Karnataka Assembly Election Result 2023: ಬೆಂಗಳೂರು ನಗರವನ್ನು ಕರ್ನಾಟಕದ ರಾಜಧಾನಿ ಮತ್ತು ಉದ್ಯಾನವನಗಳ ನಗರ ಎಂದು ಕರೆಯಲಾಗುತ್ತದೆ, ಇದನ್ನು 1986 ರಲ್ಲಿ ರಚಿಸಲಾಗಿದೆ.ರಾಜ್ಯದ ಆಗ್ನೇಯ ಭಾಗದಲ್ಲಿರುವ ಈ ಜಿಲ್ಲೆಯು ಅನೇಕ ಕಾರ್ಖಾನೆಗಳು, ವಿಶ್ವವಿದ್ಯಾನಿಲಯಗಳನ್ನು ಹೊಂದಿದೆ.ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಗಳಿದ್ದು, ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 4 ಹೋಬಳಿಗಳು, ಬೆಂಗಳೂರು ಪೂರ್ವ ತಾಲೂಕಿನಲ್ಲಿ 3 ಹೋಬಳಿಗಳು, ಬೆಂಗಳೂರು ಉತ್ತರ ತಾಲೂಕಿನಲ್ಲಿ 6 ಹೋಬಳಿಗಳು ಮತ್ತು ಆನೇಕಲ್ ತಾಲೂಕಿನಲ್ಲಿ 4 ಹೋಬಳಿಗಳಿವೆ.ಆಡಳಿತದ ಅನುಕೂಲಕ್ಕಾಗಿ ಬೆಂಗಳೂರು ಉತ್ರರ ತಾಲ್ಲೂಕನ್ನು ಬೆಂಗಳೂರಿನ ಯಲಹಂಕದ ಕೆಲವು ಕ್ಷೇತ್ರಗಳನ್ನು ಬೆಂಗಳೂರು ಉತ್ರ (ಅಪರ) ತಾಲ್ಲೂಕು ಎಂದು ವಿಂಗಡಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ.ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ನಂತಹ ಉದ್ಯಾನವನಗಳಿಂದ ಬೆಂಗಳೂರು ನಗರವನ್ನು ಉದ್ಯಾನ ನಗರಿ ಎಂದು ಕರೆಯಲಾಗುತ್ತದೆ.ಅಷ್ಟೇ ಅಲ್ಲದೆ ಇದು ವಿಶ್ವದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ತವರೂರು ಕೂಡ ಆಗಿದೆ.ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು
1) ಯಲಹಂಕ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಆರ್.ವಿಶ್ವನಾಥ 120110 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು ಇವರ ಹತ್ತಿರದ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಎ.ಎಮ್.ಹಣುಮಂತೇಗೌಡ 77607 ಮತಗಳನ್ನು ಪಡೆಯುವ ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಸ್.ಆರ್.ವಿಶ್ವನಾಥ-(ಬಿಜೆಪಿ)
ಕೇಶವ್ ರಾಜಣ್ಣ(ಕಾಂಗ್ರೆಸ್)
ಎಂ.ಮೌನೇಗೌಡ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು -1,20,000
ಎಸ್ಸಿ-ಎಸ್‌ಟಿ -90,000
ಒಬಿಸಿ- 75,000
ಅಲ್ಪಸಂಖ್ಯಾತರು -30 ಸಾವಿರ
2) ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದ ಬಿ.ಎ.ಬಸವರಾಜ 135404 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇವರ ಹತ್ತಿರದ ಸ್ಪರ್ಧಿ ಬಿಜೆಪಿಯ ಎನ್.ಎಸ್.ನಂದೀಶರೆಡ್ಡಿ 102675 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಬಿ.ಎ ಬಸವರಾಜ(ಬಿಜೆಪಿ)
ಡಿಕೆ ಮೋಹನ್ (ಕಾಂಗ್ರೆಸ್)
ಜೆಡಿಎಸ್( ಆರ್.ಪಿ.ಐ ಅಭ್ಯರ್ಥಿಗೆ ಬೆಂಬಲ)
ಕೆ ಆರ್ ಪುರಂ ವಿಧಾನಸಭಾ ಅಂತಿಮ ಫಲಿತಾಂಶ..
ಬಿಜೆಪಿ -1,39,328
ಕಾಂಗ್ರೆಸ್ - 115243
24,085 ಮತಗಳ ಅಂತರದಿಂದ ಗೆದ್ದು ಬೀಗಿದ ಬೈರತಿ ಬಸವರಾಜ್..
3) ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದ ಕೃಷ್ಣ ಬೈರೇಗೌಡ 114964 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು.ಇನ್ನೊಂದೆಡೆಗೆ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಎ.ರವಿ 109293 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ತಮ್ಮೇಶಗೌಡ (ಬಿಜೆಪಿ)
ಕೃಷ್ಣ ಬೈರೇಗೌಡ (ಕಾಂಗ್ರೆಸ್)
ಪಿ ನಾಗರಾಜ (ಜೆಡಿಎಸ್)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು -1,40,000
ಪರಿಶಿಷ್ಟ ಜಾತಿ/ಪಂಗಡಗಳವರು -ಒಂದು ಲಕ್ಷ
ಮುಸ್ಲಿಂ- 80,000
ಕ್ರಿಶ್ಚಿಯನ್ -40,000
4) ಯಶವಂತಪುರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್.ಟಿ.ಸೋಮಶೇಖರ 115273 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇವರ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಟಿ.ಎನ್.ಜವರಾಯಿಗೌಡ 104562 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಸ್.ಟಿ.ಸೋಮಶೇಖರ(ಬಿಜೆಪಿ)
ಎಸ್ ಬಾಲರಾಜಗೌಡ (ಕಾಂಗ್ರೆಸ್)
ಟಿ.ಎನ್.ಜವರಾಯಿಗೌಡ (ಜೆಡಿಎಸ್ )
5) ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮುನಿರತ್ನ 108064 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದರು.ಇನ್ನೂ ಇವರ ಪ್ರತಿಸ್ಪರ್ಧಿ ಬಿಜೆಪಿಯಿಂದ ಪಿ.ಎಮ್.ಮುನಿರಾಜುಗೌಡ 82572 ಗಳನ್ನು ಪಡೆಯುವ ಮೂಲಕ ಸೋಲನ್ನು ಅನುಭವಿಸಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಮುನಿರತ್ನ ನಾಯ್ಡು(ಬಿಜೆಪಿ)
ಕುಸುಮ.ಎಚ್ (ಕಾಂಗ್ರೆಸ್)
ಡಾ.ನಾರಾಯಣಸ್ವಾಮಿ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು-1,25,000,
ಲಿಂಗಾಯತರು-49,000
ಬ್ರಾಹ್ಮಣರು- 32,000
ಎಸ್‌ಸಿ-ಎಸ್ಟಿ-82,000
ಮುಸ್ಲಿಂ-15,000
ಕುರುಬ-6,000
ದೇವಾಂಗ-5,000
ತಮಿಳು-45,000
ತೆಲುಗು-43,000
ಆರ್ ಆರ್ ನಗರ ಅಂತಿಮ ಫಲಿತಾಂಶ:
ಬಿಜೆಪಿ - 125716
ಕಾಂಗ್ರೆಸ್ - 115152
ಬಿಜೆಪಿಯ ಮುನಿರತ್ನಗೆ 10564 ಮತಗಳ ಅಂತರದ ಗೆಲುವು
6) ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಜೆಡಿಎಸ್ ನ ಆರ್.ಮಂಜುನಾಥ 94044 ಮತಗಳನ್ನು ಪಡೆಯುವ ಮೂಲಕ ಗೆಲುವುನ್ನು ಸಾಧಿಸಿದ್ದರು. ಇವರ ಪ್ರತಿಸ್ಪರ್ಧಿ ಬಿಜೆಪಿ ಎಸ್.ಮುನಿರಾಜು 83369 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಸ್ ಮುನಿರಾಜು (ಬಿಜೆಪಿ)
ಧನಂಜಯ್ ಗಂಗಾಧರಯ್ಯ (ಕಾಂಗ್ರೆಸ್)
ಆರ್ ಮಂಜುನಾಥ್ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು- 1.42 ಲಕ್ಷ
ಪರಿಶಿಷ್ಟ ಜಾತಿ ಮತ್ತು ಪಂಗಡ- 50ರಿಂದ 60 ಸಾವಿರ
ಬ್ರಾಹ್ಮಣರು- 25 ಸಾವಿರ
ಕುರುಬರು -15 ಸಾವಿರ
ಮಲೆಯಾಳಿ ಭಾಷಿಕ ಮತದಾರರು- 18 ಸಾವಿರ
7) ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕೆ.ಗೋಪಾಲಯ್ಯ 88218 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇನ್ನೂ ಇವರ ಪ್ರತಿಸ್ಪರ್ಧಿ ಬಿಜೆಪಿಯ ಎನ್.ಎಲ್.ನರೇಂದ್ರಬಾಬು 47118 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಕೆ.ಗೋಪಾಲಯ್ಯ (ಬಿಜೆಪಿ)
ಕೇಶವಮೂರ್ತಿ (ಕಾಂಗ್ರೆಸ್)
ಕೆ.ಸಿ.ರಾಜಣ್ಣ(ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು- 74,000,
ಲಿಂಗಾಯತರು- 29,000,
ಪರಿಶಿಷ್ಟ ಜಾತಿ/ಪಂಗಡದವರು-51,000
ಬ್ರಾಹ್ಮಣರು -34,000
ದೇವಾಂಗದವರು- 21,000
ಮುಸ್ಲಿಮರು- 18,000
ತಮಿಳರು -17,000
ತಿಗಳರು -8,200
ಕುರುಬರು- 8,000
ಇತರೆ ಸಮುದಾಯ- 11,000
8) ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಸಿ.ಎನ್.ಅಶ್ವಥ ನಾರಾಯಣ 83130 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆಂಗಲ ಶೀಪಾದರೇಣು 29130 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಡಾ.ಸಿ.ಎನ್.ಅಶ್ವಥ ನಾರಾಯಣ(ಬಿಜೆಪಿ)
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್)
ಉತ್ಕರ್ಷ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಬ್ರಾಹ್ಮಣರು-55,000,
ಒಕ್ಕಲಿಗರು -41,000
ಪರಿಶಿಷ್ಟ ಜಾತಿ/ಪಂಗಡ-33,500
ಒಬಿಸಿ ಮತದಾರರು- 15,000
