ಬೆಂಗಳೂರು: ಅನ್ನಕ್ಕಾಗಿ ತಮ್ಮ ನೆಲವನ್ನೇ ತೊರೆದು ಉದ್ಯೋಗ ಕಂಡುಕೊಳ್ಳುವ ದೃಷ್ಟಿಯಿಂದ ಬೆಂಗಳೂರಿಗೆ ಬಂದಿರುವ ಅನೇಕರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವ ಕವಿಪವಿ ಸಮ್ಮಿಲನ ಕಾರ್ಯಕ್ರವೊಂದನ್ನು ಹಮ್ಮಿಕೊಂಡಿತ್ತು.
ರವಿವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಘ (ಕವಿಪವಿ) ಆಯೋಜಿಸಿದ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಸಂತ್ ನಾಡಗೇರ್ ಅವರು, ಗ್ರಾಮೀಣ ಭಾಗಗಳಿಂದ ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರಿನಂತಹ ಮಹಾನಗರಗಳಿಗೆ ಬಂದು ಸಾಧನೆಯ ಮೆಟ್ಟಿಲೆರಿರುವರ ಸಂಖ್ಯೆ ಗಣನೀಯ.
ಅದರಲ್ಲೂ ಇನ್ನೂ ಕೆಲವರು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಅಂಥವರನ್ನು ಬೆಳೆಸಿ ಅವರನ್ನು ಯಶಸ್ಸಿನ ಮಾರ್ಗಕ್ಕೆ ತಲುಪಿಸುವ ಉತ್ತಮ ಕಾರ್ಯ ಕವಿಪವಿ ನಡೆಸುತ್ತಿದೆ. ಸುದ್ದಿಮನೆಗಳಲ್ಲಿ ಕೆಲಸ ಹುಡುಕಿಕೊಂಡು ಬರುವವರಿಗೆ ಮಾರ್ಗದರ್ಶನ ನೀಡುತ್ತಿರುವ ಕವಿಪವಿ ಇನ್ನೂ ವಿವಿಧ ರೀತಿಯಲ್ಲಿ ಮಾರ್ಗದರ್ಶನ ನೀಡುವ ಕೆಲಸದಲ್ಲಿ ತೊಡಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ-ಬೆಂಗಳೂರು ಗ್ರಾ ಜಿಲ್ಲೆಯಾದ್ಯಂತ ಮುಂದುವರೆದ ವರುಣನ ಅಬ್ಬರ
ಅಲ್ಲದೇ ಗ್ರಾಮೀಣ ಪ್ರದೇಶಗಳಿಂದ ಬರುವವರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ನೀಡುವ ಕಾರ್ಯದಲ್ಲಿ ಕವಿಪವಿ ಉತೃಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಹೀಗೆ ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎನ್ನುವುದೇ ನನ್ನ ಆಶಯ ಎಂದು ತಿಳಿಸಿದರು.
ಇನ್ನು ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತು ಕಾರಣಿಕರ್ತರಲ್ಲೊಬ್ಬರಾದ ನಿವೃತ್ತ ಉಪನ್ಯಾಸಕ ಡಾ. ಹಾಲಸ್ವಾಮಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಲಸ್ವಾಮಿ ಅವರು, ಕವಿಪವಿ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದಾರೆ.
ಜೊತೆಗೆ ಕವಿಪವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಚಂದ್ರಕಾಂತ ಸೊನ್ನದ ಅವರು ತಾವು ಮುಂದಿನ ದಿನಗಳಲ್ಲಿ ಯೋಜಿಸುವ ಅಥವಾ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಇದಲ್ಲದೇ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ಪ್ರವೀಣ ಶಿರಯಣ್ಣವರ್ ಪ್ರಾಸ್ತಾವಿಕ ಅವರು ಸಹ ಮಾತನಾಡಿದರು.
ಸುಶೀಲಾ ಡೋಣೂರ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು ಮತ್ತು ಕವಿಪವಿ ಕಾರ್ಯದರ್ಶಿ ಹಾಗೂ ಜೀ ಕನ್ನಡ ನ್ಯೂಸ್ ಸಂಪಾದಕರಾದ ರವಿ ಎಸ್. ಅವರು ವಂದನಾರ್ಪಣೆ ಸಲ್ಲಿಸಿದರು. ಇನ್ನು ಈ ಯಶಸ್ವಿ ಕಾರ್ಯಕ್ರಮದಲ್ಲಿ ಕವಿಪವಿ ಉಪಾಧ್ಯಕ್ಷ ಲಿಂಗರಾಜ್ ಬಡಿಗೇರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-ಯಾವ ಪುರುಷಾರ್ಥಕ್ಕೆ ನೂರು ದಿನಗಳ ಸಂಭ್ರಮ ಎಂದು ಕಿಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