ಚಿತ್ರರಂಗದ ಕಲಾವಿದರಿಂದ ಹಿರಿಯ ನಟಿ ಲೀಲಾವತಿಗೆ ಗೌರವ ಪ್ರಶಸ್ತಿ ಪ್ರಧಾನ..!

ಕನ್ನಡ ಚಿತ್ರರಂಗದ ಬೆಳ್ಳಿ ತೆರೆಯ ಹಿರಿಯ ಜೀವ ಡಾ.ಎಂ. ಲೀಲಾವತಿಯವರಿಗೆ ಇಂದು ಇಡೀ ಚಿತ್ರರಂಗದ ನಟನಟಿಯರು ಸೇರಿ "ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ" ಎಂಬ ಪ್ರಶಸ್ತಿಯನ್ನ ನೀಡಿ ಇವರ ಸೇವೆಗೆ ಸಾಕ್ಷಿಯಾದರು.   

Written by - Krishna N K | Last Updated : May 31, 2023, 08:32 PM IST
  • ಹಿರಿಯ ನಟಿ ಲೀಲಾವತಿಯವರಿಗೆ ಚಿತ್ರರಂಗದ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ.
  • "ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ" ಎಂಬ ಪ್ರಶಸ್ತಿಯನ್ನ ನೀಡಿ ಇವರ ಸೇವೆಗೆ ಸಾಕ್ಷಿಯಾದರು.
  • ಸುಮಾರು 25 ವರ್ಷದಿಂದ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಲೀಲಾವತಿಯವರು ವಾಸವಾಗಿದ್ದಾರೆ.
ಚಿತ್ರರಂಗದ ಕಲಾವಿದರಿಂದ ಹಿರಿಯ ನಟಿ ಲೀಲಾವತಿಗೆ ಗೌರವ ಪ್ರಶಸ್ತಿ ಪ್ರಧಾನ..! title=

ನೆಲಮಂಗಲ : ಆ ಹಿರಿಯ ಜೀವ ಕನ್ನಡ ಬೆಳ್ಳಿ ತೆರೆಯ ಮೇರು ನಟಿ, ನಟಿಸಿದ ನೂರಾರು ಚಿತ್ರಗಳು, ತಾನು ಗಳಿಸಿದ ಹಣದಲ್ಲಿ ಸಮಾಜ ಸೇವೆ, ಗ್ರಾಮೀಣ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿ ಸಮಾಜದಿಂದ ಬೆಳೆದು ಸಮಾಜಕ್ಕೆ ನೆರವಾದ ಹಿರಿಯ ನಟಿ ಲೀಲಾವತಿಯವರಿಗೆ ಚಿತ್ರರಂಗದ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ.

ಹೌದು.. ಬೆಂಗಳೂರು ಹೊರವಲಯ ನೆಲಮಂಗಲದ ಸೋಲದೇವನಹಳ್ಳಿ ಗ್ರಾಮಯಲ್ಲಿ ಗ್ರಾಮದ ಜನರ ಸೇವೆಯಲ್ಲಿ ತಮ್ಮ ಜೀವನವನ್ನ ತೊಡಗಿಸಿಕೊಂಡಿರುವ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಯ ಹಿರಿಯ ಜೀವ ಡಾ.ಎಂ. ಲೀಲಾವತಿಯವರಿಗೆ ಇಂದು ಇಡೀ ಚಿತ್ರರಂಗದ ನಟನಟಿಯರು ಸೇರಿ "ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ" ಎಂಬ ಪ್ರಶಸ್ತಿಯನ್ನ ನೀಡಿ ಇವರ ಸೇವೆಗೆ ಸಾಕ್ಷಿಯಾದರು. ಸುಮಾರು 25 ವರ್ಷದಿಂದ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ತೋಟದಲ್ಲಿ ವಾಸವಾಗಿರುವ ಲೀಲಾವತಿ ಹಾಗೂ ಪುತ್ರ ನಟ ವಿನೋದ್ ರಾಜ್ ಕೃಷಿಯನ್ನೆ ಅವಲಂಬಿಸಿಕೊಂಡು ಜೀವನ ನಡೆಸುತ್ತ ಗ್ರಾಮದ ಜನರ ಸೇವೆಯಲ್ಲಿ ನಿರತರಾಗಿರುವುದು ನಮ್ಮ ಸೌಭಾಗ್ಯ ಎಂದಿದ್ದಾರೆ ನಟ ನಟಿಯರು.

