File Against Liyo Film : ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸಿದ್ದರು. ಅದೇ ದಿನ ವಿಜಯ್ ನಟನೆಯ ʼಲಿಯೋʼ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಯಿತು. ಸದ್ಯ ರಿಲೀಸ್ ಆಗಿರುವ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಅದೇ ಹಾಡು ಇದೀಗ ಸಿನಿಮಾ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಡುಗಡೆಯಾಗಿರುವ ʼನಾ ರೆಡಿ...ʼ ಹಾಡಿನಲ್ಲಿ ಡ್ರಗ್ಸ್ ಹಾಗೂ ರೌಡಿಸಂನ್ನು ಅತಿಯಾಗಿ ವೈಭವೀಕರಣ ಮಾಡಲಾಗಿದೆ ಎಂದು ಆರೋಪಿಸಿ ನಟ ವಿಜಯ್ ಹಾಗೂ ಸಿನಿಮಾತಂಡದ ಮೇಲೆ ದೂರು ದಾಖಲಿಸಲಾಗಿದೆ. ಚೆನ್ನೈನ ಕೊರುಕ್ಕುಪ್ಪೆಟ್ಟೈ ಮೂಲದ ಎಲ್ವಂ ಎಂಬುವವರು ಆರೋಪ ಮಾಡಿದ್ದಾರೆ.
ಇವರು ಮೊದಲು ಜೂನ್ 25ರಂದು ಆನ್ಲೈನ್ನಲ್ಲಿ ದೂರು ನೀಡಿ, ಇಂದು (ಜೂನ್ 26) ಅರ್ಜಿ ಸಲ್ಲಿಸಿದ್ದಾರೆ. ಸಿನಿಮಾ ತಂಡ ಹಾಗೂ ವಿಜಯ್ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹೇರಿದ್ದಾರೆ.
ಇದನ್ನೂ ಓದಿ-ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ಕೀರ್ತಿ ಸುರೇಶ್..?
ಇನ್ನು ನಟ ವಿಜಯ್ ಕೆಲವು ದಿನಗಳ ಹಿಂದೆ ಮಾದಕ ವಸ್ತುಗಳ ವಿರುದ್ಧ ಚೆನ್ನೈ ಪೊಲೀಸರು ನಗರದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆರೋಜಿಸಿದ್ದರು. ಇದು ಅಭಿಮಾನಿಗಳಿಗೂ ಗೊತ್ತಿರುವ ವಿಚಾರ. ಈ ಕಾರ್ಯಕ್ರಮದಲ್ಲಿ ದಳಪತಿ ವಿಜಯ್ ಸಹ ಭಾಗವಹಿಸಿದ್ದರು. ಇದೀಗ ಇಂತಹ ಅಪವಾದ ಅವರ ಮೇಲೆ ಬಂದಿರುವುದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಈ ಸಿನಿಮಾದಲ್ಲಿ ವಿಜಯ್ಗೆ ಜೋಡಿಯಾಗಿ ತ್ರಿಷಾ ಕಾಣಿಸಿಕೋಂಡಿದ್ದಾರೆ. ಅನೇಕ ವರ್ಷಗಳ ಬಳಿಕ ತ್ರಿಷಾ ಮತ್ತು ದಳಪತಿ ವಿಜಯ್ ಒಟ್ಟಿಗೆ ತೆರೆ ಮೇಲೆ ಬರುತ್ತಿದ್ದಾರೆ. ಸೂಪರ್ಹಿಟ್ ಆನ್ಸ್ಕ್ರೀನ್ ಜೋಡಿಗಳಲ್ಲಿ ತ್ರಿಷಾ ಹಾಗೂ ವಿಜಯ್ ಜೋಡಿ ಕೂಡ ಒಂದು. ಇನ್ನು ದಾಖಲಾಗಿರುವ ದೂರಿನನ್ವಯ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾದುನೋಡಬೇಕು.
ಇದನ್ನೂ ಓದಿ-Puneet Rajkumar: ಶಕ್ತಿ ಯೋಜನೆ ಹಿನ್ನಲೆ ಪುನೀತ್ ರಾಜ್ ಕುಮಾರ್ ಸಮಾಧಿಗೆ ಮಹಿಳೆಯರ ದಂಡು..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.