Fat Reducing Tips: ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ, ಹೊಟ್ಟೆ ಬೊಜ್ಜು ಕರಗಿಸಿ!

Belly Fat Reducing Tips: ಪ್ರತಿಯೊಬ್ಬ ವ್ಯಕ್ತಿಯು ಸದೃಢ ಮತ್ತು ಆರೋಗ್ಯಕರವಾಗಿರಲು ಬಯಸುತ್ತಾನೆ. ಆದರೆ ಕೆಲವರು ತಮ್ಮ ಬೊಜ್ಜಿನ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿರುತ್ತಾರೆ . ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಯಾವ ವ್ಯಾಯಾಮಗಳನ್ನು ಮಾಡಬೇಕು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.   

Written by - Nitin Tabib | Last Updated : May 1, 2023, 07:01 PM IST
  • ಅಂದಹಾಗೆ, ದೇಹದ ಯಾವುದೇ ಭಾಗದಲ್ಲಿ ಸಂಗ್ರಹವಾದ ಕೊಬ್ಬು ನಿಮ್ಮ ಲುಕ್ ಹಾಳು ಮಾಡುತ್ತದೆ ಎಂದರೆ,
  • ಅದು ನಿಮ್ಮ ಹೊಟ್ಟೆಭಾಗದ ಕೊಬ್ಬು, ಹೀಗಾಗಿ ಒಂದು ವೇಳೆ ನೀವೂ ಕೂಡ ಹೊಟ್ಟೆ ಭಾಗದ ಕೊಬ್ಬಿನಿಂದ ತೊಂದರೆಗೊಳಗಾಗಿದ್ದರೆ
  • ಮತ್ತು ಅದನ್ನು ತೊಡೆದುಹಾಕಲು ಬಯಸಿದರೆ, ನೀವು ಮನೆಯಲ್ಲಿ ಕೆಲವು ವ್ಯಾಯಾಮಗಳನ್ನು ಮಾಡಬಹುದು.
Fat Reducing Tips: ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ, ಹೊಟ್ಟೆ ಬೊಜ್ಜು ಕರಗಿಸಿ! title=
ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಸಲಹೆಗಳು!

Belly Fat Reducing Tips: ಪ್ರತಿಯೊಬ್ಬ ವ್ಯಕ್ತಿಯು ಸದೃಢ ಮತ್ತು ಆರೋಗ್ಯಕರವಾಗಿರಲು ಬಯಸುತ್ತಾನೆ. ಆದರೆ ಕೆಲವರು ತಮ್ಮ ಬೊಜ್ಜಿನ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿರುತ್ತಾರೆ. ಅಂದಹಾಗೆ, ದೇಹದ ಯಾವುದೇ ಭಾಗದಲ್ಲಿ ಸಂಗ್ರಹವಾದ ಕೊಬ್ಬು ನಿಮ್ಮ ಲುಕ್ ಹಾಳು ಮಾಡುತ್ತದೆ ಎಂದರೆ, ಅದು ನಿಮ್ಮ ಹೊಟ್ಟೆಭಾಗದ ಕೊಬ್ಬು, ಹೀಗಾಗಿ ಒಂದು ವೇಳೆ ನೀವೂ ಕೂಡ ಹೊಟ್ಟೆ ಭಾಗದ ಕೊಬ್ಬಿನಿಂದ ತೊಂದರೆಗೊಳಗಾಗಿದ್ದರೆ ಮತ್ತು ಅದನ್ನು ತೊಡೆದುಹಾಕಲು ಬಯಸಿದರೆ, ನೀವು ಮನೆಯಲ್ಲಿ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಯಾವ ವ್ಯಾಯಾಮಗಳನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ವ್ಯಾಯಾಮಗಳು
ಬರ್ಪಿ ವ್ಯಾಯಾಮ

