಯನ್ನು ರಚಿಸಿ. ಇದು ಸಾಮಾಜಿಕ ಮಾಧ್ಯಮ ಸದಸ್ಯ, ಶಾಸಕರ ಪ್ರತಿನಿಧಿ ಮತ್ತು ಬೂತ್ ಅಭಿವೃದ್ಧಿ ವ್ಯವಸ್ಥಾಪಕರನ್ನು ಒಳಗೊಂಡಿದೆ.
6. ಸುಳ್ಳು ಹೇಳಿಕೆಗಳು ಅಥವಾ ಪ್ರತಿಕ್ರಿಯೆಗಳನ್ನು ನೀಡಬೇಡಿ. ಯಾರಾದರೂ ಪ್ರವಾಸಕ್ಕೆ ಹೋದರೆ, ಅವರು ಮೊದಲು ಪಕ್ಷಕ್ಕೆ ಮಾಹಿತಿ ನೀಡಬೇಕು.