ಏಷ್ಯಾಕಪ್ ಫೈನಲ್ ಮಳೆಯಿಂದ ರದ್ದಾದರೆ ಮುಂದೇನು ಗತಿ? ಟ್ರೋಫಿ ಗೆಲ್ಲುವ ತಂಡ ಯಾವುದು ಗೊತ್ತಾ?

Asia Cup 2023 Final: ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಇಡೀ ಟೂರ್ನಿಯಲ್ಲಿ ಮಳೆ ಸಾಕಷ್ಟು ಅಡ್ಡಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Sep 17, 2023, 10:46 AM IST
    • ಏಷ್ಯಾಕಪ್‌ ಫೈನಲ್ ಪಂದ್ಯವು ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ
    • ಇದುವರೆಗೆ ಈ ಟೂರ್ನಿಯಲ್ಲಿ ಎರಡೂ ತಂಡಗಳು ಅಮೋಘ ಆಟ ಪ್ರದರ್ಶಿಸಿವೆ
    • ಈ ಇಡೀ ಟೂರ್ನಿಯಲ್ಲಿ ಮಳೆ ಸಾಕಷ್ಟು ಅಡ್ಡಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಏಷ್ಯಾಕಪ್ ಫೈನಲ್ ಮಳೆಯಿಂದ ರದ್ದಾದರೆ ಮುಂದೇನು ಗತಿ? ಟ್ರೋಫಿ ಗೆಲ್ಲುವ ತಂಡ ಯಾವುದು ಗೊತ್ತಾ?  title=
asia cup 2023

Asia Cup 2023 Final: ಏಷ್ಯಾಕಪ್‌ ಫೈನಲ್ ಪಂದ್ಯವು ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಅಂದರೆ ಸೆಪ್ಟೆಂಬರ್ 17 ರಂದು ನಡೆಯಲಿದೆ. ಇದುವರೆಗೆ ಈ ಟೂರ್ನಿಯಲ್ಲಿ ಎರಡೂ ತಂಡಗಳು ಅಮೋಘ ಆಟ ಪ್ರದರ್ಶಿಸಿವೆ. ಸೂಪರ್ 4 ರಲ್ಲಿ ಪಾಕಿಸ್ತಾನವನ್ನು 2 ವಿಕೆಟ್‌’ಗಳಿಂದ ಸೋಲಿಸುವ ಮೂಲಕ ಶ್ರೀಲಂಕಾ ಫೈನಲ್‌’ಗೆ ಪ್ರವೇಶಿಸಿದೆ, ಮತ್ತೊಂದೆಡೆ, ಸೂಪರ್ 4 ರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ತಂಡ ಫೈನಲ್‌’ಗೆ ತಲುಪಿದೆ. ಆದರೆ, ತನ್ನ ಕೊನೆಯ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೋಲನುಭವಿಸಬೇಕಾಯಿತು.

ಇದನ್ನೂ ಓದಿ: 13 ವರ್ಷಗಳ ಬಳಿಕ ಏಷ್ಯಾಕಪ್ ಫೈನಲ್’ನಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಆಟಗಾರರು

ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಇಡೀ ಟೂರ್ನಿಯಲ್ಲಿ ಮಳೆ ಸಾಕಷ್ಟು ಅಡ್ಡಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಕೊಲಂಬೊದಲ್ಲಿ ಭಾನುವಾರದಂದು ಮಳೆಯ ಸಾಧ್ಯತೆ 80 ಪ್ರತಿಶತದವರೆಗೆ ಇರುತ್ತದೆ ಎಂದು ವರದಿ ಹೇಳಿದೆ. ಅಕ್ಯುವೆದರ್ ವರದಿ ಪ್ರಕಾರ ಸೆ.17ರ ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.

ಫೈನಲ್ ಪಂದ್ಯಕ್ಕೆ ಮೀಸಲು ದಿನ ಫಿಕ್ಸ್!

