ರಾಂಚಿ: ಜಾರ್ಖಂಡ್‍ನ ಗಿರಿಧ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‍ಕೌಂಟರ್‍ನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದು, ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ.
ರಾಂಚಿ ಯಿಂದ 185 ಕಿ.ಮೀ. ದೂರದಲ್ಲಿರುವ ಬೆಲ್ಬಾ ಘಾಟ್ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ ನ 7ನೇ ಬೆಟಾಲಿಯನ್ ಇಂದು ಬೆಳಿಗ್ಗೆ 6:15ರ ವೇಳೆಗೆ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಎನ್‍ಕೌಂಟರ್ ನಡೆದಿದ್ದು ಸೇನಾ ಪಡೆಗಳು ಮೂವರು ನಕ್ಸಲರ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಓರ್ವ ಸಿಆರ್ಪಿಎಫ್ ಯೋಧ ಮೃತಪಟ್ಟಿದ್ದಾರೆ.
Giridih: Bodies of 3 Naxals along with 1 AK-47 rifle, 3 magazines & 4 pipe bombs recovered after 7 battalion of CRPF carried out special operations in forest area in Belbha Ghat today wherein an encounter broke out with Naxals. One CRPF personnel lost his life. #Jharkhand pic.twitter.com/J9UK86ME2f
— ANI (@ANI) April 15, 2019
ಪ್ರದೇಶದಲ್ಲಿ ಮೂವರು ನಕ್ಸಲರ ಮೃತ ದೇಹ ವಶಪಡಿಸಿಕೊಂಡಿರುವ ಭದ್ರತಾ ಪಡೆ, ಇದಲ್ಲದೆ ಮೃತ ನಕ್ಸಲರ ಬಳಿಯಿದ್ದ ಎಕೆ -47 ರೈಫಲ್, 3 ಮ್ಯಾಗಜಿನ್ ಮತ್ತು ಸ್ಫೋಟಕಗಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಪ್ರದೇಶದಲ್ಲಿ ಉಳಿದ ನಕ್ಸಲರಿಗಾಗಿ ಭದ್ರತಾ ಪಡೆ ತೀವ್ರ ಶೋಧ ನಡೆಸಿದೆ.