/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಮೈಸೂರು : ವರುಣ ಕ್ಷೇತ್ರದ ಮತದಾರರ ಕೃತಜ್ಞತಾ ಸಮಾವೇಶದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಚುನಾವಣೆಯಲ್ಲಿ ಹಗಲಿರುಳು ಹೋರಾಡಿ ಐತಿಹಾಸಿಕ ಗೆಲುವು ತಂದುಕೊಟ್ರಿ. ವರುಣ ಕ್ಷೇತ್ರದ ನಿಮ್ಮೆಲ್ಲರಿಗೂ ಧನ್ಯವಾದಗಳು. ಈ ಜಯ ನನ್ನದಲ್ಲಾ ಇದು ನಿಮ್ಮೆಲ್ಲರ ಜಯ. ಡಿಕೆಶಿ ಹಾಗೂ ನನ್ನ ಜಯವಲ್ಲ ಈಡಿ ರಾಜ್ಯದ ಜಯ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿತ್ತು. ಬಿಜೆಪಿಯ ದುರಾಡಳಿತದಿಂದ ಜನ ಬದಲಾವಣೆ ಬಯಸಿದ್ರು. ಇವತ್ತು ರಾಜ್ಯದಲ್ಲಿ ಜನ ಬಿಜೆಪಿ ವಿರುದ್ದವಾಗಿದ್ದಾರೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ. ಕಳೆದ 45 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ ಎಂದು ಹೇಳಿದರು.

ಜನ್ರ ನಾಡಿಮಿಡಿತ ಅರ್ಥಮಾಡಿಕೊಳ್ಳ ಬಲ್ಲೆ. ಅವರ ಮಿಡಿತವನ್ನ ನೋಡಿದ್ರೆ 150 ಸ್ಥಾನ ಗದ್ದೆ ಗೆಲ್ತಿವಿ ಅಂದಿದ್ದೆ. 2008 ರಲ್ಲಿ ನಾನು ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ. ಆಗ ಬಹಳ ಅಂತರದಿಂದ ಗೆಲ್ಲಿಸಿದ್ದರು. ಈಗ 50 ಸಾವಿರದಷ್ಟು ಅಂತರದಲ್ಲಿ ಗೆಲ್ಲಿಸಿದ್ರಿ. ಆದ್ರೆ ಯತೀಂದ್ರನಷ್ಟು ಅಂತರದಲ್ಲಿ ಗೆಲ್ಲಿಸಲಿಲ್ಲ. ಇದು ನನ್ನ ಕೊನೆಯ ಚುನಾವಣೆ. ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ ಎಂದು ವೇದಿಕೆ ಭಾಷಣದ ವೇಳೆ ಚುನಾವಣೆ ನಿವೃತ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದರು. 

ಇದನ್ನೂ ಓದಿ: ನಾಳೆಯಿಂದ ಮಹಿಳೆಯರ ಉಚಿತ ಸಾರಿಗೆ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

ಈ ಹಿಂದೆ 160 ಭರವಸೆಗಳನ್ನ ನೀಡಿದ್ದೆ. ಅದರಲ್ಲಿ 158 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೆ. ನಾವು ನುಡಿದಂತೆ ನಡೆದಿದ್ದೇವೆ ಆದ್ರೆ ಬಿಜೆಪಿಯವ್ರು ವಚನ ಭ್ರಷ್ಟರು. ದೇವರಾಜು ಅರಸ್ 5 ವರ್ಷ ಸಂಪೂರ್ಣ ಆಡಳಿತ ನೀಡಿದ್ದರು. ಅವ್ರ ಬಳಿಕ ಈ ನಿಮ್ಮ ಸಿದ್ದರಾಮಯ್ಯ ಮಾತ್ರ 5 ವರ್ಷ ಆಡಳಿತ ಮಾಡ್ತಿರೋದು. ಸಿಎಂ ಕುರ್ಚಿ ಸುಖದ ಸುಪ್ಪತ್ತಿಗೆ ಇರೋ ಕುರ್ಚಿ ಅಲ್ಲ ಜನ ಸೇವೆ ಮಾಡೋ ಕುರ್ಚಿ. 5 ಭರವಸೆ ಈಡೇರಿಸಿದ್ರೆ ನಮಗೆ ಖರ್ಚಾಗುವಂತದ್ದು 59 ಸಾವಿರ ಕೋಟಿ. ಮೋದಿ ಹೇಳಿದ್ರು ಕಾಂಗ್ರೆಸ್ ಕೊಟ್ಟಿರೋ ಭರವಸೆ ಈಡೇರಿಸಲು ಸಾಧ್ಯವಿಲ್ಲ, ರಾಜ್ಯ ದಿವಾಳಿ ಆಗತ್ತೆ ಎಂದು ಹೇಳಿದ್ದರು. ಆದರೆ ನಾನು ಅವರಿಂದ ನಿರೀಕ್ಷೆ ಮಾಡಿದ್ದೆ, ಕಾಂಗ್ರೆಸ್ ಕೊಟ್ಟ ಭರವಸೆಗಳು ಬಡವರಿಗೆ ಅನುಕೂಲ ಆಗುವಂತ ಭರವಸೆ ಎಂದು ಹೇಳ್ತಾರೆ ಅಂತ. ಆದ್ರೆ ಅವ್ರು ಹಾಗೆ ಹೇಳಲಿಲ್ಲ ಎಂದರು.

