ನವದೆಹಲಿ: ಇಲ್ಲಿನ ಫಿರೋಜ್ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವು ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿತು.ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ತಂಡವು 8 ವಿಕೆಟ್ ಗಳ ನಷ್ಟಕ್ಕೆ 20 ಓವರ್ ಗಳಲ್ಲಿ 185 ರನ್ ಗಳಿಸಿತು.
A very well deserved Man of the Match award for young @PrithviShaw for his stupendous knock of 99 runs.#VIVOIPL pic.twitter.com/Akr1WyaGmu
— IndianPremierLeague (@IPL) March 30, 2019
ಕೊಲ್ಕತ್ತಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ದಿನೇಶ್ ಕಾರ್ತಿಕ್ 50 ಹಾಗೂ ಆಂಡ್ರೆ ರಸೆಲ್ 62 ರನ್ ಗಳನ್ನು ಗಳಿಸುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದರು.ರಸೆಲ್ ಅಂತು ಕೇವಲ 28 ಎಸೆತಗಳಲ್ಲಿ ಆರು ಭರ್ಜರಿ 6 ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರು.
Celebrations galore at the Kotla as the @DelhiCapitals clinch a thriller in the Super Over 🙌🕺#DCvKKR pic.twitter.com/9ryZTgd9u0
— IndianPremierLeague (@IPL) March 30, 2019
ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಪೃಥ್ವಿ ಷಾ ಅವರ ಭರ್ಜರಿ ಬ್ಯಾಟಿಂಗ್ ತಂಡಕ್ಕೆ ಆಸರೆಯಾಯಿತು.ಷಾ ಕೇವಲ 55 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 99 ರನ್ ಗಳಿಸಿದರು.ಇನ್ನೊಂದೆಡೆಗೆ ಶ್ರೇಯಸ್ ಅಯ್ಯರ್ 43 ರನ್ ಗಳಿಸಿ ತಂಡಕ್ಕೆ ನೆರವಾದರು. ಡೆಲ್ಲಿ ತಂಡವು ಕೂಡ 185 ರನ್ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಈ ಹಿನ್ನಲೆಯಲ್ಲಿ ನಂತರ ಸೂಪರ್ ಓವರ್ ಮೂಲಕ ಪಂದ್ಯವನ್ನು ಡೆಲ್ಲಿ ತಂಡವು ಗೆದ್ದಿತು.