ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ದಲ್ಲಿ ನಡೆದ ಕಿಂಗ್ಸ್ ಎಲೆವನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನ ಪಂದ್ಯದಲ್ಲಿ ಕಾಲಿನ್ ಇಂಗ್ರಾಂ ಹಿಡಿದ ಕ್ಯಾಚ್ ಪಂದ್ಯದ ಸ್ವರೂಪವನ್ನೇ ಬದಲಿಸಿತು.ಈ ಕ್ಯಾಚ್ ನ್ನು ಟೂರ್ನಿಯ ಅದ್ಭುತ ಕ್ಯಾಚ್ ಎಂದು ಹೇಳಲಾಗುತ್ತಿದೆ.
Fantastic innings from @SDhawan25 and great composure from Shreyas gives a well deserved win.
The catch by Colin Ingram ( eventually by Axar) to dismiss Chris Gayle made a huge difference , Great presence of mind #DCvKXIP https://t.co/xzaTK1Qz8w— Mohammad Kaif (@MohammadKaif) April 20, 2019
After Catch of Chris Gyale by Colin Ingram.. #DCvKXIP pic.twitter.com/9hBvOvyiMf
— Loveyouall_007 (@loveyouall_007) April 20, 2019
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೆಲ್ ಅವರು ಕೇವಲ 37 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ಅಪಾಯಕಾರಿಯಾಗಿ ಪರಿಣಮಿಸಿದ್ದರು. ಈ ಹಂತದಲ್ಲಿ ಸಂದೀಪ್ ಲಮಿಚನೆ ಅವರ ಬೌಲಿಂಗ್ ನಲ್ಲಿ ಕಾಲಿನ್ ಇಂಗ್ರಾಂ ಅವರು ಸಿಕ್ಸರ್ ಹೋಗುತ್ತಿದ್ದ ಬೌಲನ್ನು ಹಿಡಿದು ಅಕ್ಸರ್ ಪಟೇಲ್ ಕಡೆಗೆ ಎಸೆದರು. ಈ ಸಂದರ್ಭದಲ್ಲಿ ಆಗಲೇ ಉತ್ತಮ ಮೊತ್ತ ಗಳಿಸಿದ್ದ ಗೇಲ್ ಅಪಾಯಕಾರಿಯಾಗಿದ್ದರು. ಒಂದು ವೇಳೆ ಅವರು ಔಟಾಗದೆ ಹೋಗದಿದ್ದರೆ ಪಂಜಾಬ್ ತಂಡದ ಮೊತ್ತವು 200 ರ ಗಡಿ ದಾಟುವ ಸಾಧ್ಯತೆ ಹೆಚ್ಚಿತ್ತು.
Absouletely breathtaking! Hopping Colin Ingram finds teammate Axar Patel on the boundary to complete a smart relay catch. #DCvKXIP #IPL2019 pic.twitter.com/EkkmImdrx1
— Deepak Raj Verma (@DeVeDeTr) April 20, 2019
ಈಗ ಗೇಲ್ ಅವರು ಕ್ಯಾಚ್ ಹಿಡಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಗೇಲ್ ಔಟಾದ ನಂತರ ಪಂಜಾಬ್ ತಂಡಕ್ಕೆ ಕೇವಲ163 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡವು ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಅರ್ಧ ಶತಕದಿಂದಾಗಿ 19.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.