ಇತರರು- 18500 -
9) ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಸ್.ಸುರೇಶ 74453 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಸ್ಪರ್ಧಿ ವಾಯ್.ಎ.ನಾರಾಯಣಸ್ವಾಮಿ 53313 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಕಟ್ಟಾ ಜಗದೀಶ್ (ಬಿಜೆಪಿ)
ಬೈರತಿ ಸುರೇಶ (ಕಾಂಗ್ರೆಸ್)
ಡಾ.ಸೈಯ್ಯದ್ ಅಲ್ತಾಫ್ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸಲ್ಮಾನರು-55,000
ಒಕ್ಕಲಿಗರು-38000
ಎಸ್ಸಿ-ಎಸ್‌ಟಿ -34000
ಬ್ರಾಹ್ಮಣರು- 2500
ಲಿಂಗಾಯತರು -7500
ಕುರುಬರು- 5000
ಯಾದವರು -7000
ಹೆಬ್ಬಾಳ ವಿಧಾನಸಭಾ ಅಂತಿಮ ಫಲಿತಾಂಶ
ಕಾಂಗ್ರೆಸ್ ಗೆಲುವು
ಕಾಂಗ್ರೆಸ್( ಭೈರತಿ ಸುರೇಶ್) -91838
ಬಿಜೆಪಿ- (ಕಟ್ಟಾ ಜಗದೀಶ್) 61084
ಭೈರತಿ ಸುರೇಶ್ ಗೆಲುವಿನ ಅಂತರ - 30754
10) ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಖಂಡ ಶ್ರೀನಿವಾಸ್ ಮೂರ್ತಿ 97574 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಸ್ಪರ್ಧಿ ಜೆಡಿಎಸ್ ಪಕ್ಷದ ಬಿ.ಪ್ರಸನ್ನಕುಮಾರ15948 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
2023 ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಮುರಳಿ (ಬಿಜೆಪಿ)
ಎ.ಸಿ.ಶ್ರೀನಿವಾಸ್ (ಕಾಂಗ್ರೆಸ್)
ಅನುರಾಧ (ಜೆಡಿಎಸ್ )
ಅಖಂಡ ಶ್ರೀನಿವಾಸ್ ಮೂರ್ತಿ(ಪಕ್ಷೇತರ)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸ್ಲಿಂ - 71,000
ಒಕ್ಕಲಿಗರು -25,000
ಎಸ್ಸಿ-ಎಸ್‌ಟಿ -45,000
ಬ್ರಾಹ್ಮಣ -24,000
ಒಬಿಸಿ- 5,000
ತಿಗಳ -4,000
ಕುರುಬ -2,000
ಲಿಂಗಾಯತರು- 2,000
ದೇವಾಂಗ -2,000
ಯಾದವ -1,000
ಇತರೇ ಮತದಾರರು 7,000
11) ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೇಳಚಂದ್ರ ಜೋಶಫ್ ಜಾರ್ಜ್109955 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಸ್ಪರ್ಧಿ ಬಿಜೆಪಿಯ ಎಮ್.ಎನ್.ರೆಡ್ಡಿ 56651 ಮತಗಳನ್ನು ಪಡೆದಿದ್ದರು.
2023 ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಪದ್ಮನಾಭ ರೆಡ್ಡಿ (ಬಿಜೆಪಿ)
ಕೆಜೆ ಜಾರ್ಜ್ (ಕಾಂಗ್ರೆಸ್)
ಮೊಹಮದ್ ಮುಸ್ತಾಫ್ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸ್ಲಿಂ ಮತದಾರರು- 1.20.000
ಇತರೆ ಸಮುದಾಯ- 56,420
ಎಸ್‌ಸಿ, ಎಸ್‌ಟಿ- 50,000
ಕ್ರಿಶ್ಚಿಯನ್ -40,000
ಕುರುಬ -30,000
ಒಕ್ಕಲಿಗ -20,000
ರೆಡ್ಡಿ -10,000
ಲಿಂಗಾಯತರು-8,000.
12) ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ರಘು 58887 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎಸ್.ಸಂಪತರಾಜ್ 46660 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಸ್ ರಘು (ಬಿಜೆಪಿ)
ಎಸ್ ಆನಂದಕುಮಾರ್ (ಕಾಂಗ್ರೆಸ್)
ಜೆಡಿಎಸ್(ಆರ್ ಪಿ ಐ ಅಭ್ಯರ್ಥಿಗೆ ಬೆಂಬಲ)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಎಸ್‌ಸಿ – 60,000
ಇತರೇ ಸಮುದಾಯ-66,669
ತಮಿಳು 40,000
ಒಕ್ಕಲಿಗ -20,000
ಅಲ್ಪಸಂಖ್ಯಾತ -10,000
ಲಿಂಗಾಯತ -8,000
ಕುರುಬ- 18,000
ಬೋವಿ- 8,000
13) ಶಿವಾಜಿನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಆರ್ ರೋಶನ್ ಬೇಗ್ 59742 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇನ್ನೂ ಇವರ ಪ್ರತಿಸ್ಪರ್ಧಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 44702 ಮತಗಳನ್ನು ಪಡೆದಿದ್ದರು.
2023 ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎನ್.ಚಂದ್ರ (ಬಿಜೆಪಿ)
ರಿಜ್ವಾನ್ ಅರ್ಷಾದ್ (ಕಾಂಗ್ರೆಸ್)
ಶಿವಾಜಿನಗರ ಅಂತಿಮ ಫಲಿತಾಂಶ
ಕಾಂಗ್ರೆಸ್ - 64913
ಬಿಜೆಪಿ - 41719
ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ - 23194 ಮತಗಳ ಅಂತರದ ಗೆಲುವು
14) ಶಾಂತಿನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎನ್.ಎ.ಹ್ಯಾರಿಸ್ 60009 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇವರ ಪ್ರತ್ರಿಸ್ಪರ್ಧಿ ಬಿಜೆಪಿಯ ಕೆ.ವಾಸುದೇವಮೂರ್ತಿ 41804 ಮತಗಳನ್ನು ಪಡೆದಿದ್ದರು.
