Tejas Movie: ನಟಿ ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ʼತೇಜಸ್ʼ ಸಿನಿಮಾ ಇದೇ ಆಕ್ಟೋಬರ್ 27ರಂದು ತೆರೆಮೇಲೆ ಅಪ್ಪಳಿಸಿದ್ದು, ಈ ಚಿತ್ರದಲ್ಲಿ ನಟಿ ಕಂಗನಾ ಇಂಡಿಯನ್ ಏರ್ಫೋಸ್ ಪೈಲೇಟ್ ಪಾತ್ರವನ್ನು ಮಾಡಿದ್ದಾರೆ. ತೇಜಸ್ ಪೈಲೇಟಾಗಿ ತಮ್ಮ ದೇಶ ಸೇವೆ ಹಾಗೂ ಹಲವಾರು ಸವಾಲುಗಳನ್ನು ಎದುರಿಸುವ ದೃಶ್ಯಗಳನ್ನು ಈ ಸಿನಿಮಾದಲ್ಲಿ ತೋರಿಸುವುದರ ಜೊತೆಗೆ ಎಲ್ಲರಲ್ಲಿಯೂ ದೇಶಭಕ್ತಿಯನ್ನು ಮೂಡಿಸುತ್ತದೆ.
ತೇಜಸ್ ಸಿನಿಮಾ ರಿಲೀಸ್ ಆದಗಿನಿಂದಲೂ ಹೆಚ್ಚು ಕಲೆಕ್ಷನ್ ಮಾಡದೆ, ಮೊದಲ ಎರಡೂ ದಿನವೂ ಕೇವಲ ಒಂದು ಕೋಟಿ ರುಪಾಯಿ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಈ ಹಿಂದೆಯೂ ಕಂಗನಾ ನಟಿಸಿರುವ ಸಿನಿಮಾ ಮೊದಲ ದಿನವೇ ಇಷ್ಟೊಂದು ಲಾಭ ಮಾಡದಿದ್ದರು, ತೇಜಸ್ ಚಿತ್ರಕಥೆಗೆ ಇದು ಸೂಕ್ತ ನ್ಯಾಯವಾಗದೆ ತುಂಬಾ ಕಡಿಮೆ ಕಲೆಕ್ಷನ್ ಆಗಿದೆ. ಈ ಕಾರಣದಿಂದ ಕಂಗನಾ ಸೋಷಿಯಲ್ ಮಿಡಿಯಾದಲ್ಲಿ ವೀಕ್ಷಕರಲ್ಲಿ ಸಿನಿಮಾವನ್ನು ಚಿತ್ರಮಂದಿರಗಳಿಗೇ ಬಂದು ನೋಡುವುದಾಗಿ ಕೋರಿರುವ ವಿಡಿಯೋ ಶನಿವಾರ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿದೆ.
Even before covid theatrical footfalls were dipping drastically post covid it has become seriously rapid.
Many theatres are shutting down and even after free tickets and many reasonable offers drastic footfall decline is continuing.
Requesting people to watch films in theatres… pic.twitter.com/Mty9BTcpkD— Kangana Ranaut (@KanganaTeam) October 28, 2023
ಇದನ್ನು ಓದಿ: ಹಿರಿಯ ನಟ ಸುರೇಶ್ ಹೆಬ್ಳೀಕರ್ ಇ-ಮೇಲ್ ಹ್ಯಾಕ್: 5 ಲಕ್ಷ ಹಣಕ್ಕೆ ಬೇಡಿಕೆ!
ಈ ವಿಡಿಯೋದಲ್ಲಿ ನಟಿ ಕಂಗನಾ "ಸ್ನೇಹಿತರೇ, ನನ್ನ ತೇಜಸ್ ಸಿನಿಮಾ ರಿಲೀಸ್ ಆಗಿದೆ. ತೇಜಸ್ ಸಿನಿಮಾ ನೋಡಿದವರು ಒಳ್ಳೆಯ ಪ್ರತಿಕ್ರಿಯೆ ಹಾಗೂ ಆರ್ಶಿವಾದ ನೀಡಿದ್ದಾರೆ. ಓವಿಡ್ ನಂತರ ಹಿಮದಿ ಸಿನಿಮಾ ಇಂಡಸ್ಟ್ರೀ ಅಷ್ಟಾಗಿ ಲಾಭಗಳಿಸಿಲು ಸಾಧ್ಯವಾಗಿಲ್ಲ. ಇಂದಿನ ಯುಗದಲ್ಲಿ ಪ್ರತಿಯೊಬ್ಬರ ಬಳಿ ಮೊಬೈಲ್ ಫೋನ್ ಇದೆ. ಆದರೆ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ನೋಡುವುದು ಹೊಸ ಅದ್ಯಾಯಕ್ಕೆ ದಾರಿಯಾಗಲು ಮುಖ್ಯವಾಗಿದೆ. ಹಿಂದಿ ಸಿನಿಮಾ ವೀಕ್ಷಕರಿಗೆ ಉರಿ, ಮೇರಿಕಾಂ ಹಾಗೂ ನೀರಜಾ ಸಿನಿಮಾ ಇಷ್ಟವಾದರೇ ತೇಜಸ್ ಸಹ ಇಷ್ಟವಾಗುತ್ತದೆ" ಎಂದು ಮಾತನಾಡಿದ್ದಾರೆ.
ನಟಿ ಕಂಗನಾ ನಟಿಸಿರುವ ತೇಜಸ್ ಸಿನಿಮಾಗೆ ಅಷ್ಟೊಂದು ಸದ್ಯಕ್ಕೆ ಪ್ರೇಕ್ಷಕರದ ಒಳ್ಳೆಯ ರೆಸ್ಪಾನ್ಸ್ ಸಿಗದಿರಬಹುದು, ಇನ್ನು ಮುಂದೆ ಇನ್ನಷ್ಟು ರೆಸ್ಪಾನ್ಸ್ ಸಿಕ್ಕ ಒಳ್ಳಗೆ ಕಲೆಕ್ಷನ್ ಮಾಡಲಿ ಎಂದು ಆಶಿಸೋಣ. ತೇಜಸ್ ಚಿತ್ರವನ್ನು ವೀಕ್ಷಿಸಿ ಎಲ್ಲರಲ್ಲಿಯೂ ಇನ್ನಷ್ಟು ದೇಶಪ್ರೇಮ ಹೆಚ್ಚಿಸಲಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.