Guava Leaf: ಈ 4 ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಪೇರಲ ಎಲೆ.. ಹೀಗೆ ಸೇವಿಸಿ

Benefits of Guava Leaves: ನೀವು ಪೇರಲ ಹಣ್ಣನ್ನು ಅನೇಕ ಬಾರಿ ತಿಂದಿರಬೇಕು, ಆದರೆ ಈ ರುಚಿಕರವಾದ ಹಣ್ಣಿನ ಎಲೆಗಳನ್ನು ನೀವು ಎಂದಾದರೂ ತಿಂದಿದ್ದೀರಾ? ಈ ಶಕ್ತಿಯುತ ಎಲೆಗಳ ಪ್ರಯೋಜನಗಳು ಯಾವುವು ಮತ್ತು ಅವುಗಳನ್ನು ಹೇಗೆ ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.  

Written by - Chetana Devarmani | Last Updated : Jun 23, 2023, 05:35 PM IST
  • ಪೇರಲ ಎಲೆಗಳಲ್ಲಿದೆ ಆರೋಗ್ಯದ ನಿಧಿ
  • ನೀವು ಎಂದಾದರೂ ತಿಂದಿದ್ದೀರಾ?
  • ಹೇಗೆ ಸೇವಿಸಭೇಕು ಇಲ್ಲಿ ತಿಳಿಯಿರಿ
Guava Leaf: ಈ 4 ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಪೇರಲ ಎಲೆ.. ಹೀಗೆ ಸೇವಿಸಿ   title=

Benefits of Guava Leaves: ಪೇರಲವು ಎಲ್ಲಾ ವಯಸ್ಸಿನ ಜನರು ಇಷ್ಟಪಡುವ ಹಣ್ಣು. ಅದರ ಕೆಂಪು ಮತ್ತು ಬಿಳಿ ತಿರುಳು ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಈ ಹಣ್ಣನ್ನು ಜೀರ್ಣಕ್ರಿಯೆಯನ್ನು ಸುಧಾರಿಸಲು ಸೇವಿಸಲಾಗುತ್ತದೆ. ಆದರೆ ಪೇರಲ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳ ಗುಣಗಳ ಬಗ್ಗೆ ತಿಳಿದುಕೊಂಡರೆ ಖಂಡಿತಾ ಈ ಎಲೆಗಳನ್ನು ಸೇವಿಸುತ್ತೀರಿ.

ಪೇರಲ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು 

ಪೇರಲ ಎಲೆಗಳಲ್ಲಿ ನಮ್ಮ ದೇಹಕ್ಕೆ ಅತ್ಯಗತ್ಯವಾದ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಪೇರಲ ಎಲೆಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸಲ್ಫರ್, ಸೋಡಿಯಂ, ಕಬ್ಬಿಣ, ಬೋರಾನ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ವಿಟಮಿನ್ ಬಿ ಮತ್ತು ವಿಟಮಿನ್ ಸಿ ಮುಂತಾದ ಖನಿಜಗಳು ಇರುತ್ತವೆ.

ಪೇರಲ ಎಲೆಗಳನ್ನು ಹೇಗೆ ತಿನ್ನಬೇಕು

1. ಹಲ್ಲು ನೋವಿಗೆ ಪರಿಹಾರ: ಪೇರಲ ಎಲೆಗಳನ್ನು ಹಲ್ಲು ನೋವಿಗೆ ಔಷಧಿಯಾಗಿಯೂ ಬಳಸಬಹುದು. ನೋವಿರುವ ಹಲ್ಲುಗಳ ಮೇಲೆ ಪೇರಲ ಎಲೆಯ ರಸವನ್ನು ಅನ್ವಯಿಸಬಹುದು. ಇದಲ್ಲದೇ ಪೇರಲ ಎಲೆಗಳನ್ನು ಲವಂಗದೊಂದಿಗೆ ಅರೆದು ಹಲ್ಲಿನ ಮೇಲೆ ಹಚ್ಚಿದರೆ ಬೇಗ ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಕಣ್ಣಿನ ಕಿರಿಕಿರಿಗೆ ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು..ಟ್ರೈ ಮಾಡಿ ನೋಡಿ

2. ಬೊಜ್ಜು ಕಡಿಮೆಯಾಗುತ್ತೆ: ಪೇರಲ ಎಲೆಗಳಲ್ಲಿನ ಕ್ಯಾಲೊರಿಗಳ ಪ್ರಮಾಣವು ಅತ್ಯಲ್ಪವಾಗಿದೆ. ಇದು ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಗಳನ್ನು ಮಿಕ್ಸರ್ ಗ್ರೈಂಡರ್‌ನಲ್ಲಿ ಪುಡಿಮಾಡಿ ರಸವನ್ನು ಕುಡಿಯಿರಿ. ಇದರ ಮೂಲಕ ಬೊಜ್ಜು ಕಡಿಮೆ ಮಾಡಬಹುದು. 

3. ಸಕ್ಕರೆ ಮಟ್ಟ ನಿಯಂತ್ರಣ: ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ಪೇರಲ ಎಲೆಗಳು ತುಂಬಾ ಪ್ರಯೋಜನಕಾರಿ. ಇದರ ರಸವನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಆರೋಗ್ಯವು ಹದಗೆಡುವುದಿಲ್ಲ.

ಇದನ್ನೂ ಓದಿ: Breakfast Diet: ಬೆಳಗಿನ ತಿಂಡಿಗೆ ಬ್ರೆಡ್ ತಿನ್ನುತ್ತೀರಾ? ಈ 3 ಆರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ.!

4. ಅತಿಸಾರ ನಿವಾರಣೆ: ಪೇರಲ ಎಲೆಗಳ ರಸವು ಹೊಟ್ಟೆಗೆ ಒಳ್ಳೆಯದು ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನಿಮಗೆ ಅತಿಸಾರ, ಗ್ಯಾಸ್ ಅಥವಾ ಯಾವುದೇ ರೀತಿಯ ಹೊಟ್ಟೆಯ ಸಮಸ್ಯೆ ಇದ್ದರೆ, ಖಂಡಿತವಾಗಿಯೂ ಈ ಎಲೆಗಳ ರಸವನ್ನು ತೆಗೆದುಕೊಳ್ಳಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News