2023 ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಶಿವಕುಮಾರ್ (ಬಿಜೆಪಿ)
ಎನ್.ಎ.ಹ್ಯಾರಿಸ್ (ಕಾಂಗ್ರೆಸ್)
ಮಂಜುನಾಥ್ ಗೌಡ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸ್ಲಿಮ-45,000
ತಮಿಳ-35,000
ಕುರುಬ -25,000
ಎಸ್‌ಸಿ-ಎಸ್‌ಟಿ- 20,000
ತೆಲುಗು ಭಾಷಿಕರು- 20000,
ಮಲೆಯಾಳಿ ಭಾಷಿಕರು- 15000
ಬ್ರಾಹ್ಮಣ- 15,000
ಲಿಂಗಾಯತ- 8,000
ದೇವಾಂಗ -4000
ಒಕ್ಕಲಿಗರು- 3,000
ಶಾಂತಿನಗರ ವಿಧಾನಸಭಾ ಅಂತಿಮ ಫಲಿತಾಂಶ
ಕಾಂಗ್ರೆಸ್ - 61030
ಬಿಜೆಪಿ - 53905
ಎನ್ ಎ ಹ್ಯಾರಿಸ್ ಗೆ 7125 ಮತಗಳ ಅಂತರದ ಗೆಲುವು
15) ಗಾಂಧಿನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡುರಾವ್ 47354 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು. ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಎ.ಆರ್.ಸಪ್ತಗಿರಿಗೌಡ 37284 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎ.ಆರ್.ಸಪ್ತಗಿರಿಗೌಡ (ಬಿಜೆಪಿ)
ದಿನೇಶ್ ಗುಂಡುರಾವ್ (ಕಾಂಗ್ರೆಸ್)
ಎ.ನಾರಾಯಣಸ್ವಾಮಿ(ಜೆಡಿಎಸ್ )
ಕೃಷ್ಣಯ್ಯ ಶೆಟ್ಟಿ (ಪಕ್ಷೇತರ)
ಗಾಂಧಿನಗರ ವಿಧಾನಸಭಾ ಅಂತಿಮ ಫಲಿತಾಂಶ
ಕಾಂಗ್ರೆಸ್ - 54118
ಬಿಜೆಪಿ - 54013
105 ಮತಗಳ ಅಂತರದಲ್ಲಿ ದಿನೇಶ್ ಗುಂಡೂರಾವ್ ಗೆಲುವು
16) ರಾಜಾಜಿ ನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿ ಪಕ್ಷದ ಎಸ್ ಸುರೇಶಕುಮಾರ್ 56271 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಜಿ.ಪದ್ಮಾವತಿ 46818 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಸ್.ಸುರೇಶ ಕುಮಾರ್ (ಬಿಜೆಪಿ)
ಪುಟ್ಟಣ್ಣ (ಕಾಂಗ್ರೆಸ್)
ಡಾ.ಅಂಜನಪ್ಪ(ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಲಿಂಗಾಯತರು- 51,000,
ಒಕ್ಕಲಿಗ- 45,000
ಎಸ್ಸಿ-ಎಸ್‌ಟಿ -38,000
ಬ್ರಾಹ್ಮಣ -23,000
ತಮಿಳು ಹಾಗೂ ತೆಲುಗು ಭಾಷಿಕರು- 21,000,
ಇತರೇ ಮತದಾರರು- 15,500
ಮುಸ್ಲಿಂ-7 ಸಾವಿರ
ರಾಜಾಜಿನಗರ ವಿಧಾನಸಭಾ ಅಂತಿಮ ಫಲಿತಾಂಶ:
ಬಿಜೆಪಿ - 58624
ಕಾಂಗ್ರೆಸ್ - 50564
ಬಿಜೆಪಿಯ ಸುರೇಶ್ ಕುಮಾರ್ ಗೆ 8060 ಮತಗಳ ಗೆಲುವು
17) ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಬಿಜೆಪಿಯ ವಿ.ಸೋಮಣ್ಣ 79135 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರಿಯ ಕೃಷ್ಣಾ 67760 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಉಮೇಶ್ ಶೆಟ್ಟಿ (ಬಿಜೆಪಿ)
ಪ್ರಿಯಕೃಷ್ಣ (ಕಾಂಗ್ರೆಸ್)
ಆರ್. ಪ್ರಕಾಶ್ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು- 56,000
ಲಿಂಗಾಯತರು- 18,000
ಬ್ರಾಹ್ಮಣ ಮತದಾರರು- 13,000
ಒಬಿಸಿ 58,500,
ಎಸ್ಸಿ, ಎಸ್ಟಿ- 46,750
ಮುಸ್ಲಿಂ ಮತದಾರರು- 24,000
ಇತರೆ -15,600
ಗೋವಿಂದರಾಜನಗರ ವಿಧಾನಸಭಾ ಅಂತಿಮ ಫಲಿತಾಂಶ
ಕಾಂಗ್ರೆಸ್ ನ ಪ್ರಿಯಾಕೃಷ್ಣ-82134
ಬಿಜೆಪಿಯ ಉಮೇಶ್ ಶೆಟ್ಟಿ -69618
ಜೆಡಿಎಸ್ ನ ಆರ್.ಪ್ರಕಾಶ್-4583
ಕಾಂಗ್ರೆಸ್ 12516 ಮತಗಳ ಅಂತರದ ಗೆಲುವು
18) ವಿಜಯನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಂ.ಕೃಷ್ಣಪ್ಪ 73353 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಎಚ್.ರವೀಂದ್ರ 70578 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ರವೀಂದ್ರ (ಬಿಜೆಪಿ)
ಎಂ.ಕೃಷ್ಣಪ್ಪ (ಕಾಂಗ್ರೆಸ್)
