ನವದೆಹಲಿ: ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾವನ್ನು 10 ವಿಕೆಟ್‍ಗಳಿಂದ ಮಣಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಟ್ರೋಫಿ ಹಿಡಿದು ಸಂಭ್ರಮಿಸಿತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಮೊದಲ ಓವರ್ನಲ್ಲಿಯೇ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಇದಾದ ಬಳಿಕ ಸಿರಾಜ್ ಮ್ಯಾಜಿಕ್ ಮಾಡಿದರು. 4ನೇ ಓವರ್ನ ಮೊದಲ ಎಸೆತದಲ್ಲೇ ಸಿರಾಜ್ ಅವರು ಪಾತುಮ್ ನಿಸ್ಸಂಕಾ ವಿಕೆಟ್ ಪಡೆದರು. 3ನೇ ಎಸೆತದಲ್ಲಿ ಸದೀರ ಸಮರವಿಕ್ರಮರನ್ನು LBW ಮಾಡಿದರು. 4ನೇ ಎಸೆತದಲ್ಲಿ ಚರಿತ್ ಅಸಲಂಕಾರನ್ನು ಔಟ್ ಮಾಡಿದರು. ಕೊನೆಯ ಎಸೆತದಲ್ಲಿ ಧನಜಂಯ ಡಿಸಿಲ್ವಾರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಹೀಗೆ ಒಂದೇ ಓವರ್‍ನಲ್ಲಿ ಸಿರಾಜ್ 4 ವಿಕೆಟ್ ಕಬಳಿಸಿ ಮಿಂಚಿದರು.
ಇದನ್ನೂ ಓದಿ: Asia Cup Final 2023 ಪಂದ್ಯದ ಆರಂಭದಲ್ಲಿಯೇ ಭಾರಿ ವಿಧ್ವಂಸ ಸೃಷ್ಟಿಸಿದ ಮಹಮ್ಮದ್ ಸಿರಾಜ್ !
📸📸 That winning feeling 😃👌#TeamIndia | #AsiaCup2023 | #INDvSL pic.twitter.com/l3lz2UdjQ0
— BCCI (@BCCI) September 17, 2023
6ನೇ ಓವರ್ನ 4ನೇ ಎಸೆತದಲ್ಲಿ ಲಂಕಾ ತಂಡದ ನಾಯಕ ದಸುನ್ ಶಾನಕರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಅತೀಕಡಿಮೆ ಅಂದರೆ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ವಿಶ್ವದಾಖಲೆ ನಿರ್ಮಿಸಿದರು. 2003ರಲ್ಲಿ ಶ್ರೀಲಂಕಾದ ಮಾಜಿ ವೇಗಿ ಚಾಮಿಂಡ ವಾಸ್ ಬಾಂಗ್ಲಾದೇಶ ವಿರುದ್ಧ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದರು. ಇದೀಗ ಈ ವಿಶ್ವದಾಖಲೆಯನ್ನು ಸಿರಾಜ್ ಸರಿಗಟ್ಟಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಅತ್ಯಂತ ವೇಗವಾಗಿ 5 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡರು.
ಮೊಹಮ್ಮದ್ ಸಿರಾಜ್ 7 ಓವರ್ ಎಸೆದು 21 ರನ್ ನೀಡಿ 6 ವಿಕೆಟ್ ಕಬಳಿಸಿದ್ರೆ, 2.2 ಓವರ್ ಎಸೆದ ಹಾರ್ದಿಕ್ ಪಾಂಡ್ಯ 3 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ 15.2 ಓವರ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 50 ರನ್ ಗಳಿಸಿತು. 51 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ ಕೇವಲ 5 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್‍ಗಳ ಗೆಲುವು ಸಾಧಿಸಿತು.
ಇದನ್ನೂ ಓದಿ: W 0 W W 4 W: ಸಿರಾಜ್ ‘ವಿಶ್ವದಾಖಲೆ’ಯ ಮಾರಕ ದಾಳಿಗೆ ದಂಗುಬಡಿದ ಲಂಕಾ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.