ಬೆಂಗಳೂರು: ಸೂರ್ಯ ಕಿರಣ್ ಏರೋಬ್ಯಾಟಿಕ್ಸ್ ತಂಡದ ಎರಡು ವಿಮಾನಗಳು ಮಂಗಳವಾರ ರಿಹರ್ಸಲ್ ವೇಳೆ ಅಪಘಾತಕ್ಕೀಡಾಗಿದ್ದು, ಪೈಲೆಟ್ ಗಳಿಬ್ಬರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
#WATCH Two aircraft of the Surya Kiran Aerobatics Team crash at the Yelahanka airbase in Bengaluru, during rehearsal for #AeroIndia2019. More details awaited. pic.twitter.com/kX0V5O0n6R
— ANI (@ANI) February 19, 2019
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಶೋನ ರಿಹರ್ಸಲ್ ವೇಳೆ ಎರಡು ಸೂರ್ಯಕಿರಣ ಜೆಟ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎರಡೂ ಲಘು ವಿಮಾನಗಳು ಹೊತ್ತಿ ಉರಿದಿವೆ.
ನಾಳೆಯಿಂದ ಪ್ರಾರಂಭವಾಗಲಿರುವ ಏರ್ ಶೋ:
'ಏರೋ ಇಂಡಿಯಾ 2019' ಫೆ.20 ರಿಂದ 24ರವರೆಗೆ ಭಾರತದ ಯುದ್ಧ ಹಾಗೂ ನಾಗರೀಕ ಸೇವಾ ವಿಮಾನಗಳನ್ನು ಸೇರಿದಂತೆ ವಿದೇಶಿ ವಿಮಾನಗಳು ಬಾನಂಗಳದಲ್ಲಿ ಶಕ್ತಿ ಪ್ರದರ್ಶನ ನಡೆಯಲಿವೆ.
ಬುಧವಾರದಿಂದ ಆರಂಭಗೊಳ್ಳಲಿರುವ ಏರ್ ಶೋನಲ್ಲಿ 40ಕ್ಕೂ ಹೆಚ್ಚು ದೇಶೀಯ ಮತ್ತು ವಿದೇಶಿ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಇನ್ನುಳಿದ 17 ವಿಮಾನಗಳನ್ನು ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ. ಪ್ರದರ್ಶನದಲ್ಲಿ ನಿತ್ಯ ಬೆಳಗ್ಗೆ 10 ರಿಂದ 12 ಹಾಗೂ 2 ರಿಂದ 5 ಗಂಟೆ ವರೆಗೂ ವಿಮಾನ ಹಾರಾಟ ನಡೆಸಲಿವೆ.