ಸೆಪ್ಟೆಂಬರ್ 17 ರಂದು ಮಳೆ ಬಂದರೆ, ಮರುದಿನ ಪಂದ್ಯವನ್ನು ಆಯೋಜನೆ ಮಾಡಲಾಗುತ್ತದೆ. ಅಂದರೆ ಫೈನಲ್‌’ಗೆ ಒಂದು ದಿನವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. ಹೀಗಿರುವಾಗ ಸೆ.18ರಲ್ಲೂ ಮಳೆ ಬರಬಹುದೇ? ಎಂಬುದು ಪ್ರಶ್ನೆಯಾಗಿದೆ. ಮೀಸಲು ದಿನದಂದು ಸಹ, ಮಳೆಯ ಸಂಭವನೀಯತೆ 69% ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸೆ. 17 ಮತ್ತು 18 ದಿನಗಳಲ್ಲಿ ಮಳೆ ಸುರಿದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಹೌದು, ಒಂದು ವೇಳೆ ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಜೊತೆಗೆ ಭಾರತ ಮತ್ತು ಶ್ರೀಲಂಕಾವನ್ನು ಏಷ್ಯಾಕಪ್‌’ನ ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ ಪಂದ್ಯವನ್ನು 20-20 ಓವರ್‌’ಗಳಿಗೆ ಫಿಕ್ಸ್ ಮಾಡಿ ಪಂದ್ಯವನ್ನು ಸಾಧ್ಯವಾದಷ್ಟು ಪೂರ್ಣಗೊಳಿಸುವ ಪ್ರಯತ್ನವೂ ನಡೆಯುವ ಸಾಧ್ಯತೆ ಇದೆ.

ಮರುಕಳಿಸುತ್ತಾ ಆ ದಿನ…!!

2002 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಅಂದು ಭಾರತ ಮತ್ತು ಶ್ರೀಲಂಕಾ ತಂಡವನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.

ಭಾರತ ಮತ್ತು ಶ್ರೀಲಂಕಾ ದಾಖಲೆ

ಭಾರತ ಮತ್ತು ಶ್ರೀಲಂಕಾ ಇದುವರೆಗೆ 166 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಭಾರತ 97 ಪಂದ್ಯಗಳನ್ನು ಗೆದ್ದಿದೆ. ಇದಲ್ಲದೇ ಶ್ರೀಲಂಕಾ 57 ಪಂದ್ಯಗಳನ್ನು ಗೆದ್ದಿದೆ. 11 ಪಂದ್ಯಗಳ ಫಲಿತಾಂಶ ಹೊರಬಿದ್ದಿಲ್ಲ ಮತ್ತು 1 ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಬಾರಿಯ ಏಷ್ಯಾಕಪ್‌’ನಲ್ಲಿ ಭಾರತ ಸೂಪರ್ 4 ಸುತ್ತಿನಲ್ಲಿ ಶ್ರೀಲಂಕಾವನ್ನು 41 ರನ್‌’ಗಳಿಂದ ಸೋಲಿಸಿತು.

ಇದನ್ನೂ ಓದಿ: ಇಂದು ಈ ರಾಶಿಯವರ ಕೈಹಿಡಿಯುವಳು ಅದೃಷ್ಟಲಕ್ಷ್ಮೀ-ಆರ್ಥಿಕ ಕ್ಷೇತ್ರದಲ್ಲಿ ಅಪಾರ ಲಾಭ ಗಳಿಕೆಯ ದಿನ

ಕೊಲಂಬೊದಲ್ಲಿ ಭಾರತ ಮತ್ತು ಶ್ರೀಲಂಕಾ ದಾಖಲೆಗಳು…

ಕೊಲಂಬೊದ ಪ್ರೇಮದಾಸ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 37 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 18 ಬಾರಿ ಗೆದ್ದಿದ್ದರೆ, ಶ್ರೀಲಂಕಾ 16 ಪಂದ್ಯಗಳನ್ನು ಗೆದ್ದಿದೆ. 3 ಪಂದ್ಯಗಳ ಫಲಿತಾಂಶ ಬಂದಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 11 ಬಾರಿ ಗೆದ್ದಿದೆ. ಅದೇ ರೀತಿ ಶ್ರೀಲಂಕಾ ಕೂಡ 11 ಸಂದರ್ಭಗಳಲ್ಲಿ ಭಾರತದ ವಿರುದ್ಧ ಜಯಗಳಿಸುವಲ್ಲಿ ಯಶಸ್ವಿಯಾಗಿದೆ. ಚೇಸಿಂಗ್ ಮಾಡಿದ್ದ ಭಾರತ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News