ಬೆಂಗಳೂರು: ಬೆಂಗಳೂರು-ದಕ್ಷಿಣ ಲೋಕಸಭಾ ಟಿಕೆಟ್ ಕೈ ತಪ್ಪಿರುವುದಕ್ಕೆ ತೇಜಸ್ವಿನಿ ಅನಂತ್ ಕುಮಾರ್ ತಮಗೆ ಅಚ್ಚರಿ ತರಿಸಿದೆ ಎಂದರು.
Dr Tejaswini Ananth Kumar (wife of late Union minister Ananth Kumar)who was not given BJP ticket from Bangalore South LS seat:It's shocking.I stand with the party's decision.Let's not start asking questions. If we have to contribute to the country then we have to work for Modi Ji pic.twitter.com/4ro8MPJKnd
— ANI (@ANI) March 26, 2019
ಅನಂತ್ ಕುಮಾರ್ ನಿಧನದ ನಂತರ ಅವರ ಪತ್ನಿ ತೇಜಸ್ವಿನಿಯವರಿಗೆ ಸುಲಭವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ದೊರೆಯುತ್ತದೆ ಎಂದು ಭಾವಿಸಲಾಗಿತ್ತು, ಆದರೆ ಈಗ ಕೊನೆಯ ಹಂತದಲ್ಲಿ ಟಿಕೆಟ್ ತಪ್ಪಿರುವುದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಈ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ತೇಜಸ್ವಿನಿ ಅನಂತ್ ಕುಮಾರ್ "ಇದು ನನಗೆ ಮತ್ತು ಕಾರ್ಯಕರ್ತರಿಗೆ ಅಚ್ಚರಿ ಮೂಡಿಸಿದೆ.ಆದರೆ ಈ ಸಂದರ್ಭದಲ್ಲಿ ಪ್ರಬುದ್ಧತೆಯನ್ನು ವ್ಯಕ್ತಪಡಿಬೇಕಾಗಿದೆ. ಅಲ್ಲದೆ ನಮ್ಮದು ವಿಭಿನ್ನ ಪಕ್ಷವೆಂದು ಹೇಳಬೇಕಾಗಿದೆ" ಎಂದರು.
"ನಾನು ಪಕ್ಷದ ನಿರ್ಧಾರಕ್ಕೆ ಬದ್ಧಳಾಗಿದ್ದು, ಆದ್ದರಿಂದ ಪ್ರಶ್ನೆ ಕೇಳುವುದನ್ನು ನೀವು ನಿಲ್ಲಿಸಿ, ನಾವು ದೇಶಕ್ಕೆ ಕೊಡುಗೆ ನೀಡಬೇಕೆಂದರೆ ನಾವು ಪ್ರಧಾನಿ ಮೋದಿಗೋಸ್ಕರ್ ಕೆಲಸ ಮಾಡಬೇಕು" ಎಂದರು. ಈಗ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯನ್ನಾಗಿ 28 ವರ್ಷದ ಯುವ ವಕೀಲ ತೇಜಸ್ವಿ ಸೂರ್ಯ ಅವರನ್ನು ಘೋಷಿಸಿದೆ. ತೇಜಸ್ವಿ ಸೂರ್ಯ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಎಬಿವಿಪಿ ಜೊತೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದರು.