ಬೆಂಗಳೂರು : ದಪ್ಪ ಮತ್ತು ಹೊಳೆಯುವ ಕೂದಲು ಪ್ರತಿಯೊಬ್ಬರಿಗೂ ಇಷ್ಟ. ದಪ್ಪ ಮತ್ತು ಹೊಳೆಯುವ ಕೂದಲು ಎಂದರೆ ಆರೋಗ್ಯಕರ ಕೇಶ. ಆದರೆ, ನಮ್ಮ ಕೂದಲು ಅನೇಕ ಬಾರಿ ಹವಾಮಾನದ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಕೂದಲು ತುಂಬಾ ಒರಟು ಮತ್ತು ಹಾನಿಗೊಳಗಾಗುತ್ತದೆ. ಅನೇಕರು ಕೂದಲನ್ನು ಧೂಳು ಪ್ರದೂಷಣೆಗಳಿಂದ ರಕ್ಷಿಸಲು ಸ್ಕಾರ್ಫ್ನ ಅನ್ನು ಬಳಸುತ್ತಾರೆ. ಕೂದಲಿನ ಆರೋಗ್ಯ ಕಾಪಾಡಲು ನಾನಾ ರೀತಿಯ ಎಣ್ಣೆಯ ಸಹಾಯದಿಂದ ಮಸಾಜ್ ಮಾಡಲಾಗುತ್ತದೆ. ಕೂದಲಿನ ಸಮಸ್ಯೆಯನ್ನು ತಡೆಗಟ್ಟಲು ಎಣ್ಣೆಯ ಮಸಾಜ್ ಮಾಡಬೇಕಾಗುತ್ತದೆ. ಆದರೆ, ಯಾವ ಎಣ್ಣೆಯನ್ನು ಮಸಾಜ್ ಗೆ ಬಳಸುತ್ತೇವೆ ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿರುತ್ತದೆ.
ಹಾನಿಗೊಳಗಾದ ಕೂದಲಿಗೆ ಬಳಸಿ ಈ ಎಣ್ಣೆ :
1. ಜೊಜೊಬಾ ಎಣ್ಣೆ :
ಜೊಜೊಬಾ ಎಣ್ಣೆಯು ನಿಮ್ಮ ಕೂದಲನ್ನು ಆರ್ಧ್ರಕಗೊಳಿಸುವ ಮತ್ತು ಪೋಷಿಸುವ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ, ಹಾನಿಗೊಳಗಾದ ಕೂದಲನ್ನು ತೊಡೆದುಹಾಕಬಹುದು. ಈ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಬೇಕು. ಹೀಗೆ ಎಣ್ಣೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿದ ಅರ್ಧ ಗಂಟೆಯ ನಂತರ ಕೂದಲು ತೊಳೆಯಿರಿ.
ಇದನ್ನೂ ಓದಿ : ಮೊಟ್ಟೆಯನ್ನು ಈ ರೀತಿ ತಿಂದರೆ ತೂಕ ಇಳಿಕೆಯಾಗುವುದು ಗ್ಯಾರಂಟಿ
2. ಆಲಿವ್ ಎಣ್ಣೆ :
ಆಲಿವ್ ಎಣ್ಣೆಯು ಕೂದಲಿಗೆ ಅಮೃತದಂತೆ ಕೆಲಸ ಮಾಡುತ್ತದೆ. ಅದರ ಪರಿಣಾಮವು ಕೂದಲಿನ ಮೇಲೆ ಧನಾತ್ಮಕವಾಗಿರುತ್ತದೆ. ಇದು ಹಾನಿಗೊಳಗಾದ ಕೂದಲನ್ನು ಸರಿ ಮಾಡುವುದು ಮಾತ್ರವಲ್ಲ, ಕೂದಲನ್ನು ತುಂಬಾ ಮೃದುವಾಗಿಸುತ್ತದೆ. ಈ ಎಣ್ಣೆಯನ್ನು ನಿಮ್ಮ ಕೈಗಳಿಗೆ ಹಚ್ಚಿ ಮತ್ತು ಕೂದಲಿನ ಬೇರುಗಳಲ್ಲಿ ಮಸಾಜ್ ಮಾಡಿ. ನಂತರ ಕೂದಲನ್ನು ತೊಳೆದು ಒಣಗಿಸಿ.
3. ತೆಂಗಿನ ಎಣ್ಣೆ:
ಹಾನಿಗೊಳಗಾದ ಕೂದಲಿಗೆ ತೆಂಗಿನ ಎಣ್ಣೆಯನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಏಕೆಂದರೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ನೀವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಾದರೆ ಶುದ್ದ ತೆಂಗಿನ ಎಣ್ಣೆಯನ್ನು ಬಳಸಿ. ಸ್ನಾನ ಮಾಡುವ ಸುಮಾರು 30 ನಿಮಿಷಗಳ ಮೊದಲು ಈ ಈ ನೈಸರ್ಗಿಕ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ. ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ತೆಂಗಿನೆಣ್ಣೆ ಹಚ್ಚುವ ಮುನ್ನ ಅದನ್ನು ಸ್ವಲ್ಪ ಬಿಸಿ ಮಾಡಿ.
ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ 5 ಹಣ್ಣುಗಳ ಸಿಪ್ಪೆಗಳು ರಾಮಬಾಣ!
4. ಈರುಳ್ಳಿ ಎಣ್ಣೆ:
ಈರುಳ್ಳಿ ಎಣ್ಣೆಯು ಒಣ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದು ಕೂದಲ ಬೆಳವಣಿಗೆಯನ್ನು ಸುಧಾರಿಸುವುದಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ. ಮನೆಯಲ್ಲಿ ಇದನ್ನು ತಯಾರಿಸಲು, ಒಂದು ಬಟ್ಟಲಿನಲ್ಲಿ ಈರುಳ್ಳಿ ರಸವನ್ನು ತೆಗೆದುಕೊಂಡು ನಂತರ ಅದರಲ್ಲಿ ತೆಂಗಿನ ಎಣ್ಣೆಯ ಜೊತೆ ಮಿಕ್ಸ್ ಮಾಡಿ. ಮಂದ ಉರಿಯಲ್ಲಿ ಈ ಮಿಶ್ರಣವನ್ನು ಬಿಸಿ ಮಾಡಿ. ಈ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡುತ್ತಾ ಬನ್ನಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