ಬೆಂಗಳೂರು : ಬಿಳಿ ಅಕ್ಕಿಯನ್ನು ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತದ ಅಧಿಕ ಸಂಖ್ಯೆಯಲ್ಲಿ ಜನರು ಸೇವಿಸುತ್ತಾರೆ. ಅನೇಕ ಜನರರಿಗೆ ಅನ್ನ ತಿಂದಿಲ್ಲ ಎಂದರೆ ಮಾಡಿದ ಭೋಜನ ಪರಿಪೂರ್ಣವಾಗುವುದೇ ಇಲ್ಲ. ಅಕ್ಕಿಯನ್ನು ಕೇವಲ ಅನ್ನ ಮಾಡಿ ತಿನ್ನುವುದಕ್ಕೆ ಮಾತ್ರವಲ್ಲ ಫ್ರೈಡ್ ರೈಸ್, ಬಿರಿಯಾನಿ, ಇಡ್ಲಿ, ದೋಸೆ, ಅಕ್ಕಿ ರೊಟ್ಟಿ ಹೀಗೆ ನಾನಾ ಬಗೆಯ ಖಾದ್ಯಗಳನ್ನು ಮಾಡಲು ಬಳಸಲಾಗುತ್ತದೆ. ಆದರೆ, ವೈದ್ಯರು ಇದನ್ನು ಸೀಮಿತ ಪ್ರಮಾಣದಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅಂದರೆ ಈ ಅಕ್ಕಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಬಿಳಿ ಅಕ್ಕಿಯ ಬದಲು ಕೆಂಪು ಅಕ್ಕಿಯನ್ನು ಬಳಸಿದರೆ ಈ ಸಮಸ್ಯೆ ಇರುವುದಿಲ್ಲ. ಹಾಗಿದ್ದರೆ ನಮ್ಮ ಆರೋಗ್ಯಕ್ಕೆ ಕೆಂಪು ಅಕ್ಕಿಯ ಪ್ರಯೋಜನಗಳೇನು ನೋಡೋಣ.
ಕೆಂಪು ಅಕ್ಕಿ ತಿನ್ನುವ 5 ಪ್ರಯೋಜನಗಳು :
1. ತೂಕ ಕಡಿಮೆಯಾಗುತ್ತದೆ :
ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಬಯಸುವವರು, ಬಿಳಿ ಅಕ್ಕಿಯ ಬದಲಿಗೆ ಕೆಂಪು ಅಕ್ಕಿಯನ್ನು ತಿನ್ನಲು ಪ್ರಾರಂಭಿಸುವುದು ಮುಖ್ಯ. ಏಕೆಂದರೆ ಕೆಂಪು ಅಕ್ಕಿ ಕೊಬ್ಬು ಮುಕ್ತವಾಗಿದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Health Tips: ಎಕ್ಕದ ಎಲೆಗಳನ್ನು ಈ ರೀತಿ ಬಳಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?
2. ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ :
ಕೆಂಪು ಅಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಫ್ರೀ ರಾಡಿಕಲ್ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
3. ಮಧುಮೇಹದಲ್ಲಿ ಪ್ರಯೋಜನಕಾರಿ :
ಬಿಳಿ ಅಕ್ಕಿ ಮಧುಮೇಹ ರೋಗಿಗಳಿಗೆ ವಿಷಕ್ಕಿಂತ ಕಡಿಮೆಯಲ್ಲ ಎಂದು ಹೇಳಲಾಗುತ್ತದೆ. ಮೊದಲೇ ಹೇಳಿದ ಹಾಗೆ ಬಿಳಿ ಅಕ್ಕಿ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅಂದರೆ ಈ ಅಕ್ಕಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬಿಳಿ ಅಣ್ಣ ಸೇವಿಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅದರ ಬದಲು ಕೆಂಪು ಅಕ್ಕಿ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.
ಇದನ್ನೂ ಓದಿ : Sunflower Seeds: ಸೂರ್ಯಕಾಂತಿ ಹೂ, ಬೀಜಗಳ ಪ್ರಯೋಜನ ಅಪಾರ...!
4. ಬಲಶಾಲಿ ಮೂಳೆಗಳಿಗಾಗಿ :
ಕೆಂಪು ಅಕ್ಕಿಯು ಮೆಗ್ನೀಸಿಯಮ್ನ ಸಮೃದ್ಧ ಮೂಲವಾಗಿದೆ. ಈ ಅನ್ನವನ್ನು ನಿಯಮಿತವಾಗಿ ತಿನ್ನುವವರ ಮೂಳೆಗಳು ಬಲಗೊಳ್ಳುತ್ತವೆ. ಪದೇ ಪದೇ ಕಾಣಿಸಿಕೊಳ್ಳುವ ಗಂಟು, ಕಿಲು ನೋವಿನಿಂದ ಕೂಡಾ ಇದು ಮುಕ್ತಿ ನೀಡುತ್ತದೆ.
5. ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ :
6 ತಿಂಗಳ ಕಾಲ ನಿರಂತರವಾಗಿ ಕೆಂಪು ಅಕ್ಕಿಯನ್ನು ತಿಂದರೆ, ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾದರೆ ಹೃದಯ ಕಾಯಿಲೆಗಳ ಅಪಾಯವಿರುವುದಿಲ್ಲ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸುವಂತೆ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ : ಕಿವಿ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.