ಜೆಡಿಎಸ್(ಆರ್ ಪಿ ಐ ಅಭ್ಯರ್ಥಿಗೆ ಬೆಂಬಲ)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗ -51,000
ಎಸ್ಸಿ, ಎಸ್ಟಿ -42,500,
ಮುಸ್ಲಿಂ 37,000
ಒಬಿಸಿ -38,500
ಅಂತಿಮ ಫಲಿತಾಂಶ: ವಿಜಯನಗರ ವಿಧಾನಸಭಾ ಕ್ಷೇತ್ರ ಅಂತಿಮ ಫಲಿತಾಂಶ
ಒಟ್ಟು ಮತದಾರರು ಸಂಖ್ಯೆ- 305835
ಮತ ಚಲಾಯಿಸಿದವರ ಸಂಖ್ಯೆ - 158170
ಒಟ್ಟು ಸುತ್ತುಗಳು - 21 ನೇ ಸುತ್ತು ಮುಕ್ತಾಯ
ಗೆಲುವು - ಎಂ. ಕೃಷ್ಣಪ್ಪ
ಅಂತರ -7324
ಬಿಜೆಪಿ - ಹೆಚ್. ರವೀಂದ್ರ- 72833
ಕಾಂಗ್ರೆಸ್ - ಎಂ.ಕೃಷ್ಣಪ್ಪ - 80157
19) ಚಾಮರಾಜಪೇಟ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಬಿ.ಜೆಡ್.ಜಮೀರ್ ಅಹ್ಮದ್‌ಖಾನ್ 65339 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಎಮ್.ಲಕ್ಷ್ಮಿನಾರಾಯಣ 32202 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಭಾಸ್ಕರರಾವ್ (ಬಿಜೆಪಿ)
ಜಮೀರ್ ಅಹಮದ್ ಖಾನ್ (ಕಾಂಗ್ರೆಸ್)
ಗೋವಿಂದ್ ರಾಜು (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸ್ಲಿಮರು -80 ಸಾವಿರ
ಎಸ್ಸಿ, ಎಸ್ಟಿ- 65 ಸಾವಿರ,
ಒಕ್ಕಲಿಗ -10 ಸಾವಿರ,
ಇತರೆ -35,000
ಕ್ರೈಸ್ತರು -12,000
ಕುರುಬರು- 9,500
ತಮಿಳು ಭಾಷಿಕ ಮತದಾರರು-26 ಸಾವಿರ
ಬ್ರಾಹ್ಮಣರು 5 ರಿಂದ 8 ಸಾವಿರ
ಚಾಮರಾಜಪೇಟೆ ವಿಧಾನಸಭಾ ಅಂತಿಮ ಫಲಿತಾಂಶ
ಕಾಂಗ್ರೆಸ್ - 77631
ಬಿಜೆಪಿ - 23678
ಜೆ ಡಿ ಎಸ್ - 19086
ಕಾಂಗ್ರೆಸ್ ನ ಜಮೀರ್ ಅಹ್ಮದ್ ಖಾನ್ ಗೆ 53953 ಮತಗಳ ಅಂತರದ ಗೆಲುವು
20) ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿಯ ಉದಯ ಗರುಡಾಚಾರ 57312 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಆರ್.ವಿ.ದೇವರಾಜ 49378 ಮತಗಳನ್ನು ಪಡೆದಿದ್ದರು
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಉದಯ್ ಗರುಡಾಚಾರ್ಯ (ಬಿಜೆಪಿ)
ಆರ್.ವಿ.ದೇವರಾಜ್ (ಕಾಂಗ್ರೆಸ್)
ಇಮ್ರಾನ್ ಪಾಷಾ (ಜೆಡಿಎಸ್ )
ಕೆಜಿಎಫ್ ಬಾಬು( ಪಕ್ಷೇತರ)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸಲ್ಮಾನ ಸಮುದಾಯ- 59,700
ದಲಿತ ಸಮುದಾಯ- 35 ಸಾವಿರ
ಬ್ರಾಹ್ಮಣ-32 ಸಾವಿರ
ದೇವಾಂಗ- 25 ಸಾವಿರ
ಒಕ್ಕಲಿಗ-25 ಸಾವಿರ
ತಿಗಳ-15 ಸಾವಿರ
ತಮಿಳರು-12 ಸಾವಿರ
ಲಿಂಗಾಯತ-2 ಸಾವಿರ
ಕುರುಬ-2 ಸಾವಿರ
ಚಿಕ್ಕಪೇಟೆ ವಿಧಾನಸಭಾ ಅಂತಿಮ ಫಲಿತಾಂಶ:
ಬಿಜೆಪಿ - 57299
ಕಾಂಗ್ರೆಸ್ - 45186
ಪಕ್ಷೇತರ (ಕೆಜಿ ಎಫ್ ಬಾಬು ) - 20931
ಬಿಜೆಪಿಯ ಉದಯ್ ಗರುಡಾಚಾರ್ ಗೆ 12113 ಮತಗಳ ಅಂತರದಲ್ಲಿ ಗೆಲುವು
20931 ವೋಟ್ ಪಡೆದು ಆರ್ ವಿ ದೇವರಾಜ್ ಸೋಲಿಗೆ ಕಾರಣರಾದ ಕೆ ಜಜಿ ಎಫ್ ಬಾಬು
21) ಬಸವನಗುಡಿ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿಯ ಎಲ್.ಎ.ರವಿಸುಬ್ರಮಣ್ಯ 76018 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಸ್ಪರ್ಧಿ ಜೆಡಿಎಸ್ ನ ಕೆ.ಬಾಗೇಗೌಡ 38009 ಮತಗಳನ್ನು ಪಡೆದಿದ್ದರು
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ರವಿ ಸುಬ್ರಮಣ್ಯ (ಬಿಜೆಪಿ)
ಯು.ಬಿ.ವೆಂಕಟೇಶ್ (ಕಾಂಗ್ರೆಸ್)
ಅರಮನೆ ಶಂಕರ್ (ಜೆಡಿಎಸ್ )
ಬಸವನಗುಡಿ ವಿಧಾನಸಭಾ ಅಂತಿಮ ಫಲಿತಾಂಶ:
ಬಿಜೆಪಿಯ ರವಿಸುಬ್ರಮಣ್ಯ 78854
ಕಾಂಗ್ರೆಸ್ ನ ಯುಬಿ ವೆಂಕಟೇಶ್ 23876
ಜೆಡಿಎಸ್ ನ ಅರಮನೆ ಶಂಕರ್ 19931
ಬಿಜೆಪಿ 54978 ಮತಗಳ ಅಂತರದ ಜಯ
22) ಪದ್ಮನಾಭನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿಯ ಆರ್.ಆಶೋಕ್ 77868 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಜೆಡಿಎಸ್ ನ ವಿ.ಕೆ.ಗೋಪಾಲ 45702 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಆರ್ ಅಶೋಕ್ (ಬಿಜೆಪಿ)