ಇದನ್ನೂ ಓದಿ: Disha Patani : ಬೇಸಿಗೆಯ ಬಿಸಿಲಿಗೆ ರಂಗೇರುತ್ತಿದೆ ದಿಶಾ ಬ್ಯೂಟಿ..! ಫೋಟೋಸ್‌ ನೋಡಿ

ಇನ್ನೂ ಚಿತ್ರರಂಗದಿಂದ ದೂರ ಉಳಿದಿರುವ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ವ್ಯವಸಾಯದ ಜೊತೆಗೆ ಜನರಿಗಾಗಿ ಆರೋಗ್ಯ ಕೇಂದ್ರ, ಜಾನುವಾರುಗಳಿಗಾಗಿ ಪಶು ಚಿಕಿತ್ಸಾಲಯ, ಕಷ್ಷದಲ್ಲಿರುವ ಹಿರಿಯ ಸಹ ಕಲಾವಿದರಿಗೆ ನೆರವು ಮಾಡುತ್ತಾ, ತಮ್ಮ ತೋಟದಲ್ಲಿ ಕೆಲಸ ಮಾಡುವ ಜನರಿಗೆ ಆಸರೆಯಾಗಿ, ಸಾಕಷ್ಟು ಜನರಿಗೆ ಉದ್ಯೋಗ, ಸ್ಥಳೀಯ ರೈತರ ಪರವಾಗಿ ಹೋರಾಟ ಹೀಗೆ ಸಾಕಷ್ಟು ಸೇವೆಗಳನ್ನ ಮಾಡುತ್ತಾ ತಮ್ಮ ಜೀವನವನ್ನ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇವರ ಸಾಧನೆ ನೋಡಿ ಸಾಕಷ್ಟು ಹಿರಿಯ ಮತ್ತು ಕಿರಿಯ ನಟ ನಟಿಯರು ಸೇರಿ ಗೌರವದ ಮೂಲಕ ತಮ್ಮ ಸ್ನೇಹ ಮಿಲನವನ್ನ ತೋರಿರುವ ಬಗ್ಗೆ ಹಿರಿಯ ನಟಿ ಲೀಲಾವತಿಯವರು ಸಂತಸವನ್ನ ವ್ಯಕ್ತಪಡಿಸಿದ್ದು ಹೀಗೆ..

ಒಟ್ಟಾರೆ ಸಾಧನೆ ಎಂಬುದು ಹಿರಿಯ ವಯಸ್ಸಿನಲ್ಲಿ ತಮ್ಮ ಮಗ ವಿನೋದ್ ರಾಜ್ ಮೂಲಕ ತಾವು ಚಿತ್ರರಂಗದಲ್ಲಿ ಗಳಿಸಿದ ಹಣವನ್ನ ತಮ್ಮ ಜಮೀನು ಮಾರಿ ಗ್ರಾಮೀಣ ಜನರ, ಜಾನುವಾರುಗಳ ಮೇಲಿನ ಪ್ರೀತಿಗೆ ಚಿತ್ರರಂಗದ ಕಲಾವಿದರು ಈ ಇಳಿಯ ವಯಸ್ಸಿನಲ್ಲಿ ಮಾಡುತ್ತಿರುವ ಸಾಧನೆಗೆ ಸಾಕ್ಷಿಯಾಗಿ ತಮ್ಮ ಚಿತ್ರರಂಗದ ಘಟನೆಗಳ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡು ಸಾಕಷ್ಟು ಸಮಯಗಳ ಕಾಲ ತೋಟದಲ್ಲಿ ಸಮಯಕಳೆದು ಹಿರಿಯ ಜೀವಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News