VIDEO: ಭಾರತದ ಈ ರೈಲು ನಿಲ್ದಾಣದಲ್ಲಿದೆ ಏರ್ಪೋರ್ಟ್ ರೀತಿಯ ಸೌಲಭ್ಯ!

ಮೂಲಗಳ ಪ್ರಕಾರ, ಮಂಡುದಿಹ್ ರೈಲು ನಿಲ್ದಾಣದ ಹೆಸರು ಶೀಘ್ರದಲ್ಲೇ ಬದಲಾಗಲಿದೆ. ಮಂಡುದಿಹ್ ರೈಲು ನಿಲ್ದಾಣದ ಹೆಸರನ್ನು ಬನಾರಸ್ ಎಂದು ಬದಲಾಯಿಸಬಹುದು ಎನ್ನಲಾಗಿದೆ.

Last Updated : Feb 25, 2019, 10:40 AM IST
VIDEO:  ಭಾರತದ ಈ ರೈಲು ನಿಲ್ದಾಣದಲ್ಲಿದೆ ಏರ್ಪೋರ್ಟ್ ರೀತಿಯ ಸೌಲಭ್ಯ! title=

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಸತ್ ಕ್ಷೇತ್ರದ ವಾರಣಾಸಿಯ ಪುನರುಜ್ಜೀವನ ನಿರಂತರವಾಗಿ ನಡೆಯುತ್ತಿದೆ. ಬನಾರಸ್ ಅನ್ನು ಪುನರ್ ವಿನ್ಯಾಸ ಗೊಳಿಸುವ ಪ್ರಯತ್ನದಲ್ಲಿ ಸಾವಿರಾರು ಕೋಟಿ ಮೌಲ್ಯದಲ್ಲಿ ಹಲವು ಯೋಜನೆಗಳು ವೇಗವಾಗಿ ನಡೆಯುತ್ತಿವೆ. ಇತ್ತೀಚಿಗೆ ಇದನ್ನು ಬಿಂಬಿಸುವ ಮತ್ತೊಂದು ಉದಾಹರಣೆ ಕಂಡು ಬಂದಿದೆ. 

ವಾಸ್ತವವಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ವಾರಣಾಸಿಯ ಮಂಡುದಿಹ್ ರೈಲು ನಿಲ್ದಾಣದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಚಿವರು ಮಂಡುದಿಹ್ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣಕ್ಕೆ ಹೋಲಿಸಿದ್ದಾರೆ. ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳಿಗಾಗಿ ವಿಶ್ವದರ್ಜೆಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂಪಾಸಿಬಲ್ ಈಗ ಪಾಸಿಬಲ್:
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್, ವಾರಣಾಸಿಯ ಮಂಡುದಿಹ್ ರೈಲು ನಿಲ್ದಾಣ ಐದು ವರ್ಷಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಇಂಪಾಸಿಬಲ್ ಈಗ ಪಾಸಿಬಲ್ ಆಗಿದೆ. ಈ ರೈಲ್ವೆ ನಿಲ್ದಾಣದಲ್ಲಿನ ಸೌಕರ್ಯ ದೇಶಾದ್ಯಂತ ಎಲ್ಲಾ ರೈಲು ನಿಲ್ದಾಣಗಳಿಗೂ ಲಭ್ಯವಾಗುವ ಸಮಯ ಸನಿಹದಲ್ಲಿದೆ. ವಾರಣಾಸಿಯ ಮಂಡುದಿಹ್ ರೈಲು ನಿಲ್ದಾಣ ಪ್ರಯಾಣಿಕರಿಗೆ ಶುಚಿತ್ವ ಮತ್ತು ವಿಶ್ವದರ್ಜೆಯ ಸೌಕರ್ಯಗಳೊಂದಿಗೆ ಸುಂದರವಾದ ಅನುಭವವನ್ನು ಒದಗಿಸುತ್ತಿದೆ ಎಂದು ಬರೆದಿದ್ದಾರೆ. ಕಾಶಿ ಪ್ರಾಚೀನ ವೈಭವವನ್ನು ಪುನರುಜ್ಜೀವನಗೊಳಿಸುವ ಈ ನಿಲ್ದಾಣವು ದೇಶದ ಅತ್ಯಂತ ಸುಂದರವಾದ ನಿಲ್ದಾಣಗಳಲ್ಲಿ ಒಂದಾಗಿದೆ.

ವಾಸ್ತವವಾಗಿ, ಇದು ಇತ್ತೀಚೆಗೆ ಪ್ರಾರಂಭವಾದ ಮಂಡುದಿಹ್ ರೈಲು ನಿಲ್ದಾಣದ ದ್ವಿತೀಯ ಪ್ರವೇಶದ್ವಾರವಾಗಿದೆ. ಅದೇ ಸಮಯದಲ್ಲಿ, ಮಂಡುದಿಹ್ ರೈಲ್ವೆ ನಿಲ್ದಾಣದ ಹೆಸರನ್ನು ಶೀಘ್ರದಲ್ಲೇ ಬದಲಾಯಿಸಬಹುದು ಎಂದು ಮೂಲಗಳು ತಿಳಿಸಿವೆ. ಮಂಡುದಿಹ್ ರೈಲು ನಿಲ್ದಾಣದ ಹೆಸರನ್ನು ಬನಾರಸ್ ಎಂದು ಬದಲಾಯಿಸಬಹುದು ಎಂದು ಹೇಳಲಾಗಿದೆ.
 

Trending News