ವಿ.ರಘುನಾಥ್ ನಾಯ್ಡು (ಕಾಂಗ್ರೆಸ್)
ಬಿ.ಮಂಜುನಾಥ್ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಬಿಸಿ-72 ಸಾವಿರ
ಒಕ್ಕಲಿಗರು-60 ಸಾವಿರ
ಮುಸ್ಲಿಂ-44 ಸಾವಿರ
ಬ್ರಾಹ್ಮಣ-25 ಸಾವಿರ
ದಲಿತ ಸಮುದಾಯ- 18 ಸಾವಿರ
ಲಿಂಗಾಯತರು-10 ಸಾವಿರ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಅಂತಿಮ ಫಲಿತಾಂಶ
ಒಟ್ಟು ಮತದಾರರು ಸಂಖ್ಯೆ- 278943
ಮತ ಚಲಾಯಿಸಿದವರ ಸಂಖ್ಯೆ - 159189
ಒಟ್ಟೂ ಸುತ್ತುಗಳು - 21ನೇ ಸುತ್ತು ಮುಕ್ತಾಯ.
ಗೆಲುವು - ಬಿಜೆಪಿ ಆರ್ ಅಶೋಕ್
ಅಂತರ - 54734
ಬಿಜೆಪಿ -ಆರ್. ಅಶೋಕ್- 98174
ಕಾಂಗ್ರೆಸ್ - ವಿ. ರಘುನಾಥ್ ನಾಯ್ಡು- 43440
23) ಬಿ.ಟಿ.ಎಂ.ಲೇಔಟ್ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ರಾಮಲಿಂಗಾರೆಡ್ಡಿ 67085 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಲಲ್ಲೇಶ ರೆಡ್ಡಿ46607 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಶ್ರೀಧರ್ ರೆಡ್ಡಿ (ಬಿಜೆಪಿ)
ರಾಮಲಿಂಗಾರೆಡ್ಡಿ (ಕಾಂಗ್ರೆಸ್)
ವೆಂಕಟೇಶ್ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಒಕ್ಕಲಿಗರು-55 ಸಾವಿರ,
ಲಿಂಗಾಯತರು-5,000,
ಬ್ರಾಹ್ಮಣರು-23,000,
ಒಬಿಸಿ-28,000,
ಎಸ್ಸಿ-ಎಸ್ಟಿ-52,000,
ಮುಸ್ಲಿಂ-12,000
ಇತರೆ-1,08,000 ಮತದಾರರಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಅಂತಿಮ ಫಲಿತಾಂಶ:
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 68557
ಬಿಜೆಪಿ ಶ್ರೀಧರರೆಡ್ಡಿ 59335
ಜೆಡಿಎಸ್ ನ ವೆಂಕಟೇಶ್ 1841
ಕಾಂಗ್ರೆಸ್ ಗೆ 9222 ಮತಗಳ ಅಂತರದ ಗೆಲುವು
24) ಜಯನಗರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸೌಮ್ಯ ರೆಡ್ಡಿ 53411 ಮತಗಳನ್ನು ಪಡೆಯುವ ಮೂಲಕ್ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಎನ್.ಪ್ರಲ್ಹಾದ ಬಾಬು 49526 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಸಿ.ಕೆ.ರಾಮಮೂರ್ತಿ (ಬಿಜೆಪಿ)
ಸೌಮ್ಯರೆಡ್ಡಿ (ಕಾಂಗ್ರೆಸ್)
ಕಾಳೇಗೌಡ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಮುಸಲ್ಮಾನ ಸಮುದಾಯ-59,799
ಒಕ್ಕಲಿಗರು-46,500
ಬ್ರಾಹ್ಮಣರು, 37,000
ಎಸ್‌ಸಿ, ಎಸ್ಟಿ ಸಮುದಾಯ- 34,500 ,
ಒಬಿಸಿ- 12,000
ಲಿಂಗಾಯತರು-2,000,
ಇತರೆ- 15,500
25) ಮಹಾದೇವಪುರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿಯ ಅರವಿಂದ್ ಲಿಂಬಾವಳಿ 141682 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಇನ್ನೂ ಇವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಎ.ಸಿ.ಶ್ರೀನಿವಾಸ 123898 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಮಂಜುಳಾ ಲಿಂಬಾವಳಿ (ಬಿಜೆಪಿ)
ನಾಗೇಶ್ ಎಚ್ (ಕಾಂಗ್ರೆಸ್)
ಜೆಡಿಎಸ್ (ಆರ್ ಪಿ ಐ ಅಭ್ಯರ್ಥಿಗೆ ಬೆಂಬಲ)
26 ) ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿಯ ಎಂ.ಸತೀಶ ರೆಡ್ಡಿ111863 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸುಶ್ಮಾ ರಾಜಗೋಪಾಲ ರೆಡ್ಡಿ 64701 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಸತೀಶ್ ರೆಡ್ಡಿ (ಬಿಜೆಪಿ)
ಉಮಾಪತಿ ಶ್ರೀನಿವಾಸ್ ಗೌಡ (ಕಾಂಗ್ರೆಸ್)
ನಾರಾಯಣರಾಜು(ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಎಸ್‌ಸಿ,ಎಸ್‌ಟಿ- 1,23,300