ಹೊಟ್ಟೆ ಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ನೀವು ಕಡಿಮೆ ಮಾಡಲು ಬಯಸುತ್ತಿದ್ದಾರೆ ನೀವು ಬರ್ಫಿ ವ್ಯಾಯಾಮವನ್ನು ಮಾಡಬಹುದು. ಬರ್ಫಿ ವ್ಯಾಯಾಮವು ನಿಮ್ಮ ಕೋರ್ ಮತ್ತು ಭುಜಗಳನ್ನು ಬಲಪಡಿಸುತ್ತದೆ. ಇದರ ಜೊತೆಗೆ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ. ಈ ವ್ಯಾಯಾಮ ಮಾಡಲು, ನೀವು ನೇರವಾಗಿ ನಿಂತುಕೊಳ್ಳಿ, ಇದರ ನಂತರ, ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ನಿಮ್ಮ ಎರಡೂ ಕೈಗಳನ್ನು ನೆಲದ ಮೇಲೆ ಇರಿಸಿ. ಈಗ ಕಾಲುಗಳನ್ನು ಹಿಂಭಾಗದಿಂದ ಸರಿಸಿ. ಇದರ ನಂತರ, ಪಾದಗಳನ್ನು ಮತ್ತೆ ಕೈಗಳ ಹತ್ತಿರ ತನ್ನಿ. ಇದರ ಜಿಗಿದು ಎದ್ದು ನಿಲ್ಲಿ, ಇದನ್ನು 10 ಬಾರಿ ಮಾಡಿ.

ಇದನ್ನೂ ಓದಿ-Health Tips: ಈ ಮೂರು ಕಾರಣಗಳಿಂದ ತುಂಬಾ ವಿಶೇಷವಾಗಿದೆ ಬ್ಲಾಕ್ ಕಾಫಿ ಸೇವನೆ!

ಬೋಸು ಬಾಲ್ ವ್ಯಾಯಾಮ
ಪ್ರತಿದಿನ ಬೋಸು ಬಾಲ್ ವ್ಯಾಯಾಮವನ್ನು ಮಾಡುವುದರಿಂದ, ನಿಮ್ಮ ಹೊಟ್ಟೆಯ ಕೊಬ್ಬನ್ನು ನೀವು ಸುಲಭವಾಗಿ ಕಡಿಮೆ ಮಾಡಬಹುದು. ಇದನ್ನು ಮಾಡಲು, ನಿಮಗೆ ಬೋಸು ಬಾಲ್ ಅಗತ್ಯವಿದೆ. ಈ ಸಮಯದಲ್ಲಿ, ಬೋಸು ಚೆಂಡನ್ನು ನೆಲದ ಮೇಲೆ ಇರಿಸಿ, ನಂತರ ನಿಮ್ಮ ಕಾಲುಗಳನ್ನು ನೇರಗೊಳಿಸಿ ಮತ್ತು ನಿಮ್ಮ ಕೈಗಳನ್ನು ಬೋಸು ಚೆಂಡಿನ ಬದಿಗಳಲ್ಲಿ ಇರಿಸಿ. ಈ ಸ್ಥಿತಿಯಲ್ಲಿ, ನಿಮ್ಮ ಪಾದಗಳ ಕಾಲ್ಬೆರಳುಗಳು ನೆಲದ ಮೇಲೆ ಇರಬೇಕು, ಈ ಸಮಯದಲ್ಲಿ, ನಿಮ್ಮ ಇಡೀ ದೇಹವು ಮೇಲಕ್ಕೆ ಉಳಿಯುತ್ತದೆ, ನಂತರ ನೀವು ಪುಷ್ಅಪ್ಗಳನ್ನು ಮಾಡಬಹುದು, ಇದು ಹೊಟ್ಟೆ ಭಾಗದ ಕೊಬ್ಬನ್ನು ತೊಡೆದುಹಾಕುತ್ತದೆ.

ಇದನ್ನೂ ಓದಿ-Bad Cholesterol: ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯ ಸ್ಥಿತಿಗೆ ತರಲು ಇಂದಿನಿಂದಲೇ ಈ ತರಕಾರಿಗಳ ಸೇವನೆ ಆರಂಭಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News