ನವದೆಹಲಿ: ಕಾಂಗ್ರೆಸ್ನ ಯುವ ನಾಯಕ ರಾಹುಲ್ ಗಾಂಧಿ ಅವರ ಮದುವೆ ವಿಚಾರ ಮತ್ತೊಮ್ಮೆ ಚರ್ಚೆಯಾಗುತ್ತಿದೆ. 53 ವರ್ಷವಾದರೂ ಒಂಟಿಯಾಗಿರುವ ರಾಹುಲ್ಗೆ ಮದುವೆ ಯಾವಾಗ? ಎಂದು ಕೇಳುವವರೇ ಹೆಚ್ಚು. ಇತ್ತೀಚೆಗಷ್ಟೇ ಹರಿಯಾಣದ ಮಹಿಳಾ ರೈತರು ಗಾಂಧಿ ಕುಟುಂಬವನ್ನು ಭೇಟಿಯಾಗಲು ಬಂದ ವೇಳೆ ರಾಹುಲ್ ಮದುವೆಯ ಬಗ್ಗೆ ಮತ್ತೆ ಮಾತುಕತೆ ನಡೆದಿದೆ.
‘ಭಾರತ್ ಜೋಡೋ ಯಾತ್ರೆ’ಯ ವೇಳೆ ಭೇಟಿಯಾಗಿದ್ದ ಹರಿಯಾಣದ ಸೋನಿಪತ್ನ ಮಹಿಳಾ ರೈತರಿಗೆ ಕೊಟ್ಟ ಮಾತಿನಂತೆ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಆತಿಥ್ಯ ನೀಡಿದ್ದಾರೆ. ಬಳಿಕ ಮಾತನಾಡಿದ ರಾಹುಲ್, ‘ಇದು ನನ್ನ ತಾಯಿ, ಪ್ರಿಯಾಂಕಾ ಮತ್ತು ನನಗೆ' ನೆನಪಿಡುವ ದಿನವೆಂದು ಹೇಳಿದ್ದಾರೆ. ತಮ್ಮ ಮನೆಗೆ ಬಂದಿದ್ದ ಮಹಿಳಾ ರೈತರಿಗೆ ದೆಹಲಿ ದರ್ಶನ ಮಾಡಿಸುವುದರ ಜೊತೆಗೆ ರಾತ್ರಿಯ ಭೋಜನದ ಮೂಲಕ ಉತ್ತಮ ಆತಿಥ್ಯ ನೀಡಲಾಯಿತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ
मां, प्रियंका और मेरे लिए एक यादगार दिन, कुछ खास मेहमानों के साथ!
सोनीपत की किसान बहनों का दिल्ली दर्शन, उनके साथ घर पर खाना, और खूब सारी मज़ेदार बातें।
साथ मिले अनमोल तोहफे - देसी घी, मीठी लस्सी, घर का अचार और ढेर सारा प्यार।
पूरा वीडियो यूट्यूब पर:https://t.co/2rATB9CQoz pic.twitter.com/8ptZuUSDBk
— Rahul Gandhi (@RahulGandhi) July 29, 2023
‘ದೇಶದ ಸಮಸ್ಯೆಗಳಿಂದ ಹಿಡಿದು ಪ್ರಿಯಾಂಕಾ ಮತ್ತು ನನ್ನ ಬಾಲ್ಯದ ಸಮಸ್ಯೆಗಳವರೆಗೆ ಅನೇಕ ವಿಷಯಗಳನ್ನು ಈ ವೇಳೆ ಚರ್ಚಿಸಲಾಯಿತು. ಕಾನೂನಿನಿಂದ ಸರ್ಕಾರದ ನೀತಿಗಳವರೆಗೆ ಪ್ರತಿಯೊಂದು ವಿಷಯದ ಬಗ್ಗೆ ಮಹಿಳಾ ರೈತರು ತಿಳಿದಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಪ್ರತಿಯೊಬ್ಬ ರೈತರು ಜಿಎಸ್ಟಿ, ಹಣದುಬ್ಬರದಿಂದ ತೊಂದರೆಗೀಡಾಗಿದ್ದಾರೆ. ಅಗ್ನಿವೀರ್ನಿಂದಾಗಿ ಹರಿಯಾಣ ಯುವಕರು ಕಷ್ಟಪಡುತ್ತಿದ್ದಾರೆ’ ಎಂದು ರಾಹುಲ್ ಹೇಳಿದರು.
ಇದೇ ವೇಳೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ ರೈತ ಮಹಿಳೆಯರು, ರಾಹುಲ್ ಗಾಂಧಿ ಮದುವೆಯ ಬಗ್ಗೆ ಕೇಳಿದ್ದಾರೆ. ಇದಕ್ಕುತ್ತರಿಸಿದ ಸೋನಿಯಾ ಗಾಂಧಿಯವರು, ‘ನೀವೆ ಒಂದು ಒಳ್ಳೆಯ ಹೆಣ್ಣು ನೋಡಿ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷಗಳ ಒಗ್ಗಟ್ಟಿಗೆ ಶಾಕ್! ಪ್ರಧಾನಿ ಮೋದಿ ಜೊತೆ ಸೇರಲಿದ್ದಾರೆ INDIA ಮೈತ್ರಿಯ ಪ್ರಮುಖ ವ್ಯಕ್ತಿ..?
ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ: ‘ಭಾರತ್ ಜೋಡೋ ಯಾತ್ರೆ’ಯ ವೇಳೆ ನಾನು ಹರಿಯಾಣದ ರೈತರ ಮನೆಯಲ್ಲಿಯೇ ಊಟ ಮಾಡಿದ್ದೆ. ಈ ವೇಳೆ ನನ್ನ ಜೊತೆ ಮಾತನಾಡಿದ್ದ ಅವರು ದೆಹಲಿ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ದೆಹಲಿಗೆ ಆಹ್ವಾನಿಸಿ ರಾಷ್ಟ್ರ ರಾಜಧಾನಿಯ ದರ್ಶನ ಮಾಡಿಸಲಾಯಿತು. ರಾತ್ರಿ ಅವರಿಗಾಗಿ ನಮ್ಮ ಮನೆಯಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಅಂದು ಅವರ ಮನೆಯಲ್ಲಿ ಮಾಡಿದ ಊಟದ ಋಣ ತಿರಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾವು ಅವರಿಗೆ ಆತಿಥ್ಯ ನೀಡಿದ್ದೇವೆ’ ಎಂದು ರಾಹುಲ್ ವಿಡಿಯೋ ಹಂಚಿಕೊಂಡಿದ್ದಾರೆ.
ನೀವೇ ಹೆಣ್ಣು ನೋಡಿ ಎಂದ ಸೋನಿಯಾ!: ಹರಿಯಾಣದ ಮಹಿಳಾ ರೈತರ ಜೊತೆಗೆ ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಕೂಡ ಭೋಜನ ಮಾಡಿದರು. ಇದೇ ವೇಳೆ ಆತ್ಮೀಯ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರ ಕಿವಿಯಲ್ಲಿ ಮಹಿಳೆಯೊಬ್ಬರು ‘ರಾಹುಲ್ ಅವರ ಮದುವೆ ಯಾವಾಗ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅವರು, ‘ನೀವೇ ಒಂದು ಒಳ್ಳೆಯ ಹುಡುಗಿಯನ್ನು ನೋಡಿ, ಮದುವೆ ಆಗುತ್ತದೆ’ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.