ಕರ್ಮ ರಿಟರ್ನ್ಸ್..! ಏಂಜೆಲೊ ಮ್ಯಾಥ್ಯೂಸ್ 'ಟೈಮ್ ಔಟ್' ವಿವಾದ ಬೆನ್ನಲ್ಲೇ ವಿಶ್ವಕಪ್’ನಿಂದ ಶಕೀಬ್ ಔಟ್!-ಕಾರಣವೇನು?

World Cup 2023, Cricket News in Kannada: ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ತೋರು ಬೆರಳಿಗೆ ಗಾಯವಾದ ಕಾರಣ 2023 ರ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಬಾಂಗ್ಲಾದೇಶ ತಂಡ ಪ್ರಸಕ್ತ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ 2 ಗೆಲುವು ಮತ್ತು 6 ಸೋಲು ಕಂಡಿದೆ.

Written by - Bhavishya Shetty | Last Updated : Nov 7, 2023, 05:43 PM IST
    • ಶಕೀಬ್ ಅಲ್ ಹಸನ್ ಗಾಯದ ಕಾರಣದಿಂದ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ
    • ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್
    • ಶಕೀಬ್ ಅಲ್ ಹಸನ್ ಟೈಮ್ಡ್ ಔಟ್‌ ವಿಚಾರದಿಂದ ಹೈಲೈಟ್ ಆಗಿದ್ದರು
ಕರ್ಮ ರಿಟರ್ನ್ಸ್..! ಏಂಜೆಲೊ ಮ್ಯಾಥ್ಯೂಸ್ 'ಟೈಮ್ ಔಟ್' ವಿವಾದ ಬೆನ್ನಲ್ಲೇ ವಿಶ್ವಕಪ್’ನಿಂದ ಶಕೀಬ್ ಔಟ್!-ಕಾರಣವೇನು? title=
Shakib Al Hasan

World Cup 2023: ವಿಶ್ವಕಪ್ 2023ರ ಮಧ್ಯದಲ್ಲಿ ಬಾಂಗ್ಲಾದೇಶ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ. ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಗಾಯದ ಕಾರಣದಿಂದ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. 2023 ರ ವಿಶ್ವಕಪ್‌’ನ 38ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಮಾಡುವಾಗ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ಎಡಗೈ ತೋರು ಬೆರಳಿಗೆ ಗಾಯವಾಗಿತು.

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ತೋರು ಬೆರಳಿಗೆ ಗಾಯವಾದ ಕಾರಣ 2023 ರ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಬಾಂಗ್ಲಾದೇಶ ತಂಡ ಪ್ರಸಕ್ತ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ 2 ಗೆಲುವು ಮತ್ತು 6 ಸೋಲು ಕಂಡಿದೆ. ಈ ಮೂಲಕ ಈಗಾಗಲೇ ವಿಶ್ವಕಪ್ ಸೆಮಿಫೈನಲ್ ರೇಸ್‌’ನಿಂದ ಹೊರಗುಳಿದಿದೆ.

ಇದನ್ನೂ ಓದಿ: ರೋಹಿತ್ ಶರ್ಮಾರನ್ನು ಕೆಳಗಿಳಿಸಿ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ ನೀಡಲಿದೆ- ಬಿಸಿಸಿಐ ಅಧಿಕಾರಿ

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ನವೆಂಬರ್ 11 ರಂದು ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2023 ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ನವೆಂಬರ್ 6 ರಂದು ದೆಹಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ 280 ರನ್ ಗಳ ಗುರಿಯನ್ನು ಬೆನ್ನಟ್ಟಿದ ಶಕೀಬ್ ಅಲ್ ಹಸನ್ 65 ಎಸೆತಗಳಲ್ಲಿ 82 ರನ್ ಗಳಿಸಿದರು. ಶಕಿಬ್ ಅಲ್ ಹಸನ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು.

ಬಾಂಗ್ಲಾದೇಶ ಕ್ರಿಕೆಟ್ ತಂಡದ ಫಿಸಿಯೋ ಬಯಾಜೆದುಲ್ ಇಸ್ಲಾಂ ಖಾನ್ ಅವರು ಶಕೀಬ್ ಅಲ್ ಹಸನ್ ಅವರ ಗಾಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. “ಶಕೀಬ್ ಅಲ್ ಹಸನ್ ಅವರ ಎಡ ತೋರು ಬೆರಳಿಗೆ ಗಾಯವಾಗಿದೆ, ಆದರೆ ಪೇನ್ ಕಿಲ್ಲರ್  ತೆಗೆದುಕೊಳ್ಳುವ ಮೂಲಕ ಬ್ಯಾಟಿಂಗ್ ಮುಂದುವರಿಸಿದರು. ಸೋಮವಾರ ದೆಹಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದ ನಂತರ ಶಕೀಬ್ ಅಲ್ ಹಸನ್ ಅವಸರದಲ್ಲಿ ಎಕ್ಸ್-ರೇ ಮಾಡಲಾಗಿತ್ತು. ಎಡ ಪಿಐಪಿ ಜಂಟಿ ಮೂಳೆ ಮುರಿತವನ್ನು ಎಕ್ಸ್-ರೇ ದೃಢಪಡಿಸಿದೆ. ಹೀಗಾಗಿ ಚೇತರಿಸಿಕೊಳ್ಳಲು ಮೂರರಿಂದ ನಾಲ್ಕು ವಾರಗಳು ತೆಗೆದುಕೊಳ್ಳಬಹುದು. ಇದೇ ಕಾರಣದಿಂದ ಅವರು ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅವನ ಹೊಟ್ಟೆ ಜೋತು ಬೀಳ್ತಾಯಿದೆ..!- ರೋಹಿತ್ ಬಗ್ಗೆ ಲೈವ್’ನಲ್ಲೇ ಬಾಡಿ ಶೇಮಿಂಗ್ ಮಾಡಿದ ಪತ್ರಕರ್ತ

ಟೈಮ್ಡ್ ಔಟ್‌ ವಿವಾದ:

ಸೋಮವಾರ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟೈಮ್ಡ್ ಔಟ್‌ ವಿಚಾರದಿಂದ ಹೈಲೈಟ್ ಆಗಿದ್ದರು. ಈ ಪಂದ್ಯದಲ್ಲಿ ಶಕೀಬ್ ಮನವಿ ಮೇರೆಗೆ ಶ್ರೀಲಂಕಾದ ಅನುಭವಿ ಬ್ಯಾಟ್ಸ್ ಮನ್ ಏಂಜೆಲೊ ಮ್ಯಾಥ್ಯೂಸ್’ಗೆ ‘ಟೈಮ್ ಔಟ್’ ನೀಡಲಾಯಿತು. ಏಂಜೆಲೊ ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಈ ರೀತಿ ಔಟಾದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News