Weight Loss Drink : ಬೆಳಗಿನ ದಿನಚರಿ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಮೂಡ್ಗೂ ಒಳ್ಳೆಯದು. ಮತ್ತೊಂದೆಡೆ, ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಬೆಳಿಗ್ಗೆ ಸರಿಯಾದ ದಿನಚರಿಯನ್ನು ಅನುಸರಿಸಬೇಕು. ತೂಕವನ್ನು ಕಡಿಮೆ ಮಾಡಲು ಬೀಜಗಳನ್ನು ತಿನ್ನುವಂತೆ ಸೂಚಿಸಲಾಗುತ್ತದೆ. ಮತ್ತೊಂದೆಡೆ, ಬೆಳಿಗ್ಗೆ ಎದ್ದ ಕೂಡಲೇ ಅಂದರೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬೀಜಗಳು ಮತ್ತು ಅವುಗಳ ನೀರನ್ನು ಕುಡಿಯುವುದರಿಂದ ದೇಹವು ಅನೇಕ ರೀತಿಯ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಿದ್ದರೆ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ದೇಹ ತೂಕವನ್ನು ಕೂಡಾ ಕಳೆದುಕೊಳ್ಳಬೇಕಾದರೆ ಯಾವ ಆಹಾರ ಸೇವಿಸಬೇಕು ನೋಡೋಣ.
ಬೆಳಿಗ್ಗೆ ಎದ್ದ ನಂತರ ಈ ಬೀಜಗಳ ನೀರನ್ನು ಕುಡಿಯಿರಿ :
ಮೆಂತ್ಯೆ ನೀರು :
ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಎದ್ದು ಮೆಂತ್ಯೆ ನೀರನ್ನು ಕುಡಿಯಬೇಕು. ಇದಕ್ಕಾಗಿ ಮೆಂತ್ಯೆ ಬೀಜಗಳನ್ನು ರಾತ್ರಿಯೇ ನೀರಿನಲ್ಲಿ ನೆನೆ ಹಾಕಿ ಇಟ್ಟುಕೊಳ್ಳಬೇಕು. ಅಥವಾ ಸ್ವಲ್ಪ ಮೆಂತ್ಯೆ ಬೀಜಗಳನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಕುದಿಸಬೇಕು. ಹೀಗೆ ಕುಡಿಸಿದ ನೀರು ತಣ್ಣಗಾದ ಮೇಲೆ ಅದನ್ನು ಕುಡಿಯಬೇಕು. ಮೆಂತ್ಯೆಯಲ್ಲಿರುವ ನಾರಿನಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಇದರಿಂದಾಗಿ ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು.
ಇದನ್ನೂ ಓದಿ : ಹೆಚ್ಚುತ್ತಿರುವ ಹೊಟ್ಟೆಯ ಕೊಬ್ಬು ಬಾಧಿಸುತ್ತಿದೆಯೇ? ಈ ಮಸಾಲೆ ಸೇವಿಸುವ ಮೂಲಕ ಕಡಿಮೆ ಮಾಡಿ ಬೆಲ್ಲಿ ಫ್ಯಾಟ್
ತುಳಸಿ ಬೀಜದ ನೀರು :
ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ತುಳಸಿ ನೀರನ್ನು ಕುಡಿಯುವುದರಿಂದ ದೇಹದಿಂದ ವಿಷವನ್ನು ಸುಲಭವಾಗಿ ಹೊರ ಹಾಕಲು ಸಹಾಯವಾಗುತ್ತದೆ. ಅಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆದ್ದರಿಂದ ನೀವು ತೂಕವನ್ನು ಕಳೆದುಕೊಳ್ಳಬೇಕಾದರೆ ಪ್ರತಿದಿನ ತುಳಸಿ ಬೀಜವನ್ನು ನೆನೆಸಿಟ್ಟ ನೀರನ್ನು ಸೇವಿಸಬೇಕು.
ನೆನೆಸಿದ ಬಾದಾಮಿ :
ನೆನೆಸಿದ ಬಾದಾಮಿ ಮತ್ತು ವಾಲ್ನಟ್ಸ್ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ದಿನವಿಡೀ ದೇಹ ಶಕ್ತಿಯಿಂದ ತುಂಬಿರುತ್ತದೆ. ನಿತ್ಯ ಬೆಳಿಗ್ಗೆ ನೆನೆಸಿಟ್ಟ ಬಾದಾಮಿ ಮತ್ತು ವಾಲ್ನಟ್ಸ್ ಸೇವಿಸುವುದರಿಂದ ಮತ್ತು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಕಡಿಮೆ ಕಳೆದುಕೊಳ್ಳಬಹುದು.
ಇದನ್ನೂ ಓದಿ : ಬೆಳಗ್ಗೆ ಎದ್ದ ತಕ್ಷಣ ಈ ಆಹಾರಗಳನ್ನು ತಪ್ಪದೇ ತಿನ್ನಿ..! ಆರೋಗ್ಯಕ್ಕೆ ಉತ್ತಮ
ಒಣದ್ರಾಕ್ಷಿ ನೀರು :
ಒಣದ್ರಾಕ್ಷಿ ಅನೇಕ ಪೋಷಕ ತತ್ವಗಳನ್ನು ಹೊಂದಿರುತ್ತದೆ. ಇದು ದೇಹದ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಮತ್ತು ಅದನ್ನು ನೆನೆಸಿಟ್ಟ ನೀರನ್ನು ಕುಡಿಯುವ ಮೂಲಕ ಹೆಚ್ಚುವರಿ ಕೊಬ್ಬನ್ನು ಕೂಡಾ ಕಡಿಮೆ ಮಾಡಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