ಭುವನೇಶ್ವರ: ಭಾನುವಾರ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಭಾರತ ತಂಡವು ಜರ್ಮನಿಯನ್ನು 2-1 ರ ಅಂತರದಲ್ಲಿ ಸೋಲಿಸುವುದರ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
ಪಂದ್ಯದ ಪ್ರಾರಂಭದಲ್ಲಿ ಸುನಿಲ್ ಗೋಲನ್ನು ಗಳಿಸುವುದರ ಮೂಲಕ ಭಾರತಕ್ಕೆ ಮುನ್ನಡೆ ತಂದರು,ಆದರೆ ತದನಂತರ ಜರ್ಮನಿಯ ಮಾರ್ಕ್ ಅಪ್ಪೆಲ್ ರ ಗೋಲಿನ ಮೂಲಕ ಎರಡು ತಂಡಗಳ ಗೋಲಿನ ಪ್ರಮಾಣ ಸಮಗೊಂಡಿತು.ಆದರೆ ಪಂದ್ಯದ ಕೊನೆಯಾರ್ದದಲ್ಲಿ ಇನ್ನು 6 ನಿಮಿಷದ ಪಂದ್ಯವಿರುವಾಗ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸುವುದರ ಮೂಲಕ ಭಾರತದ ಗೆಲುವಿಗೆ ಕಾರಣಕರ್ತರಾದರು.
9 ಸಾವಿರ ಪ್ರೇಕ್ಷಕರಿಂದ ಕಿಕ್ಕಿರಿದಿದು ತುಂಬಿದ್ದ ಇಲ್ಲಿನ ಕಳಿಂಗದ ಕ್ರೀಡಾಂಗಣ, ಬಲಿಷ್ಠ ಜರ್ಮನಿ ವಿರುದ್ದದ ಫೈನಲ್ ಪಂದ್ಯವಾಗಿದ್ದರಿಂದ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆಟದ ಪ್ರಾರಂಭದ ನಂತರ ಸುನಿಲ್ರವರ ಮೊದಲ ಗೋಲ್ ನೊಂದಿಗೆ ಖಾತೆ ತೆರೆದ ಭಾರತ ಗೆಲ್ಲುವ ಮುನ್ಸೂಚನೆ ನೀಡಿತು. ಆದರೆ ಜರ್ಮನಿಯ ಅಪ್ಪೆಲ ರ ಗೊಲಿನೊಂದಿಗೆ ಸಮಾನಗೊಂಡ ಗೋಲಿನ ಅಂತರ ಪಂದ್ಯವನ್ನು ಇನ್ನು ಕುತೂಹಲ ಕೆರಳಿಸಿತ್ತು. ಆದರೆ ಕೊನೆಗೆ ಹರ್ಮನ್ ಪ್ರೀತ್ ಸಿಂಗ್ ರ ಗೋಲಿನೊಂದಿಗೆ ಕೊನೆಗೂ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಬಲಿಷ್ಠ ಜರ್ಮನಿ ತಂಡವನ್ನು ಸೋಲಿಸಿ ವಿಶ್ವ ಹಾಕಿ ಲೀಗ್ ನಲ್ಲಿ ಎರಡನೇಯ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