ನವದೆಹಲಿ: ನಮ್ಮ ಕುಟುಂಬದ ಮೇಲೆ ಬಿಜೆಪಿ, ಆರ್ಎಸ್ಎಸ್ ಮತ್ತು ಪ್ರಧಾನಿ ಮೋದಿಗೆ ದ್ವೇಷವಿದೆ. ಆದರೆ ಪ್ರೀತಿಯಿಂದ ಮಾತ್ರ ದ್ವೇಷವನ್ನು ಸೋಲಿಸಬಹುದೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಸದ್ಯ ನಡೆಯುತ್ತಿರುವ ಚುನಾವಣೆ ಎರಡು ಸಿದ್ಧಾಂತಗಳ ನಡುವೆ ನಡೆಯುತ್ತಿರುವ ಚುನಾವಣೆ,ಅದು ಕಾಂಗ್ರೆಸ್ ಮತ್ತು ಬಿಜೆಪಿ,ಆರೆಸೆಸ್ಸ್ ನಡುವಿನ ಸಿದ್ಧಾಂತದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ ಎಂದು ರಾಹುಲ್ ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ಮತ್ತು ಜಾನಪದ ಗಾಯಕ ಪ್ರಹ್ಲಾದ್ ಟಿಪಾನಿಯಾ ಪರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತಾಡಿದ ರಾಹುಲ್ ಗಾಂಧಿ "ಬಿಜೆಪಿ, ಆರ್ಎಸ್ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕುಟುಂಬದ ಮೇಲೆ ದ್ವೇಷವಿದೆ ಅದನ್ನು ತೆಗೆದು ಹಾಕುವುದು ನಮ್ಮ ಕೆಲಸ" ಎಂದರು.
ಮೋದಿ ಅವರು ನನ್ನ ತಂದೆ, ನನ್ನ ಅಜ್ಜಿ ಮತ್ತು ನನ್ನ ಬಗ್ಗೆ ದ್ವೇಷ ಮತ್ತು ಕೋಪದಿಂದ ಮಾತನಾಡುತ್ತಾರೆ, ಆದರೆ ಅವರಿಗೆ ಅಪ್ಪುಗೆಯನ್ನು ನೀಡಬಲ್ಲೆ. ನೀವು ಪ್ರಧಾನಿಯಾಗಿದ್ದೀರಿ, ನೀವು ದ್ವೇಷವನ್ನು ಬಿಟ್ಟು ಪ್ರೀತಿಯೊಂದಿಗೆ ಕೆಲಸ ಮಾಡಬೇಕು. ದ್ವೇಷವನ್ನು ಪ್ರೀತಿಯಿಂದ ಮಾತ್ರ ತೊಡೆದು ಹಾಕಲು ಸಾಧ್ಯ "ವೆಂದು ಅವರು ತಿಳಿದಿರಬೇಕು ಎಂದರು.ಇದೇ ವೇಳೆ ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆ ಬಗ್ಗೆ ಮಾತನಾಡಿದ ಅವರು ದೇಶದ ಆರ್ಥಿಕತೆಯನ್ನು ಈ ಯೋಜನೆ ಪುನರುಜ್ಜೀವನಗೊಳಿಸಲಿದೆ ಎಂದರಲ್ಲದೆ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂಧಿದ್ದೆ ಆದಲ್ಲಿ 22 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸಲಿದೆ ಎಂದು ಭರವಸೆ ನೀಡದರು.