ನವದೆಹಲಿ: ಜಮ್ಮು, ಶ್ರೀನಗರ, ಲೇಹ್, ಅಮೃತಸರ್, ಪಠಾನ್ಕೋಟ್, ಗಗ್ಗಲ್, ಡೆಹ್ರಾಡೂನ್ ಮತ್ತು ಚಂಡೀಗಢ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರವನ್ನು ಬುಧವಾರ ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ.
ಜಮ್ಮು ಕಾಶ್ಮೀರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರ, ಶ್ರೀನಗರ, ಲೇಹ್, ಪಠಾಣ್‌ಕೋಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮುಂಬೈ ವಿಮಾನನಿಲ್ದಾಣವು ಜಮ್ಮು, ಶ್ರೀನಗರ, ಅಮೃತಸರ್ ಮತ್ತು ಚಂಡೀಗಢದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ 4 ವಲಯಗಳ ವಿಮಾನಗಳನ್ನು ರದ್ದುಪಡಿಸಿದೆ.
ಪರಿಣಾಮವಾಗಿ, ಈ ವಿಮಾನ ನಿಲ್ದಾಣಗಳಲ್ಲಿ ಯಾವುದೇ ವಾಣಿಜ್ಯ ಕಾರ್ಯಾಚರಣೆ ನಡೆಯುವುದಿಲ್ಲ. ಜಮ್ಮು, ಲೇಹ್ ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಿಗೆ ಬರುತ್ತಿದ್ದ ವಿಮಾನಗಳನ್ನು ಅವುಗಳು ಹೋರಾಟ ನಿಲ್ದಾಣಗಳಿಗೆ ವಾಪಸ್ ಕಳುಹಿಸಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಯಾನ ನಿರ್ಬಂಧದ ಕಾರಣದಿಂದಾಗಿ ಅಮೃತಸರ್, ಶ್ರೀನಗರ, ಚಂಡೀಗಢ ಮತ್ತು ಜಮ್ಮುಗಳಿಗೆ ಹೋಗುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನ ಹಾರಾಟದ ಸ್ಥಿತಿಗತಿಗಳನ್ನು ಪರಿಶೀಲಿಸುವಂತೆ ಏರ್ ವಿಸ್ತಾರ ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ವಿನಂತಿಸಿದೆ.
#TravelUpdate. Due to airspace restrictions, flights to and from Amritsar, Srinagar, Chandigarh and Jammu are currently on hold. Customers are requested to check flight status before commencing their journey to the airport. (1/2)
— Vistara (@airvistara) February 27, 2019