Mosquito repellent plants : ಈಗ ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗ್ಯೂ ಗಂಭೀರ ಕಾಯಿಲೆಯಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಮಾರಕವಾಗಿ ಪರಿಣಮಿಸುತ್ತದೆ. ಸೊಳ್ಳೆ ಕಡಿತದಿಂದ ಡೆಂಗ್ಯೂ ಬರುತ್ತದೆ. ಹಾಗಾಗಿ ಮನೆ ಮತ್ತು ಮನೆ ಯ ಸುತ್ತ ಸೊಳ್ಳೆಗಳು ಬಾರದಂತೆ ಎಚ್ಚರ ವಹಿಸಬೇಕು. ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತದೆ. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ಹರಡುತ್ತವೆ.
ಹೆಚ್ಚಿನ ಜನರು ಸೊಳ್ಳೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೊಳ್ಳೆ ಸ್ಪ್ರೇಗಳು, ಸೊಳ್ಳೆ ಬತ್ತಿ, ಕ್ರೀಮ್, ಲೋಶನ್, ಸ್ಟಿಕರ್ ಗಳನ್ನು ಬಳಸುತ್ತಾರೆ. ಆದರೆ, ಕಇವುಗಳು ಕೆಲವೊಮ್ಮೆ ಅಡ್ಡ ಪರಿಣಾಮ ಬೀರುತ್ತದೆ. ಅಲರ್ಜಿ, ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉಬ್ಬಸ ಸಮಸ್ಯೆ ಇದ್ದಾಗ ಈ ಪರಿಹಾರ ಸಾಮಗ್ರಿಗಳನ್ನು ಬಳಸುವುದು ಸಾಧ್ಯವೇ ಇಲ್ಲ. ಆದರೆ ಮನೆಮದ್ದುಗಳಿಂದಲೂ ಸೊಳ್ಳೆಗಳನ್ನು ಹೋಗಲಾಡಿಸಬಹುದು. ಹೌದು, ಇಂದು ನಾವು ಸೊಳ್ಳೆಗಳನ್ನು ತೊಡೆದುಹಾಕಲು ನಿಮ್ಮ ಮನೆಯಲ್ಲಿ ನೆಡಬಹುದಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಇದನ್ನೂ ಓದಿ : ತುಳಸಿ ಎಲೆಯಿಂದ ಕೂಡ ಬಿಳಿ ಕೂದಲು ಕಪ್ಪಾಗುತ್ತದೆ
ಬೇವು :
ಸೊಳ್ಳೆಗಳ ಕಾಟವನ್ನು ತಪ್ಪಿಸಲು ಬೇವು ಬಹಳ ಪರಿಣಾಮಕಾರಿಯಾಗಿದೆ. ಬೇವಿನ ಎಲೆಗಳ ಕಷಾಯವನ್ನು ತಯಾರಿಸಿ ಅದನ್ನು ಮೈ ಕೈಗೆ ಹಚ್ಚುವ ಮೂಲಕ ಅಥವಾ ಅದನ್ನು ಮನೆಯ ಒಳಗೆ ಹೊರೆಗೆ ಸಿಂಪಡಿಸುವ ಮೂಲಕ ಕೂಡಾ ಸೊಳ್ಳೆಗಳನ್ನು ಓಡಿಸಬಹುದು.
ಮಲ್ಲಿಗೆ:
ಮಲ್ಲಿಗೆಯ ಪರಿಮಳವನ್ನು ಸೊಳ್ಳೆಗಳು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಸೊಳ್ಳೆ ಬಾರದಂತೆ ತಡೆಯಬೇಕಾದರೆ ಮನೆಯಲ್ಲಿ ಮಲ್ಲಿಗೆ ಗಿಡವನ್ನು ನೆಡಬಹುದು ಅಥವಾ ಮಲ್ಲಿಗೆ ಹೂವಿನ ಹಾರವನ್ನು ಮನೆ ಬಾಗಿಲಿಗೆ ಹಾಕಬಹುದು.
ಇದನ್ನೂ ಓದಿ : ಅತ್ಯಧಿಕ ಕೊಲೆಸ್ಟ್ರಾಲ್ ನಿಯಂತ್ರಿಸುತ್ತವೆ ಈ ಯೋಗಾಸನಗಳು..ಟ್ರೈ ಮಾಡಿ ನೋಡಿ
ತುಳಸಿ :
ತುಳಸಿ ಎಲೆಗಳ ವಾಸನೆ ಕೂಡಾ ಸೊಳ್ಳೆಗಳನ್ನು ಓಡಿಸುತ್ತದೆ. ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಡಬಹುದು ಅಥವಾ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಈ ನೀರನ್ನು ಮನೆ ಒಳಗೆ ಮತ್ತು ಹೊರಗೆ ಚಿಮುಕಿಸಬಹುದು.
ಲೆಮನ್ ಗ್ರಾಸ್ :
ಲೆಮನ್ ಗ್ರಾಸ್ ಸುಗಂಧವು ಸೊಳ್ಳೆಗಳನ್ನು ಓಡಿಸುತ್ತದೆ. ನಿಮ್ಮ ಮನೆಯಲ್ಲಿ ಲೆಮನ್ ಗ್ರಾಸ್ ಅನ್ನು ನೆಡಬಹುದು ಅಥವಾ ಲೆಮನ್ ಗ್ರಾಸ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಈ ನೀರನ್ನು ಮನೆಯ ಸುತ್ತಲೂ ಸ್ಪ್ರೇ ಮಾಡಬಹುದು.
ರೋಸ್ಮರಿ:
ರೋಸ್ಮೆರಿಯ ಪರಿಮಳವನ್ನು ಕೂಡಾ ಸೊಳ್ಳೆಗಳು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಮನೆಯಲ್ಲಿ ರೋಸ್ಮರಿ ನೆಡಬಹುದು ಅಥವಾ ರೋಸ್ಮರಿ ಎಲೆಗಳನ್ನು ನೀರಿನಲ್ಲಿ ಕುದಿಸಿ ನೀರನ್ನು ಮನೆಯ ಸುತ್ತಲೂ ಚಿಮುಕಿಸಬಹುದು.
ಇದನ್ನೂ ಓದಿ : ಕೇವಲ ಒಂದೇ ವಾರದಲ್ಲಿ ಬಿಳಿ ಕೂದಲು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕಪ್ಪಾಗುವುದು! ಹೇಗೆ ಗೊತ್ತಾ ?
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) .
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=q9auZ2eqeZo
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.