DeathThreat to Writer Manoj Muntashir : ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದಲೂ ಸಾಕಷ್ಟು ಟೀಕೆಗಳು ಹರಿದು ಬರುತ್ತಿವೆ. ಚಿತ್ರದಲ್ಲಿ ರಾಮ ಮತ್ತು ಹನುಮಂತನಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಸಿನಿಮಾ ವಿರುದ್ಧ ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದು ಸಿನಿಮಾವನ್ನು ದೇಶಾದ್ಯಂತ ನಿಷೇಧಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
ಆದಿಪುರುಷ್ ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ "ಕಪಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಜಲೇಗಿ ಭೀ ತೆರೆ ಬಾಪ್ ಕಿ" ಎಂದು ಕೀಳಾಗಿ ಸಂಭಾಷಣೆಯನ್ನು ಮನೋಜ್ ಬರೆದಿದ್ದಾರೆ ಎಂದು ಬಲಪಂಥೀಯ ಸಂಘಟನೆಗಳ ಮುಖಂಡರು ಆರೋಪಿಸಿ ಚಿತ್ರ ಪ್ರದರ್ಶನವನ್ನು ವಿರೋಧಿಸಿ ಮಧ್ಯಪ್ರದೇಶದಲ್ಲಿ ಕ್ಷತ್ರೀಯ ಕರ್ಣಿ ಸೇನಾ ಸಂಘಟನೆಯ ಮುಖಂಡ ರಾಜ್ ಶೇಖಾವತ್ ಸೋಮವಾರ ಸುದ್ದಿಗೋಷ್ಟಿ ನಡೆಸಿದ್ದಾರೆ.
शर्मनाक ! किसी भी सभ्य समाज में ये गुंडागर्दी स्वीकार्य नहीं है । @omraut को कर्णी सेना की इस जानलेवा धमकी का पुलिस को तुरंत संज्ञान लेना चाहिए। ये सरासर ग़लत है।
ऐसे ही अराजक और गुंडों के साथ अब तक खड़े थे ना @manojmuntashir ?
देख लिया ? pic.twitter.com/3Ml7efYgux— Vinod Kapri (@vinodkapri) June 19, 2023
ಇದನ್ನೂ ಓದಿ-"ದೇವರು ಟೈಮ್ ತಗೊಂಡು ಇವರನ್ನ ಮಾಡಿದ್ದಾನೆ" ಈ ನಟನನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!
ಆದಿಪುರುಷ್ ಸಿನಿಮಾ ಕುರಿತು ಮಾತನಾಡಿದ ಅವರು "ಈ ಸಿನಿಮಾ ತಂಡ ಹಿಂದೂಗಳ ಧಾರ್ಮಿಕ ಭಾವೆಗಳಿಗೆ ಧಕ್ಕ ತರುತ್ತಿದ್ದು ಚಿತ್ರದ ನಿರ್ದೇಶಕ ಓಂ ರಾವುತ್ ಹಾಗೂ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಇಬ್ಬರನ್ನು ಕೊಲ್ಲುವುದಾಗಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.
A Group of People in Lucknow raised ‘Manoj Muntashir Murdabad’ slogans while protesting against the film #Adipurush. They were later detained by Hazratganj Police.
— Ahmed Khabeer احمد خبیر (@AhmedKhabeer_) June 19, 2023
ಶ್ರೀರಾಮ, ರಾವಣ ಹಾಗೂ ಹನುಮಂತನ ಕುರಿತ ಸಂಭಾಷಣೆಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವು ಸಂಘಟನೆಗಳು ಮನೋಜ್ಗೆ ಜೀವ ಬೆದರಿಕೆ ಸಂದೇಶಗಳನ್ನು ನೀಡಿದ್ದು, ಇದೇ ವಿಚಾರವಾಗಿ ಮನೋಜ್ ಅವರು ಪೊಲೀಸರಿಗೆ ಭದ್ರತೆ ಕೋರಿ ಮನವಿ ಸಲ್ಲಿಸಿದ್ದಾರೆ. ಇನ್ನು ಈ ಸಾಹಿತಿಯ ಮನೆಯ ಸುತ್ತಲೂ ಬಿಗಿಭದ್ರತೆಯನ್ನು ಒದಗಿಸಲಾಗಿದೆ.
ಇನ್ನು ಚಿತ್ರದಲ್ಲಿ ತಾವು ಬರೆದ ಸಂಭಾಷಣೆಗಳು ವಿವಚಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚರವಹಿಸಿದ ಮನೋಜ್, ವಿವಾದಾತ್ಮಕ ಡೈಲಾಗ್ಗಳನ್ನು ಒಂದು ವಾರದೊಳಗಾಗಿ ತೆಗೆದುಹಾಕುತ್ತೇವೆ ಎಂದಿದ್ದರು. ಜೊತೆಗೆ ಹಿಂದೂಗಳಲ್ಲಿ ಕ್ಷಮೆ ಕೇಳಿದ್ದರು. ಅವಾಚ್ಯ ಶಬ್ದಗಳಿಂದ ತಮ್ಮನ್ನು ನಿಂದಿಸದಂತೆ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ- ʼಆದಿಪುರುಷ್ʼ ಬ್ಯಾನ್ ಆಗ್ರಹಿಸಿ AICWA ದಿಂದ ಪ್ರಧಾನಿ ಮೋದಿಗೆ ಪತ್ರ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.