ಜೈಪುರ: ಭಗವಾನ್ ರಾಮ ಹಾಗೂ ಸೀತೆಯ ಕುರಿತಂತೆ ರಾಜಸ್ಥಾನದ ಕಾಂಗ್ರೆಸ್ ಸಚಿವ ರಾಜೇಂದ್ರ ಗುಧಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೀತೆಯ ಸೌಂದರ್ಯಕ್ಕೆ ರಾಮ ಹಾಗೂ ರಾವಣ ಇಬ್ಬರೂ ಹುಚ್ಚರಾಗಿದ್ದರು ಅಂತಾ ಹೇಳಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ರಾಜಸ್ಥಾನದ ಗೃಹರಕ್ಷಕ ದಳ ಮತ್ತು ಸೈನಿಕ ಕಲ್ಯಾಣ ಖಾತೆಯ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ಎಕ್ಸ್-ರೇ ಯಂತ್ರವನ್ನು ಉದ್ಘಾಟಿಸಲು ಜುಂಜುನುವಿನ ಗುಧಗೌಡಜಿ CHCಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ‘ಸೀತಾ ಮಾತೆಯು ತುಂಬಾ ಸುಂದರವಾಗಿದ್ದಳು. ಸೀತೆಯ ಈ ಸೌಂದರ್ಯಕ್ಕೆ ಭಗವಾನ್ ರಾಮ ಮತ್ತು ರಾವಣರು ಹುಚ್ಚರಾಗಿದ್ದರು. ಆಕೆ ಸುಂದರವಾಗಿದ್ದರಿಂದಲೇ ರಾಮ ಮತ್ತು ರಾವಣರ ನಡುವೆ ಯುದ್ಧ ನಡೆದಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಲಂ 370 ರದ್ದತಿ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆಗಸ್ಟ್ 2ಕ್ಕೆ
‘ಮಾತೆ ಸೀತೆಯ ಸೌಂದರ್ಯವನ್ನು ಊಹಿಸಲು ಸಾಧ್ಯವಿಲ್ಲ. ಅಕೆಯ ಆಕರ್ಷಣೆಯಿಂದಲೇ ಶ್ರೀರಾಮ ಮತ್ತು ರಾವಣರಂತಹ ಅದ್ಭುತ ಮಾನವರು ಹುಚ್ಚರಾದರು. ಅಕೆಯ ಸೌಂದರ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದೇ ರೀತಿ ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ನನ್ನ ಹಿಂದೆ ಓಡುತ್ತಿದ್ದಾರೆ. ನನ್ನಲ್ಲಿ ಏನಾದರೂ ಗುಣ ಇರಬೇಕು’ ಅಂತಾ ಹೇಳಿದ್ದಾರೆ. ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ಸಚಿವನ ಈ ಹೇಳಿಕೆಯು ವಿವಾದದ ಕಿಡಿ ಹೊತ್ತಿಸಿದೆ.
Shocking and absolutely unacceptable
ASHOK GEHLOT’s Minister says Prabhu Ram was “mad” behind Maa Sita’s beauty - ((Rajasthan Minister Rajendra Gudda))
Makes very objectionable comments on Maa Sita & Prabhu Ram
This is the true anti Hindu Face of Congress
Deny existence of… pic.twitter.com/HXGZy4GAKx
— Shehzad Jai Hind (@Shehzad_Ind) July 11, 2023
ಸೀತಾಮಾತೆ ಮತ್ತು ಶ್ರೀರಾಮನ ಬಗ್ಗೆ ಸಚಿವ ರಾಜೇಂದ್ರ ಗುಧಾ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಕಾಂಗ್ರೆಸ್ನ ನಿಜವಾದ ಹಿಂದೂ ವಿರೋಧಿ ಮುಖವನ್ನು ಬಹಿರಂಗಪಡಿಸಿದೆ ಅಂತಾ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದಾರೆ. ಕೂಡಲೇ ಸಚಿವ ಸ್ಥಾನದಿಂದ ರಾಜೇಂದ್ರ ಗುಧಾರನ್ನು ವಜಾಗೊಳಿಸಬೇಕು ಎಂದು ಅಶೋಕ್ ಗೆಹ್ಲೋಟ್ಗೆ ಬಿಜೆಪಿ ವಕ್ತಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Delhi Rains: 1978ರ ದುರಂತವನ್ನು ಮತ್ತೆ ನೆನಪಿಸುತ್ತಿದೆ ಡೆಲ್ಲಿ ಮಳೆ
‘ಈ ಬಾರಿ ನಾನು ಯಾವ ಪಕ್ಷದಿಂದ ಟಿಕೆಟ್ ಪಡೆಯುತ್ತೇನೆಂದು ಜನರು ಚರ್ಚಿಸುತ್ತಿದ್ದಾರೆ. ನಾನು ನನ್ನ ಕೆಲಸದ ಆಧಾರದ ಮೇಲೆ ಮತಗಳನ್ನು ಪಡೆಯುತ್ತೇನೆ ಹೊರತು ಯಾವುದೇ ಪಕ್ಷದ ಚುನಾವಣಾ ಚಿಹ್ನೆಯ ಮೇಲೆ ಅಲ್ಲವೆಂದು ಜನರಿಗೆ ಹೇಳಲು ಬಯಸುತ್ತೇನೆ ಅಂತಾ ಅವರು ಹೇಳಿದ್ದಾರೆ.
ಸಚಿವ ರಾಜೇಂದ್ರ ಗುಧಾ ಈ ಹಿಂದೆಯೂ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಒಳಗಾಗಿದ್ದರು. 2021ರ ನವೆಂಬರ್ ನಲ್ಲಿ ಅವರು ತಮ್ಮ ಹಳ್ಳಿಯ ರಸ್ತೆಗಳು 'ಹೇಮಾ ಮಾಲಿನಿಯ ಕೆನ್ನೆ'ಯಂತಿರಬೇಕು ಎಂದು ಹೇಳಿದ್ದರು. ಸ್ವಲ್ಪ ಹೊತ್ತು ತಡೆದು ಮತ್ತಷ್ಟು ನಕ್ಕು ಹೇಮಾ ಮಾಲಿನಿಗೆ ಈಗ ವಯಸ್ಸಾಗಿದೆ. ಹೀಗಾಗಿ ನಮ್ಮ ಹಳ್ಳಿಯ ರಸ್ತೆಗಳು ‘ಕತ್ರಿನಾ ಕೈಫ್ ಕೆನ್ನೆ’ಯಂತಿರಬೇಕು ಅಂತಾ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.