ಒಕ್ಕಲಿಗರು-95,000
ಇತರೆ ಹಿಂದುಳಿದ ಸಮುದಾಯಗಳು-55,000
ಬ್ರಾಹ್ಮಣರು-43,000
ಅಲ್ಪಸಂಖ್ಯಾತರು-27,500
ಲಿಂಗಾಯತರು-2,000
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಂತಿಮ ಫಲಿತಾಂಶ
ಒಟ್ಟು ಮತದಾರರು ಸಂಖ್ಯೆ- 452621
ಮತ ಚಲಾಯಿಸಿದವರ ಸಂಖ್ಯೆ - 214382
ಒಟ್ಟು ಮತ ಎಣಿಕೆಯಾದ ಸುತ್ತುಗಳು- 21ನೇ ಸುತ್ತು ಮುಕ್ತಾ
ಯಾರು
ಗೆಲುವು - ಸತೀಶ್ ರೆಡ್ಡಿ
ಅಂತರ - 14225
ಬಿಜೆಪಿ ಅಭ್ಯರ್ಥಿ ಪಡೆದ ಮತಗಳು- 79340
ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳು- 65115
27) ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಬಿಜೆಪಿಯ ಎಂ.ಕೃಷ್ಣಪ್ಪ152469 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಆರ್.ಕೆ.ರಮೇಶ 122052 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಂ.ಕೃಷ್ಣಪ್ಪ (ಬಿಜೆಪಿ)
ಆರ್.ಕೆ.ರಮೇಶ್ (ಕಾಂಗ್ರೆಸ್)
ರಾಜಗೋಪಾಲ್ ರೆಡ್ಡಿ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಎಸ್‌ಸಿ ಹಾಗೂ ಎಸ್‌ಟಿ-1,54,000
ಒಕ್ಕಲಿಗ- 1,40,000
ಇತರೆ ಹಿಂದುಳಿದ ಸಮುದಾಯ -1,40,000
ಲಿಂಗಾಯತ- 55,000
ಬ್ರಾಹ್ಮಣ 14,000
28) ಆನೇಕಲ್ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಬಿ ಶಿವಣ್ಣ 113894ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಎ.ನಾರಾಯಣಸ್ವಾಮಿ 105267 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಹುಲ್ಲಳ್ಳಿ ಶ್ರೀನಿವಾಸ್ (ಬಿಜೆಪಿ)
ಬಿ.ಶಿವಣ್ಣ (ಕಾಂಗ್ರೆಸ್)
ಕೆ.ಪಿ.ರಾಜು(ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಎಸ್‌ಸಿ-ಎಸ್‌ಟಿ – 1,60,000
ಒಕ್ಕಲಿಗ – 83,000
ಅಲ್ಪ ಸಂಖ್ಯಾತ – 34,000
ಕುರುಬ 16,000
ಇತರೇ - 66,000
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಒಂದಾಗಿದೆ. ಇದನ್ನು ಬೆಂಗಳೂರು (ಗ್ರಾಮೀಣ) ಮತ್ತು ಬೆಂಗಳೂರು (ನಗರ) ಎಂದು ವಿಭಜಿಸಿ 1986 ರಲ್ಲಿ ಸ್ಥಾಪಿಸಲಾಯಿತು
.2007 ರಲ್ಲಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಭಜಿಸಲಾಯಿತು ಮತ್ತು ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕುಗಳೊಂದಿಗೆ ಪುನರ್ರಚಿಸಲಾಯಿತು, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆ 1 ವಿಭಾಗ, 4 ತಾಲೂಕುಗಳು, 17 ಹೋಬಳಿಗಳು, 952 ವಾಸಯೋಗ್ಯ ಮತ್ತು 131 ಜನನಿಬಿಡ ಗ್ರಾಮಗಳು, 105 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಬೆಂಗಳೂರು ನಗರದ ಸಾಮೀಪ್ಯವು ಜಿಲ್ಲೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಹೊಂದಿದೆ, ಗಣನೀಯ ಪ್ರಮಾಣದ ದೈನಂದಿನ ಜನಸಂಖ್ಯೆಯನ್ನು ಹೊಂದಿದೆ. SEZ ಗಳ ಆಗಮನದಿಂದ ಪ್ರದೇಶ, ಸೇವೆ ಮತ್ತು IT ಉದ್ಯಮಗಳು ಹೆಚ್ಚುತ್ತಿವೆಯಾದರೂ ಗ್ರಾಮೀಣ ಜನಸಂಖ್ಯೆಯು ಹೆಚ್ಚಾಗಿ ಕೃಷಿಕರಾಗಿದ್ದಾರೆ. ದೇವನಹಳ್ಳಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 95 ಬಿಲಿಯನ್ ದೇವನಹಳ್ಳಿ ಕೈಗಾರಿಕಾ ಪಾರ್ಕ್ ಆಗಿದೆ. 2011 ರ ಜನಗಣತಿಯ ಪ್ರಕಾರ, ಜಿಲ್ಲೆಯ ಒಟ್ಟು ಜನಸಂಖ್ಯೆಯು 9,90,923 ಆಗಿದೆ, ಇದರಲ್ಲಿ 21.65% ನಗರ ಪ್ರದೇಶವಾಗಿದೆ ಮತ್ತು ಪ್ರತಿ ಕಿಮೀ 2 ಗೆ 309 ವ್ಯಕ್ತಿಗಳ ಜನಸಂಖ್ಯಾ ಸಾಂದ್ರತೆಯಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ.22.5ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ.
