Delhi Rains: 1978ರ ದುರಂತವನ್ನು ಮತ್ತೆ ನೆನಪಿಸುತ್ತಿದೆ ಡೆಲ್ಲಿ ಮಳೆ

Delhi Rain: ದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಚುರುಕಾಗಿದೆ. ದೆಹಲಿಯಲ್ಲಿಯೂ ಕೂಡ ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ರಾಷ್ಟ್ರ ರಾಜಧಾನಿಯ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ವರುಣಾರ್ಭಟಕ್ಕೆ ದೆಹಲಿಯ ಹಲವು ಪ್ರದೇಶಗಳು ಜಲಾವೃತವಾಗಿದ್ದು 1978ರ ಪ್ರವಾಹದ ಪರಿಸ್ಥಿತಿಯನ್ನು ಮತ್ತೆ ನೆನಪಿಸುತ್ತಿವೆ. ಈ ಕುರಿತ ಒಂದು ವರದಿ ಇಲ್ಲಿದೆ... 

Written by - Yashaswini V | Last Updated : Jul 11, 2023, 01:50 PM IST
  • ನಾಲ್ಕು ದಶಕಗಳ ಹಿಂದ ಮುಂಗಾರು ಮಳೆ ಹಾಗೂ ಯಮುನಾ ನದಿಯ ಪ್ರಕೋಪಕ್ಕೆ ಸಿಲುಕಿದ್ದ ದೆಹಲಿ ಅಕ್ಷರಶಃ ನಲುಗಿ ಹೋಗಿತ್ತು.
  • ಸೆಪ್ಟೆಂಬರ್ 1978 ರಲ್ಲಿ ಪ್ರವಾಹದಿಂದಾಗಿ ಒಂದೆಡೆ ಯಮುನಾ ನದಿಯ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿತ್ತು
  • ಈ ಸಂದರ್ಭದಲ್ಲಿ ಸಾವಿರಾರು ಜನರು ಸೂರು ಕಳೆದುಕೊಂಡರು.
Delhi Rains: 1978ರ ದುರಂತವನ್ನು ಮತ್ತೆ ನೆನಪಿಸುತ್ತಿದೆ ಡೆಲ್ಲಿ ಮಳೆ title=

Delhi Rain Effect: ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಅದರಲ್ಲೂ ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಭಾರೀ ಮಳೆಯಿಂದಾಗಿ ದೆಹಲಿಯ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಭಾರತೀಯ ಹವಾಮಾನ ಇಲಾಖೆಯಿಂದ 'ಆರೆಂಜ್ ಅಲರ್ಟ್' ಅನ್ನು ಘೋಷಿಸಲಾಗಿದೆ.  ಕೇಂದ್ರ ಜಲ ಆಯೋಗದ ಪ್ರಕಾರ, ಯಮುನಾ ನದಿಯಲ್ಲಿ ನೀರಿನ ಮಟ್ಟವು 206. 24 ಮೀಟರ್‌ಗಳನ್ನು ಮುಟ್ಟಿದೆ - 205.33 ಮೀಟರ್‌ಗಳ ಅಪಾಯದ ಗುರುತುಗಿಂತ ಸ್ವಲ್ಪ ಹೆಚ್ಚಾಗಿದೆ. ಇಲ್ಲಿನ ಪರಿಸ್ಥಿತಿ 1978ರ ಪ್ರವಾಹದ ಭಯಾನಕ ದಿನಗಳನ್ನು ಮತ್ತೆ ನೆನಪು ಮಾಡುತ್ತಿವೆ. 