ನಾವು ಅಧಿಕಾರಕ್ಕೆ ಬಂದು 20 ದಿನ ಆಗಿದೆ. ಈ 20 ದಿನಗಳ 2 ಕ್ಯಾಬಿನೆಟ್ ನಡೆಸಿ 5 ಗ್ಯಾರಂಟಿ ಈಡೇರಿಸಲು ತೀರ್ಮಾನ ಮಾಡಿದ್ದೇವೆ. 200 ಕೊಡ್ತಿವಿ ಅಂತ ನಾವು ಹೇಳಿದ್ರೆ ಕೆಲವು ಮಾಧ್ಯಮ ಹಾಗೂ ಕೆಲವ್ರು ಅಣಕಿಸ್ತಿದ್ದಾರೆ. ನಾವು ಒಂದು ವರ್ಷದ ಆವ್ರೇಜ್ ನೋಡಿ ಯಾರು ಎಷ್ಟು ಬಳಸ್ತಾರೆ ಅವ್ರಿಗೆ ಉಚಿತ ವಿದ್ಯುತ್ ನೀಡ್ತಿದ್ದೀವಿ. ಇದು ದುರುಪಯೋಗವಾ...? ಕರ್ನಾಟಕದ ಇತಿಹಾಸದಲ್ಲಿ ಯಾರಾದರೂ ಮಾಡಿದ್ರ ಈ ರೀತಿ..? ಬಿಜೆಪಿಯವ್ರು ಏನಾದರೂ ಮಾಡಿದ್ದಾರಾ? 1 ಕೋಟಿ 28 ಲಕ್ಷ ಕುಟುಂಬದ ಮನೆ ಯಜಮಾನಿಗೆ 2 ಸಾವಿರ ಕೊಡ್ತಿವಿ. ಅತ್ತೆ ಯಜಮಾನಿ ಅಂದ್ರೆ ಅತ್ತೆಗೆ, ಸೊಸೆ ಯಜಮಾನಿ ಅಂದ್ರೆ ಸೊಸೆಗೆ ಹಣ ನೀಡ್ತಿವಿ. ಆದ್ರೆ ಟ್ಯಾಕ್ಸ್ ಕಟ್ಟುವವರಿಗೆ ಹಣ ನೀಡಲ್ಲ ಎಂದರು.

ಇದನ್ನೂ ಓದಿ: ಮಹಿಳೆಯರಿಗೆ ಸಿದ್ದರಾಮಯ್ಯ ಉಚಿತ ಟಿಕೆಟ್ ವಿತರಣೆ

ಮಕ್ಕಳು ಟ್ಯಾಕ್ಸ್ ಕಟ್ತಿದ್ರೆ ಅದು ಲೆಕ್ಕಕ್ಕಿಲ್ಲಾ. 1ಕೋಟಿ 28 ಲಕ್ಷ ಯಜಮಾನರಿಗೆ ಅರ್ಜಿ ಕರೆದಿದ್ದೇವೆ. ಆಗಸ್ಟ್ ನಿಂದ ಅವರ ಖಾತೆಗೆ ಹಣ ಹಾಕಿಬಿಡ್ತಿವಿ. ಅಕ್ಕಿ ಸ್ಟಾಕ್ ಇಲ್ಲದ ಕಾರಣ ಜುಲೈ ನಿಂದ 10ಕೆಜಿ ಅಕ್ಕಿಯನ್ನ ವಿತರಣೆ ಮಾಡ್ತಿವಿ ಎಂದರು. ಗೊಬ್ಬರದ ರೇಟ್ ಕಡಿಮೆ ಮಾಡಿ ಎಂದು ಅಭಿಮಾನಿ ಮನವಿಗೆ ವೇದಿಕೆಯಲ್ಲೆ ರಿಪ್ಲೇ ಮಾಡಿದ ಸಿಎಂ, ಗೊಬ್ಬರದ ರೇಟ್ ಕಡಿಮೆ ಮಾಡಬೇಕಿರೋದು ಮೋದಿ ನಾನಲ್ಲ. ಮುಂದಿನ ಬಾರಿ ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬರ್ತಿವಿ. ಆಗ ಗೊಬ್ಬರ ಸೇರಿದಂತೆ ಎಲ್ಲಾ ರೇಟ್ ಕಡಿಮೆ ಮಾಡ್ತೀವಿ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
CM Siddaramaiah said about election retirement in Varuna
News Source: 
Home Title: 

ಇದು ನನ್ನ ಕೊನೆಯ ಚುನಾವಣೆ, ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಇದು ನನ್ನ ಕೊನೆಯ ಚುನಾವಣೆ, ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ
Yes
Is Blog?: 
No
Tags: 
Facebook Instant Article: 
Yes
Highlights: 

ವರುಣ ಕ್ಷೇತ್ರದ ಮತದಾರರ ಕೃತಜ್ಞತಾ ಸಮಾವೇಶ

ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಚುನಾವಣೆ ನಿವೃತ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ 

Mobile Title: 
ಇದು ನನ್ನ ಕೊನೆಯ ಚುನಾವಣೆ, ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ
Chetana Devarmani
Publish Later: 
No
Publish At: 
Saturday, June 10, 2023 - 17:10
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
1
Is Breaking News: 
No
Word Count: 
397