1 ) ಹೊಸಕೋಟೆ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎಂ.ಟಿ.ಬಿ.ನಾಗರಾಜ 98824 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಶರತ ಬಚ್ಚೇಗೌಡ 91227 ಮತಗಳನ್ನು ಪಡೆದಿದ್ದರು
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಎಂ.ಟಿ.ಬಿ.ನಾಗರಾಜ್ (ಬಿಜೆಪಿ )
ಶರತ್ ಬಚ್ಚೆಗೌಡ(ಕಾಂಗ್ರೆಸ್)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಪರಿಶಿಷ್ಟ ಜಾತಿ/ಪಂಗಡ- 58883
ಒಕ್ಕಲಿಗರು- 45826
ಮುಸ್ಲಿಮರು- 45642
ಕುರುಬರು -30132
ಲಿಂಗಾಯತರು- 18442
2 ) ದೇವನಹಳ್ಳಿ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಎಲ್.ಎನ್.ನಾರಾಯಣಸ್ವಾಮಿ 86966 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ವೆಂಕಟಸ್ವಾಮಿ 69956 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಪಿಳ್ಳ ಮುನಿಶಾಮಪ್ಪ (ಬಿಜೆಪಿ)
ಕೆ.ಎಚ್.ಮುನಿಯಪ್ಪ(ಕಾಂಗ್ರೆಸ್)
ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಎಸ್‌ಸಿ ಎಸ್‌ಟಿ- 74662,
ಒಕ್ಕಲಿಗ 45,723
ಕುರುಬರು -16,231
ಮುಸ್ಲಿಮರು -8723
ಲಿಂಗಾಯತರು -7233
ವಿಶ್ವಕರ್ಮ ಸಮುದಾಯದ-2621
3) ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿ.ವೆಂಕಟರಮಣಯ್ಯ 73225 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.ಇನ್ನೂ ಇವರ ಹತ್ತಿರದ ಪ್ರತಿಸ್ಪರ್ಧಿ ಜೆಡಿಎಸ್ ನ ಬಿ.ಮುನೇಗೌಡ 63280 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:
ಧೀರಜ್ ಮುನಿರಾಜು (ಬಿಜೆಪಿ)
ಟಿ.ವೆಂಕಟರಮಣಯ್ಯ (ಕಾಂಗ್ರೆಸ್)
ಬಿ.ಮುನೇಗೌಡ (ಜೆಡಿಎಸ್)
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಎಸ್‌ಸಿ, ಎಸ್ಟಿ ಸಮುದಾಯ- 46500,
ಒಕ್ಕಲಿಗರು- 43,000
ಲಿಂಗಾಯತರು-26278
ಕುರುಬರು ಮತ್ತು ದೇವಾಂಗದವರು -ತಲಾ 15000
4 ) ನೆಲಮಂಗಲ ವಿಧಾನಸಭಾ ಕ್ಷೇತ್ರ
ಈ ಕ್ಷೇತ್ರದಿಂದ ಜೆಡಿಎಸ್ ನ ಡಾ.ಕೆ.ಶ್ರೀನಿವಾಸಮೂರ್ತಿ 69277 ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದರು. ಇನ್ನೂ ಇವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಆರ್.ನಾರಾಯಣಸ್ವಾಮಿ 44956 ಮತಗಳನ್ನು ಪಡೆದಿದ್ದರು.
2023ರ ವಿಧಾನಸಭೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು
ಸಪ್ತಗಿರಿ ನಾಯಕ್ (ಬಿಜೆಪಿ)
ಶ್ರೀನಿವಾಸಯ್ಯ ಎನ್ (ಕಾಂಗ್ರೆಸ್)
ಡಾ.ಶ್ರೀನಿವಾಸ್ ಮೂರ್ತಿ (ಜೆಡಿಎಸ್ )
ಕ್ಷೇತ್ರದಲ್ಲಿ ಜಾತಿವಾರು ಜನಸಂಖ್ಯೆ
ಪರಿಶಿಷ್ಟ ಜಾತಿ/ಪಂಗಡ- 68000
ಲಿಂಗಾಯತರು- 40000
ಒಕ್ಕಲಿಗರು- 35000
ವಿಶ್ವಕರ್ಮರು- 20000
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.