ಯಮುನಾ ನದಿಯಲ್ಲಿ ನೀರು ಹೆಚ್ಚಾಗಲು ಮಳೆ ಮಾತ್ರವಲ್ಲ, ಇದೂ ಸಹ ಕಾರಣ: 
ವಾಸ್ತವವಾಗಿ, ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲು ನಿರಂತರ ಮಳೆಯ ಹೊರತಾಗಿ, ವಾಯುವ್ಯ ಭಾರತದಾದ್ಯಂತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ  ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡಿರುವುದು ಕೂಡ ಪ್ರಮುಖ ಕಾರಣವಾಗಿದೆ. ಪ್ರವಾಹ ನಿಯಂತ್ರಣ ಇಲಾಖೆ ಪ್ರಕಾರ, ಸೋಮವಾರ ಮಧ್ಯಾಹ್ನ 3 ಗಂಟೆಗೆ ಹತ್ನಿಕುಂಡ್ ಬ್ಯಾರೇಜ್ ಮೂಲಕ ಸುಮಾರು 2,15,677 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ- ಕಲಂ 370  ರದ್ದತಿ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆಗಸ್ಟ್ 2ಕ್ಕೆ 

ಮಳೆ ಎಫೆಕ್ಟ್ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ: 
ಇನ್ನು ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನವೇ ಅಸ್ತವ್ಯಸ್ತವಾಗಿದ್ದು, ದೆಹಲಿ ಮತ್ತು ಸುತ್ತಮುತ್ತಲಿನ ಎನ್‌ಸಿ‌ಆರ್ ಪ್ರದೇಶಗಳಲ್ಲಿ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಕಳೆದ ಎರಡು-ಮೂರು ದಿನಗಳಿಂದ ದೆಹಲಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.  ಈ ಎಲ್ಲದರ ನಡುವೆ ದೆಹಲಿಯ ಈ ಸ್ಥಿತಿಯು ನಾಲ್ಕು ದಶಕಗಳ ಹಿಂದಿನ ಪ್ರವಾಹ ಪರಿಸ್ಥಿತಿಯನ್ನು ಮತ್ತೆ ನೆನಪಿಸುತ್ತಿದೆ. 

ಇದನ್ನೂ ಓದಿ- ಪ್ರಯಾಣಿಕರನ್ನು ಹೊತ್ತು ಮದುವೆಗೆ ಹೊರಟಿದ್ದ ಬಸ್ ಕಾಲುವೆಗೆ ಬಿದ್ದು 7 ಸಾವು 

ದೆಹಲಿಯಲ್ಲಿ 1978 ರಲ್ಲಿ ಸಂಭವಿಸಿದ್ದ ಭೀಕರ ಪ್ರವಾಹ: 
ಹೌದು, ನಾಲ್ಕು ದಶಕಗಳ ಹಿಂದ ಮುಂಗಾರು ಮಳೆ ಹಾಗೂ ಯಮುನಾ ನದಿಯ ಪ್ರಕೋಪಕ್ಕೆ ಸಿಲುಕಿದ್ದ ದೆಹಲಿ ಅಕ್ಷರಶಃ ನಲುಗಿ ಹೋಗಿತ್ತು. ಸೆಪ್ಟೆಂಬರ್ 1978 ರಲ್ಲಿ ಪ್ರವಾಹದಿಂದಾಗಿ ಒಂದೆಡೆ ಯಮುನಾ ನದಿಯ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿದ್ದರಿಂದ ರಾಜಧಾನಿ ನಗರದ ಸುತ್ತಲೂ ಅಣಬೆಗಳಂತೆ ಹುಟ್ಟಿಕೊಂಡ ಹಲವಾರು ಸಣ್ಣ ವಸಾಹತುಗಳು ಮತ್ತು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿಹೋದರೆ, ಮತ್ತೊಂದೆಡೆ ಸಾವಿರಾರು ಜನರು ಸೂರು ಕಳೆದುಕೊಂಡಿದ್ದರು. 43 ಚದರ ಕಿಲೋಮೀಟರ್ ಹೊಲಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ಮೌಲ್ಯದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದವು. ಈ ಸಂದರ್ಭದಲ್ಲಿ ನ್ಯೂ ಫ್ರೆಂಡ್ಸ್ ಕಾಲೋನಿ, ಮಹಾರಾಣಿ ಬಾಗ್, ಓಖ್ಲಾ ಮತ್ತು ಜಾಮಿಯಾ ಮಿಲಿಯಾ ಸೇರಿದಂತೆ ದಕ್ಷಿಣ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಆ ಸಮಯದಲ್ಲಿ ಹರಿಯಾಣದಿಂದ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣವಾಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News